»   » ಪ್ರೇಮಿಗಳ ದಿನಕ್ಕೆ ಪುನೀತ್ ಅವರಿಂದ ವಿಶೇಷ ಉಡುಗೊರೆ

ಪ್ರೇಮಿಗಳ ದಿನಕ್ಕೆ ಪುನೀತ್ ಅವರಿಂದ ವಿಶೇಷ ಉಡುಗೊರೆ

Posted By:
Subscribe to Filmibeat Kannada

ನಿರ್ದೇಶಕ ಪವನ್ ಒಡೆಯರ್ ಅವರು 'ರಣವಿಕ್ರಮ' ಸಿನಿಮಾದ ನಂತರ ಈ ವರ್ಷ 'ಜೆಸ್ಸಿ' ಎಂಬ ರೊಮ್ಯಾಂಟಿಕ್ ಸಿನಿಮಾವನ್ನು ಅಭಿಮಾನಿಗಳಿಗೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಆಗಲಿದೆ.

'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್, 'ಸವಾರಿ' ಖ್ಯಾತಿಯ ರಘು ಮುಖರ್ಜಿ ಮತ್ತು ಗ್ಲಾಮರ್ ಬೆಡಗಿ ಪಾರುಲ್ ಯಾದವ್ ಅವರು ಕಾಣಿಸಿಕೊಂಡಿರುವ 'ಜೆಸ್ಸಿ' ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆಗಮಿಸಲಿದ್ದಾರೆ.['ಜೆಸ್ಸಿ' ಪ್ರಿಯತಮೆಗೆ ರೊಮ್ಯಾಂಟಿಕ್ ಚಿತ್ರದಲ್ಲಿ, ನಟಿಸೋದು ಇಷ್ಟವಂತೆ!]


'Jessie' Songs To Release On Feb 14 For Valentines Day

ಹೌದು ಪ್ರೇಮಿಗಳ ದಿನದಂದು (ಫೆಬ್ರವರಿ 14) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಒಡೆಯರ್ ಅವರ ರೊಮ್ಯಾಂಟಿಕ್ ಸಿನಿಮಾ 'ಜೆಸ್ಸಿ'ಯ ಆಡಿಯೋ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ರೊಮ್ಯಾಂಟಿಕ್ ಹಾಡುಗಳ ವಿಶೇಷ ಉಡುಗೊರೆ ನೀಡಲಿದ್ದಾರೆ.


ಹಿನ್ನಲೆ ಸಂಗೀತ ನೀಡುವಲ್ಲಿ ಫೇಮಸ್ ಆಗಿರುವ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು 'ಜೆಸ್ಸಿ' ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ]


'Jessie' Songs To Release On Feb 14 For Valentines Day

'ಗೂಗ್ಲಿ' ಯಂತಹ ಹಿಟ್ ಸಿನಿಮಾ ನೀಡಿ ಯಶ್ ಅವರಿಗೆ ಬ್ರೇಕ್ ಕೊಟ್ಟಂತೆ, ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಅವರಿಗೆ ನಿರ್ದೇಶಕ ಪವನ್ ಒಡೆಯರ್ ಅವರು 'ಜೆಸ್ಸಿ' ಮೂಲಕ ಬ್ರೇಕ್ ಕೊಡುತ್ತಾರ ಅಂತ ಕಾದು ನೋಡಬೇಕಿದೆ.

English summary
Pawan Wadeyar's new triangle love story 'Jessie' is gearing up for its audio release. The audio release is fixed for Valentine's day February 14. Power Star Puneeth Rajkumar is releasing the audio. The film stars Dhananjay, Raghu Mukherjee and Parul Yadav.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada