For Quick Alerts
  ALLOW NOTIFICATIONS  
  For Daily Alerts

  'ಜಗ್ಗುದಾದಾ' ಸಡಗರ: ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು

  By Suneetha
  |

  ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಮತ್ತೆ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. 'ಜಗ್ಗುದಾದಾ' ಎಂಬ ಪಕ್ಕಾ ಕಾಮಿಡಿ ಮತ್ತು ಫ್ಯಾಮಿಲಿ ಮನರಂಜನಾತ್ಮಕ ಚಿತ್ರದ ಮೂಲಕ ಇವತ್ತು (ಜೂನ್ 10, ಶುಕ್ರವಾರ) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

  ಕೆಲವೆಡೆ ಬೆಳ್ಳಂ-ಬೆಳಗ್ಗೆ 'ಜಗ್ಗುದಾದಾ' ಚಿತ್ರದ ಶೋ ಆರಂಭವಾಗಿದ್ದು, ಅಭಿಮಾನಿಗಳು ಟಿಕೆಟ್ ಕೊಳ್ಳುವ ಭರದಲ್ಲಿ ಚಿತ್ರಮಂದಿರಗಳ ಬಳಿ ನೂಕು-ನುಗ್ಗಲಾಗಿದೆ. ಅಲ್ಲದೇ ಕೆಲವು ಕಡೆ ಚಿತ್ರಮಂದಿರಗಳ ತಾಂತ್ರಿಕ ದೋಷದಿಂದ ಸಿನಿಮಾ ಪ್ರದರ್ಶನಕ್ಕೆ ಅಡೆ-ತಡೆ ಉಂಟಾದ ಕಾರಣ ಅಭಿಮಾನಿಗಳು ರೊಚ್ಚಿಗೆದ್ದ ಪ್ರಸಂಗಗಳು ಮುಂಜಾನೆ ನಡೆದಿದೆ.['ಜಗ್ಗುದಾದಾ' ಫಸ್ಟ್ ಡೇ ಫಸ್ಟ್ ಶೋ ನೋಡಲು ನೀವು ರೆಡಿನಾ?]

  ಇನ್ನು ದರ್ಶನ್ ಅವರ ಬೃಹತ್ ಕಟೌಟ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಹೂವಿನ ಮಳೆಗರೆದಿದ್ದಾರೆ. ಒಟ್ನಲ್ಲಿ ದಾದಾ ದರ್ಶನ್ ಅವರ ಸಿನಿಮಾ ಬಿಡುಗಡೆಯನ್ನು ಪಟಾಕಿ ಸಿಡಿಸಿ ಹಬ್ಬ ಆಚರಿಸಿದಂತೆ ಸಂಭ್ರಮದಿಂದ ಆಚರಿಸಿ ದರ್ಶನ್ ಅವರನ್ನು ತೆರೆಗೆ ಬರ ಮಾಡಿಕೊಂಡಿದ್ದಾರೆ. ಚಿತ್ರಮಂದಿರಗಳ ಬಳಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡ ದರ್ಶನ್ ಅವರು ಮಾತ್ರ ಆರಾಮಾಗಿ ಮೈಸೂರಿನಲ್ಲಿ ಕುಳಿತಿದ್ದಾರೆ.['ಜಗ್ಗೂದಾದಾ' ದರ್ಶನ್ ಯಾಕೆ ಹೀಗ್ಮಾಡ್ತಿದ್ದಾರೆ?]

  ಅಭಿಮಾನಿಗಳ ಸಂಭ್ರಮ-ಸಡಗರ ಮತ್ತು ಫಸ್ಟ್ ಶೋ ನೋಡಿದ ಅಭಿಮಾನಿಗಳ ಮತ್ತು ಸಿನಿಪ್ರಿಯರ ಮೊದಲ ಟ್ವಿಟ್ಟರ್ ವಿಮರ್ಶೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

  ಗೇಟ್ ಮುರಿದ ಅಭಿಮಾನಿಗಳು

  ಗೇಟ್ ಮುರಿದ ಅಭಿಮಾನಿಗಳು

  ವೆಂಕಟೇಶ್ವರ ಥಿಯೇಟರ್ ನಲ್ಲಿ ತಾಂತ್ರಿಕ ದೋಷದಿಂದ ಚಿತ್ರದ ಪ್ರದರ್ಶನ ಡಿಲೇ ಆಗಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು ಗಲಾಟೆ ಮಾಡಿ, ಥಿಯೇಟರ್ ನ ಗೇಟು ಮುರಿದು ಹಾಕಿದ್ದರು. ಇದೀಗ ಶೋ ಆರಂಭವಾಗಿದ್ದು, ಅಭಿಮಾನಿಗಳು ಸಿನಿಮಾ ನೋಡುತ್ತಿದ್ದಾರೆ.['ನಾನೀಗ ಫ್ಲಾಪ್ ಸ್ಟಾರ್' ಅಂತ ದರ್ಶನ್ ಯಾಕಂದ್ರು?]

  ಮೈಸೂರಿನಲ್ಲಿ ಬಿಯರ್ ಮಳೆ

  ಮೈಸೂರಿನಲ್ಲಿ ಬಿಯರ್ ಮಳೆ

  ಮೈಸೂರಿನ ಸಂಗಮ ಚಿತ್ರಮಂದಿರದ ಬಳಿ ದರ್ಶನ್ ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ಹೋಗಿದ್ದು, ಅಭಿಮಾನಿಗಳು ಕೈಯಲ್ಲಿ ಬಿಯರ್ ಬಾಟ್ಲಿ ಹಿಡಿದು ತಮಟೆ ಸದ್ದಿಗೆ ಮೈಯಲ್ಲಿ ಪರಿವೆ ಇಲ್ಲದಂತೆ ಕುಣಿಯುತ್ತಿದ್ದಾರೆ.

  ಸಂತೋಷ್ ಚಿತ್ರಮಂದಿರದಲ್ಲಿ ಬ್ಲ್ಯಾಕ್ ಟಿಕೆಟ್

  ಸಂತೋಷ್ ಚಿತ್ರಮಂದಿರದಲ್ಲಿ ಬ್ಲ್ಯಾಕ್ ಟಿಕೆಟ್

  ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಸಂತೋಷ್' ನಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿ ಇದೀಗ ಭರ್ಜರಿಯಾಗಿ ಬ್ಲ್ಯಾಕ್ ಟಿಕೆಟ್ ಮಾರಾಟವಾಗುತ್ತಿದೆ. ಬಾಲ್ಕನಿ 1500 ರೂಪಾಯಿ ಆದರೆ ನಾರ್ಮಲ್ 700 ರೂಪಾಯಿ. ಒಟ್ನಲ್ಲಿ ಭಾರಿ ಹಣ ತೆತ್ತು ಅಭಿಮಾನಿಗಳು 'ಜಗ್ಗುದಾದಾ' ಸಿನಿಮಾ ನೋಡುತ್ತಿದ್ದಾರೆ.

  'ಜಗ್ಗುದಾದಾ' ಕ್ರೇಜ್

  'ಜಗ್ಗುದಾದಾ' ಕ್ರೇಜ್

  'ಜಗ್ಗುದಾದಾ' ಕ್ರೇಜ್ ಇವಾಗ್ಲೆ ಶುರು ಅಗಿದ್ದು, ಅಭಿಮಾನಿಗಳು ತಲೆಯ ಮೇಲೆ 'ಜಗ್ಗುದಾದಾ' ಎಂದು ಬರೆಸಿಕೊಂಡಿದ್ದಾರೆ.

  ಮುಂಜಾನೆ 3 ಘಂಟೆಗೆ ಶೋ

  ಮುಂಜಾನೆ 3 ಘಂಟೆಗೆ ಶೋ

  ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ಮುಂಜಾನೆ 3 ಘಂಟೆಗೆ ಶೋ ಆರಂಭವಾಗಿದೆ. ಅಭಿಮಾನಿಗಳು ಟಿಕೆಟ್ ಸಿಕ್ಕ ಸಂಭ್ರಮದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪರಿ.

  ಕಿಚ್ಚ ಸುದೀಪ್ ಟ್ವೀಟ್

  'ದರ್ಶನ್ ಗೆ ಹಾಗೂ ಇಡೀ ಜಗ್ಗುದಾದಾ ತಂಡಕ್ಕೆ ನನ್ನ ಹೃದಯಪೂರ್ವಕ ಶುಭ ಹಾರೈಕೆಗಳು. ಸಿನಿಮಾ ಯಶಸ್ವಿ ಆಗಲಿ. ದೇವರ ಆಶೀರ್ವಾದ ನಿಮಗಿರಲಿ' ಎಂದು ಕಿಚ್ಚ ಸುದೀಪ್ ಅವರು ತಮ್ಮ ಕುಚಿಕು ದೋಸ್ತ್ ಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

  ಕ್ಲಾಸ್ ಮೇಕಿಂಗ್

  "ಫಸ್ಟ್ ಹಾಫ್ ಅದ್ಭುತ, ಸಂಫೂರ್ಣ ಫ್ಯಾಮಿಲಿ ಮನರಂಜನಾತ್ಮಕ ಚಿತ್ರ. ಟಾಪ್ ಕ್ಲಾಸ್ ಮೇಕಿಂಗ್, ಮತ್ತೆ ಮರಳಿದ ಬಾಕ್ಸಾಫೀಸ್ ಸುಲ್ತಾನ". ಇದು ಸಿನಿಲೋಕ ಟ್ವಿಟ್ಟರ್ ನಲ್ಲಿ ಹಾಕಿದ 'ಜಗ್ಗುದಾದಾ' ಟ್ವಿಟ್ಟರ್ ವಿಮರ್ಶೆ.

  ಎಸ್ ಶ್ಯಾಮ್ ಪ್ರಸಾದ್

  'ಜಗ್ಗುದಾದಾ' ಈಗ್ತಾನೆ ಸ್ಕೂಲ್ ಗೆ ಹೋಗ್ತಿದ್ದಾನೆ. ರವಿಶಂಕರ್ ಈಗಾಗಲೇ ತಾತ ಆಗಿದ್ದಾರೆ. ಇವರು ತಾತ ಅಥವಾ ಡಾನ್' ಅಂತ ವಿಮರ್ಶಕ ಶ್ಯಾಮ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

  ದರ್ಶನ್ ಅವರ 'ಜಗ್ಗುದಾದಾ' ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

  'ಜಗ್ಗುದಾದಾ' ಫಸ್ಟ್ ಶೋ ಕಂಪ್ಲೀಟ್

  ದಾವಣಗೆರೆಯಲ್ಲಿ ಫಸ್ಟ್ ಶೋ ಕಂಪ್ಲೀಟ್ ಆಗಿದೆ. ಪಕ್ಕಾ ಮಾಸ್ ಎಂಟರ್ ಟೈನ್ಮೆಂಟ್ ಜೊತೆಗೆ ಸಖತ್ ಕಾಮಿಡಿ ಪಂಚ್ ಇರೋ ಸಿನಿಮಾ. ಈಗಾಗಲೇ ಸೆಕೆಂಡ್ ಸೋ ಕೂಡ ಆರಂಭ ಆಗಿದೆ.

  ಜಾಗರಣೆ ಮಾಡಿದ ಅಭಿಮಾನಿಗಳು

  ನಿನ್ನೆ ರಾತ್ರಿಯಿಂದಲೇ ಥಿಯೇಟರ್ ನ ಹೊರಗಡೆ ವರಾಂಡದಲ್ಲಿ ದರ್ಶನ್ ಅವರ ಅಭಿಮಾನಿಗಳು ಮಲಗಿ ಕೆಲವರು ಕುಳಿತೇ ನಿದ್ದೆ ಮಾಡಿದರು.

  ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್

  ಈಗಾಗಲೇ ಎಲ್ಲಾ ಕಡೆ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ಸಿಗದ ಅಭಿಮಾನಿಗಳು ಬ್ಲ್ಯಾಕ್ ಟಿಕೆಟ್ ಮೊರೆ ಹೋಗಿದ್ದಾರೆ.

  English summary
  Kannada Movie 'Jaggu Dada' directed by Raghavendra Hegde released today (June 10) and got overwhelming response all over Karnataka. Kannada Actor Darshan, Kannada Actor Srujan Lokesh, Actress Deeksha Seth in the lead role. Here is the first day first show craze, tweets, audience response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X