Don't Miss!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ?
ದುನಿಯಾ ವಿಜಯ್ ನಟಿಸಿದ ಸಿನಿಮಾಗಳಲ್ಲಿ 'ಜಯಮ್ಮನ ಮಗ' ಸಿನಿಮಾ ವಿಭಿನ್ನವಾಗಿ ನಿಲ್ಲುತ್ತೆ. ಈ ಸಿನಿಮಾ ವಿಜಯ್ ವೃತ್ತಿ ಬದುಕಿನಲ್ಲೇ ಹೊಸ ತಿರುವು ಕೊಟ್ಟ ಚಿತ್ರ. ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲೂ ಭರ್ಜರಿ ಪ್ರದರ್ಶನ ಕೊಟ್ಟ ಚಿತ್ರವಿದು. ಆದರೆ, ಈ ಸಿನಿಮಾದ ಕಥೆ ಬರೆಯೋಕೆ ಕೂತಾಗ, ಇಂತಹದ್ದೊಂದು ಕಲ್ಪನೆ ಇಂದಿನ ಜಮಾನದಲ್ಲೂ ಇರುವುದಕ್ಕೆ ಸಾಧ್ಯಾನಾ ಅಂತ ನಿರ್ದೇಶಕ ವಿಕಾಸ್‌ಗೆ ಅನಿಸಿತ್ತಂತೆ.
ಈ ಸಿನಿಮಾ ಶುರುವಾಗಿದ್ದು ಹೇಗೆ? 'ಜಯಮ್ಮನ ಮಗ' ಚಿತ್ರ ಒಪ್ಪಿಕೊಂಡಿದ್ದು ಯಾಕೆ? ಅಚಾನಕ್ ಆಗಿ ಸಿಕ್ಕಿದ ಅವಕಾಶ ಹಿಂಸೆ ಅಂತ ಅನಿಸಿದ್ದು ಯಾವಾಗ? ಅನ್ನುವುದನ್ನು ನಿರ್ದೇಶಕ ವಿಕಾಸ್ ವಿವರಿಸಿದ್ದಾರೆ. ಕಥೆ ಬರೆಯುವುದಕ್ಕೆ ಕೂತಾಗಾ ಯಾಕಾದರೂ ಈ ಸಿನಿಮಾವನ್ನು ಒಪ್ಪಿಕೊಂಡೆ ಅಂತ ಅನಿಸಿತ್ತಂತೆ. ಅದ್ಯಾಕೆ ಹಾಗನ್ನಿಸಿತ್ತು? ಆಗಲೇ ದುನಿಯಾ ವಿಜಯ್ ಒಳ್ಳೆ ನಿರ್ದೇಶಕ ಆಗ್ತಾನೇ ಅಂತ ವಿಕಾಸ್‌ಗೆ ಅನಿಸಿದ್ದು ಯಾಕೆ? ಅನ್ನುವ ಇಂಟ್ರೆಸ್ಟಿಂಗ್ ವಿಷಯವನ್ನು ನಿರ್ದೇಶಕ ವಿಕಾಸ್ ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

ಭಟ್ಟರಿಂದಲೇ 'ಜಯಮ್ಮನ ಮಗ' ಸಿನಿಮಾ ಆರಂಭ
ದುನಿಯಾ ವಿಜಯ್ ಯೋಗರಾಜ್ ಭಟ್ ಜೊತೆ ಸಿನಿಮಾ ಮಾಡಬೇಕು ಅಂತಿದ್ದರು. ಡ್ರಾಮ ಡಬ್ಬಿಂಗ್ ವೇಳೆ ವಿಜಯ್ ಹಿಡಿದ ಹಠ ಬಿಟ್ಟಿರಲಿಲ್ಲ. ಆಗ 'ಡ್ರಾಮ'ಗೆ ಕೆಲಸ ಮಾಡುತ್ತಿದ್ದ ವಿಕಾಸ್‌ರನ್ನೇ ಜಯಮ್ಮನ ಮಗ ಚಿತ್ರಕ್ಕೆ ನಿರ್ದೇಶನ ಮಾಡುವಂತೆ ಸಲಹೆ ನೀಡಿದ್ದರು. "ಡ್ರಾಮ ಡಬ್ಬಿಂಗ್ ಮಾಡುವಾಗ ದುನಿಯಾ ವಿಜಯ್ ಭಟ್ಟರ ಕೈಯಲ್ಲಿ ಒಂದು ಸಿನಿಮಾ ಡೈರೆಕ್ಟ್ ಮಾಡಿಸಬೇಕು ಅಂತಿದ್ದರು. ಆಗ ದುನಿಯಾ ವಿಜಯ್ ರಜನಿಕಾಂತ ಡಬ್ಬಿಂಗ್ ನಡೀತಿತ್ತು. ಆಗ ಭಟ್ಟರಿಗೆ ಬೇರೊಂದು ಸಿನಿಮಾವಿತ್ತು. ಆಗ ಭಟ್ಟರು ನಿನ್ನನ್ನು ಪರಿಚಯ ಮಾಡಿಸಿದ್ದೇ ಇವನಲ್ಲವೇ. ಇವನೊಂದಿಗೆ ಸಿನಿಮಾ ಮಾಡಿಸು ಎಂದಿದ್ದರು. ಇದು ಓಕೆ ಅಂತ ದುನಿಯಾ ವಿಜಯ್ ಹೇಳಿದ್ರು. ಹಂಗೆ 'ಜಯಮ್ಮನ ಮಗ' ಸಿನಿಮಾ ಶುರುವಾಗಿತ್ತು. ಆಗ ನಾನು ಡ್ರಾಮ ಸಿನಿಮಾ ಡಬ್ಬಿಂಗ್ ಪೇಪರ್ ಹಿಡಿದು ಕೂತಿದ್ದೆ." ಎಂದು ವಿಕಾಸ್ ಜಯಮ್ಮನ ಮಗ ಸಿನಿಮಾ ಶುರುವಾದ ಬಗ್ಗೆ ಹೇಳುತ್ತಾರೆ.

ಈ ಸಿನಿಮಾ ಕಮರ್ಷಿಯಲ್ ಎಲಿಮೆಂಟ್ಸ್ ಇತ್ತು
"ವಿಜಯ್ ತಲೆಯಲ್ಲಿಇದ್ದಿದ್ದು, ಅವರು ನಡೆದುಕೊಂಡು ಬರ್ತಾರೆ. ಅವರ ಸುತ್ತ ನಾಲ್ಕು ದೇವರು ನಡೆದು ಬರುತ್ತಾರೆ. ನನಗೆ ಇದರಲ್ಲಿ ನಂಬಿಕೆ ಇರಲಿಲ್ಲ. ಆದರೆ, ಇಂತಹದ್ದನ್ನು ನೋಡುವ ಜನರಿದ್ದಾರೆ. ಅದು ಕಮರ್ಷಿಯಲ್ ಎಲಿಮೆಂಟ್ಸ್. ಓಕೆ ವರ್ಕ್ ಮಾಡೋಣ ಅಂತ ಹೇಳಿದೆ. ಚಿಂತನ್ ಅನ್ನುವವವರೊಬ್ಬರು ಸಿಕ್ಕಿದರು. ಅದು ತುಂಬಾನೇ ಸಹಾಯ ಆಯ್ತು. ಮಾಟ ಮಂತ್ರಕ್ಕೆ ಜನರು ಯಾವ ಲೆವೆಲ್‌ಗೆ ಬೀಳುತ್ತಾರೆ ಅನ್ನುವುದೆಲ್ಲಾ ನೆನಪಾಯಿತು."

ಯಾಕಾದರೂ 'ಜಯಮ್ಮನ ಮಗ' ಸಿನಿಮಾ ಒಪ್ಪಿಕೊಂಡೆ ಅನಿಸಿತ್ತು
"ಬಸುರಿ ಆಗಿರುವವರನ್ನು ಬಲಿಕೊಟ್ಟರೆ ಏನೋ ಸಿಗುತ್ತೆ ಅಂತ ಸುಮಾರು ಬಸುರಿಯರನ್ನು ಕೊಂದಿರುವಂತಹ ಸನ್ನಿವೇಶಗಳು. ಅವರ ಮನೆಯೊಳಗೆ ಮಣ್ಣು ಮಾಡಬೇಕು ಅನ್ನುವ ನಂಬಿಕೆ. ಮಕ್ಕಳನ್ನು ಬಲಿ ಕೊಡುವುದು. ಇವೆನ್ನೆಲ್ಲಾ ಕೇಳಿ ತಲೆ ಕೆಟ್ಟು ಹೋಯ್ತು. ಯಾಕಾದರೂ ಈ ಸಿನಿಮಾ ಒಪ್ಪಿಕೊಂಡೆ ಗುರು, ಬರೀ ಇಂತಹವೇ ಹೇಳುತ್ತಾರಲ್ಲಾ ಅಂತ ಅಂದುಕೊಂಡೆ. ಅಷ್ಟೊಂದು ಹಾರರ್ ಆಗಿ ತೆಗೆಯುವುದು ಬೇಡ. ಫ್ಯಾಮಿಲಿ ಕೂತು ಸಿನಿಮಾ ನೋಡಿದರೂ ಬೇಜಾರು ಮಾಡಿಕೊಳ್ಳಬಾರದು ಅಂದುಕೊಂಡು ಎಲ್ಲರೂ ನೋಡುವಂತಹ ಕಮರ್ಷಿಯಲ್ ಸಿನಿಮಾ ಆಯ್ತು."
ನೀನು ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ
"ವಿಜಿ ಇದ್ದರೆ ಸ್ವಲ್ಪ ಹಿಡಿತವಿರುತ್ತಿತ್ತು. ಯಾಕೆಂದರೆ, ಅವನಿಗೂ ಸ್ವಲ್ಪ ಡೈರೆಕ್ಷನ್ ಸೆನ್ಸ್ ಇದೆ. ಸೀನ್ ತೆಗೆಯುವಾಗ ನಾನು ತಗಲು ಹಾಕೊಂಡಾಗ ಬಿಡಿಸಿದ್ದಾರೆ. ಉದಯ್ ವಾಮಾಚಾರಿ ದೃಶ್ಯದಲ್ಲಿ ಬರಬೇಕಿತ್ತು. ಆಗ ಒಂದು ಫೋರ್ಸ್ ಇರುತ್ತೆ. ಒಳಗೆ ಹೋಗುವುದಕ್ಕೆ ಆಗುವುದಿಲ್ಲ. ಆಗ ಏನು ಮಾಡಬೇಕು ಅಂದಾಗ ಚಪ್ಪಲಿ ಉಲ್ಟಾ ಬಿಡುವ ದೃಶ್ಯದ ಬಗ್ಗೆ ಹೇಳಿದ್ದರು. ಆಗ ಒಂದೇ ಶಾಟ್‌ನಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಆಗಲೇ ಏನು ಗುರು ನೀನು ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂತ ಹೇಳಿದ್ದೆ." ಎಂದು ದುನಿಯಾ ವಿಜಯ್ ನಿರ್ದೇಶಕನದ ಕಲೆಯನ್ನು ನೆನಪಿಸಕೊಳ್ಳುತ್ತಾರೆ ವಿಕಾಸ್.