»   » 'ಅಭಿಮಾನ'ದಿಂದ ಬರುತ್ತಿದ್ದ ಪತ್ರಗಳಿಗೆ ವಿಷ್ಣುದಾದಾ ಕೊಡುತ್ತಿದ್ದ ಗೌರವ ನೋಡಿ

'ಅಭಿಮಾನ'ದಿಂದ ಬರುತ್ತಿದ್ದ ಪತ್ರಗಳಿಗೆ ವಿಷ್ಣುದಾದಾ ಕೊಡುತ್ತಿದ್ದ ಗೌರವ ನೋಡಿ

Posted By: ಜನಾರ್ಧನ ರಾವ್ ಸಾಳಂಕೆ
Subscribe to Filmibeat Kannada

'ನಾಗರಹಾವು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರತಿಭಾನ್ವಿತ ಮತ್ತು ಸ್ಪುರದ್ರೂಪಿ ನಟ ವಿಷ್ಣುವರ್ಧನ್ ಪರಿಚಯವಾದರು. ಚಿತ್ರ ಅಭೂತಪೂರ್ವ ಯಶಸ್ಸು ಕಂಡ ಮೇಲೆ ದಾದಾ ಅವರು ಎಲ್ಲರ ಮನೆ ಮಾತಾದರು. ಹೀರೋ ಅಂದ್ರೆ ವಿಷ್ಣು ತರಹ ಇರಬೇಕು ಎಂಬ ಮಾತು ಚಾಲ್ತಿಗೆ ಬಂದಿತು. ಹೆಣ್ಣು ಮಕ್ಕಳಂತೂ ತಮ್ಮ ಫೋಟೋ, ಸ್ವವಿವರ ಮತ್ತು ಜಾತಕ ಕಳುಹಿಸಿ ಮದುವೆ ಪ್ರಸ್ತಾಪ ಮಾಡಲು ಶುರು ಮಾಡಿದರು.

ವಿಷ್ಣು ಅವರಿಗೆ ಅಭಿಮಾನಿಗಳಿಂದ ಸಹಸ್ರಾರು ಅಭಿಮಾನದ ಮತ್ತು ಪ್ರೇಮದ ಪತ್ರಗಳು ಪೋಸ್ಟ್ ಮುಖಾಂತರ ಮನೆಗೆ ತಲುಪುತ್ತಿತ್ತು. ಪ್ರತಿದಿನ ಪೋಸ್ಟ್ ಮ್ಯಾನ್ ಪತ್ರಗಳನ್ನು ಒಂದು ಮೂಟೆಯಲ್ಲಿ ಕಟ್ಟಿ ವಿಷ್ಣು ಮನೆಗೆ ತಲುಪಿಸುತ್ತಿದ್ದರು.

ಹಾಗಿದ್ರೆ, ಈ ಪತ್ರಗಳನ್ನ ಸಾಹಸ ಸಿಂಹ ಏನು ಮಾಡುತ್ತಿದ್ದರು? ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದ ಪತ್ರಗಳಿಗೆ ದಾದಾ ಕೊಡುತ್ತಿದ್ದ ಗೌರವ ಎಂಥದ್ದು? ಎಂದು ತಿಳಿಯಲು ಮುಂದೆ ಓದಿ.....

ಮನೆಗೆ ಬಂದ ತಕ್ಷಣ ಪತ್ರ ಓದುತ್ತಿದ್ದರು

ಹೀಗೆ ಅಭಿಮಾನಿಗಳಿಂದ ಬಂದ ಪತ್ರಗಳನ್ನು ವಿಂಗಡಣೆ ಮಾಡುವುದಕ್ಕಾಗಿಯೇ ಒಬ್ಬರನ್ನು ನೇಮಿಸಲಾಗಿತ್ತು. ಸಂಜೆ ಚಿತ್ರೀಕರಣ ಮುಗಿಸಿ ಮನೆಗೆ ಬಂದ ನಂತರ ಮೂಟೆಯನ್ನು ತೆರೆದು ಪತ್ರಗಳ ಮೇಲೆ ಕಣ್ಣಾಡಿಸುತ್ತಿದ್ದರು. ಇದನ್ನೆಲ್ಲಾ ಓದುವುದೇ ಕೆಲವು ಗಂಟೆಗಳು ಹಿಡಿಯುತಿತ್ತು. ಮದುವೆಯ ನಂತರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಸಹ ಪತ್ರ ವಿಂಗಡಣೆ ಮಾಡುತ್ತಿದ್ದರು.

ಡಾ.ವಿಷ್ಣು ಕಾರಿನಲ್ಲಿದ್ದ 'ಬಣ್ಣ ಬಣ್ಣದ ಕವರ್'ಗಳ ರಹಸ್ಯ ಇಲ್ಲಿದೆ

ಅಭಿಮಾನಕ್ಕೆ ವಿಷ್ಣು ಕೊಡುತ್ತಿದ್ದ ಪ್ರತಿಕ್ರಿಯೆ ನೋಡಿ

ಮನೆಗೆ ಬರುತ್ತಿದ್ದ ಪತ್ರಗಳಿಗೆ ಉತ್ತರವಾಗಿ ತನ್ನ ಫೋಟೊ ಮೇಲೆ "ಪ್ರೇಮ ಪ್ರೀತಿ ನನ್ನುಸಿರು" ಎಂದು ಹಸ್ತಾಕ್ಷರ ಮಾಡಿ ಅಭಿಮಾನಿಗಳಿಗೆ ಕಳುಹಿಸಿ ಕೊಡುತ್ತಿದ್ದರು. ಕೆಲವರಿಗೆ ತಾವು ಮತ್ತು ಭಾರತಿ ಜೊತೆಯಾಗಿರುವ ಫೋಟೊ ಸಹ ಕಳುಹಿಸುತ್ತಿದ್ದರು.

ಡಾ.ವಿಷ್ಣುವರ್ಧನ್ ರವರನ್ನ 'ಹೃದಯವಂತ' ಅನ್ನೋದು ಈ ಕಾರಣಕ್ಕೆ.!

ಅಭಿಮಾನಿಗಳಿಗೆ ಎಂದು ನಿರಾಸೆ ಮಾಡುತ್ತಿರಲಿಲ್ಲ

ಕೆಲವೊಮ್ಮೆ ಆತ್ಮೀಯರು ವಿಷ್ಣು ಅವರನ್ನು "ವಿಷ್ಣು ಶಾಟ್ ಮುಗಿಸಿ ಬಂದಿದ್ದೀಯಾ. ವಿಶ್ರಾಂತಿ ತೆಗೆದುಕೋ. ಅದನ್ನು ಬಿಟ್ಟು ಈ ಪತ್ರಗಳ ರಾಶಿ ಇಟ್ಟುಕೊಂಡು ರಾತ್ರಿ ಹೊತ್ತು ಕುಳಿತು ಕೊಂಡಿದ್ದೀಯ" ಎನ್ನುತ್ತಿದ್ದರು. ಆದರೂ ಸಹ ವಿಷ್ಣು ಬೇಸರಿಸಿಕೊಳ್ಳದೆ ಪತ್ರಗಳಿಗೆ ಸ್ಪಂದಿಸುತ್ತಿದ್ದರು. ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡಲು ಇಷ್ಟ ಪಡುತ್ತಿರಲಿಲ್ಲ.

"ಪ್ರೇಮ ಪ್ರೀತಿ ನನ್ನುಸಿರು" ಎಂದು ಹಾಡು ರಚನೆಯಾಯಿತು

1978 ರಲ್ಲಿ ತೆರೆಕಂಡ "ಸಿಂಗಪೂರದಲ್ಲಿ ರಾಜಾ ಕುಳ್ಳ" ಚಿತ್ರದ ಮೊದಲ ದೃಶ್ಯದ ಹಾಡಿನಲ್ಲಿ ವಿಷ್ಣು ಮತ್ತು ದ್ವಾರಕೀಶ್ "ಪ್ರೇಮ ಪ್ರೀತಿ ನನ್ನುಸಿರು" ಎಂಬ ಹಾಡನ್ನು ಹಾಡಿದ್ದಾರೆ. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಪ್ರಥಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಭಾಜನವಾಯಿತು. ಇಲ್ಲಿ ಇಬ್ಬರು ತಮ್ಮ ಪ್ರೇಮ, ಪ್ರೀತಿ ಮತ್ತು ಸ್ನೇಹದ ಪರಿಚಯ ಮಾಡಿಸುತ್ತಾರೆ.

ಡಾ.ವಿಷ್ಣುವರ್ಧನ್ ನೀಡಿದ್ದ ಬಿಸ್ಕತ್ ಪ್ಯಾಕೆಟ್ ಕಥೆ

ಅಭಿಮಾನಿಗಳ ಬಳಿ ಈಗಲೂ ಇದೆ

ಈಗಲೂ ಸಹ ವಿಷ್ಣುವರ್ಧನ್ ಅವರ ಹಳೆಯ ಅಭಿಮಾನಿಗಳ ಬಳಿ ಈ ಫೋಟೊಗಳನ್ನು ಮತ್ತು ಪತ್ರಗಳನ್ನ ನಾವು ಕಾಣಬಹುದು.

English summary
Janardhana Rao Salanke, Media Journalist and a hardcore fan of Dr.Vishnuvardhan, remembers beautiful memories of dr vishnuvardhan. ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ ಅವರು ಡಾ.ವಿಷ್ಣುವರ್ಧನ್ ಅವರ ಕೆಲವು ಅದ್ಭುತ ನೆನಪುಗಳನ್ನ ಹಂಚಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada