For Quick Alerts
  ALLOW NOTIFICATIONS  
  For Daily Alerts

  ಸದ್ಯದಲ್ಲೇ ತೆರೆಯಲ್ಲಿ ಯಶ್-ದೀಪಾ 'ಜಾನು' ಜಾದೂ

  |

  ರಾಕಿಂಗ್ ಸ್ಟಾರ್ ಯಶ್ ಹಾಗೂ ದೀಪಾ ಸನ್ನಿಧಿ ಅಭಿನಯದ 'ಜಾನು' ಚಿತ್ರ ಜೂನ್ 01, 2012 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರವನ್ನು ಹೆಸರಾಂತ ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೆಂದ್ರ ನಿರ್ಮಿಸಿದ್ದಾರೆ.

  ಮೇರಿ ಜಾನ್ ಎಂಬ ಅಡಿಬರಹ ಹೊಂದಿರುವ ಜಾನು ಚಿತ್ರದ ಹೆಚ್ಚಿನ ಭಾಗವನ್ನು ಉತ್ತರ ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದೆ. ಈ ಕಾರಣಕ್ಕೆ ನಾಯಕಿ ದೀಪಾ ಸನ್ನಿಧಿ, ಉತ್ತರ ಕರ್ನಾಟಕದ ಆಡುಭಾಷೆಯನ್ನು ಕಲಿತು ಈ ಚಿತ್ರದಲ್ಲಿ ಅದರಂತೆ ಮಾತನಾಡಿದ್ದಾರೆ.

  ಚಿಂಗಾರಿ ಚಿತ್ರದಲ್ಲಿ ಖಳನಟರಲ್ಲೊಬ್ಬರಾಗಿ ಅಭಿನಯಿಸಿ ಎಲ್ಲರ ಗಮನಸೆಳೆದಿದ್ದ ಮಧು ಗುರುಪಾದಸ್ವಾಮಿ, ಈ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ 'ವಿಲನ್ ರೋಲ್' ನಲ್ಲಿ ಅಭಿನಯಿಸಿದ್ದಾರೆ. ಅವರ ಪಾತ್ರ ಹಾಗೂ ಅಭಿನಯ ಎರಡೂ ಈ ಚಿತ್ರದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರೆಲ್ಲರ ಮೆಚ್ಚುಗೆ ಗಳಿಸಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.

  ಜಾಜು ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ನಿರ್ದೇಶಕ ಹಾಗೂ ಗೀತಸಾಹಿತಿ ಯೋಗರಾಜ್ ಭಟ್ ಬರೆದ 3 ಹಾಡುಗಳಿವೆ. ಹಾಡುಗಳೆಲ್ಲವೂ ವಿಭಿನ್ನವಾಗಿದ್ದು ಒಂದಕ್ಕಿಂತ ಇನ್ನೊಂದು ಚೆನ್ನಾಗಿದೆ. ಅಷ್ಟೇ ಅಲ್ಲದೇ ದೃಶ್ಯವೈಭವವೂ ಸೊಗಸಾಗಿದೆ ಎಂಬ ಮಾಹಿತಿ ಚಿತ್ರತಂಡದಿಂದ ಸಿಕ್ಕಿದೆ.

  'ಈ ಚಿತ್ರಕ್ಕೆ 3 ಹಾಡುಗಳನ್ನು ಬಹಳ ಗಡಿಬಿಡಿಯಲ್ಲಿ ಬರೆದಿದ್ದರೂ ಚಿತ್ರಕ್ಕೆ ಪೂರಕವಾಗಿದ್ದು ಪ್ರೇಕ್ಷಕರು ಮೆಚ್ಚವಂತೆ ಬಂದಿದೆ" ಎಂದಿದ್ದಾರೆ ಸ್ವತಃ ಯೋಗರಾಜ್ ಭಟ್. ಪ್ರೀತಮ್ ಗುಬ್ಬಿ ಈ ಮೊದಲು ನಿರ್ದೇಶಿಸಿದ್ದ ದುನಿಯಾ ವಿಜಯ್ ಹಾಗೂ ರಮ್ಯಾ ಜೋಡಿಯ 'ಜಾನೀ ಮೇರಾ ನಾಮ್' ಚಿತ್ರದಲ್ಲಿದ್ದ ಭಟ್ಟರ ಹಾಡು ಸಖತ್ ಫೇಮಸ್ ಆಗಿತ್ತು.

  ಒಟ್ಟಿನಲ್ಲಿ, ಯಶ್ ಜೊತೆ ದೀಪಾ ಸನ್ನಿಧಿ ಇದೇ ಮೊದಲ ಬಾರಿಗೆ ನಟಿಸಿರುವ ಜಾನೂ ಪ್ರೇಕ್ಷಕರೆದುರು ಪರೀಕ್ಷೆಗೆ ನಿಂತಿದೆ. ಈಗಾಗಲೇ ಯಶಸ್ವಿ ನಟ-ನಟಿಯರ ಸಾಲಿನಲ್ಲಿರುವ ಯಶ್ ಹಾಗೂ ದೀಪಾ, ಈ ಚಿತ್ರ ಗೆದ್ದರೆ ಇನ್ನೂ ಮೇಲಕ್ಕೇರುವುದರಲ್ಲಿ ಸಂದೇಹವಿಲ್ಲ. ಪ್ರೀತಮ್ ಗುಬ್ಬಿ ಕೂಡ ಕನ್ನಡದ ಯಶಸ್ವಿ ನಿರ್ದೇಶಕರ ಸಾಲಿನಲ್ಲಿ ಆಸೀನರಾಗಲು ತುದಿಗಾಲಲ್ಲಿದ್ದಾರೆ.

  ಪೂರ್ಣ ಪ್ರಮಾಣದ ಖಳನಟನಾಗಿ ಭಡ್ತಿ ಪಡೆದಿರುವ ಮಧು ಗುರುಪಾದ ಸ್ವಾಮಿ, ಈ ಚಿತ್ರದ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಜಾನು ಈ ಎಲ್ಲರ ನಿರೀಕ್ಷೆಗಳಿಗೆ ಉತ್ತರ ನೀಡಲಿದೆ. ಅಷ್ಟೇ ಅಲ್ಲ, ಪ್ರೇಕ್ಷಕರು ಕೂಡ ಪ್ರೀತಮ್ ಗುಬ್ಬಿ-ಯಶ್ ಜಾದೂ ನೋಡಲು ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie Janoo Releases on 01 June 2012 all over the Karnataka. Rock Star Yash and Deepa Sannidhi are in Lead Role. Preetham Gubbi Directed this. Jayanna and Bhogendra producers. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X