For Quick Alerts
  ALLOW NOTIFICATIONS  
  For Daily Alerts

  'ಪರಸಂಗ' ಚಿತ್ರಕ್ಕೆ ಸಾಥ್ ನೀಡಿದ ಜೋಗಿ ಪ್ರೇಮ್

  By Bharath Kumar
  |

  'ಪರಸಂಗ' ಕನ್ನಡ ಸಿನಿಮಾ ಮಾಧುರ್ಯ ತುಂಬಿದ ಹಾಡುಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಮರಳಿ ಬಾರದ ಊರಿಗೆ... (ಡಾ ಲೋಲಾಕ್ಷಿ ಅವರ ರಚನೆ) ಎಂಬ ಹಾಡನ್ನು ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರ ಕಂಠ ಸಿರಿಯಲ್ಲಿ ಹೊರಹೊಮ್ಮಿದ್ದು ಅನೇಕ ಕೇಳುಗರ ಮೆಚ್ಚುಗೆಯನ್ನು ಪಡೆದುಕೊಡಿದೆ.

  ಈಗಿನ ಸುದ್ದಿ ಏನಪ್ಪಾ ಅಂದರೆ ಅದೇ ಜೋಗಿ ಪ್ರೇಮ್ 'ಪರಸಂಗ' ಚಿತ್ರದಲ್ಲಿ ಬರುವ ಪ್ರಮುಖ ಸಂಭಾಷಣೆಯನ್ನು ಇತ್ತೀಚಿಗೆ ಹೇಳಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಏನಿದು ಸಂಭಾಷಣೆ ಅಂತೀರಾ...ಅದೇ ಸಸ್ಪೆನ್ಸ್. ಚಿತ್ರ ಬಿಡುಗಡೆ ಆದಾಗಲೇ ಕೇಳುವುದು ಚಂದಾ ಎನ್ನುತ್ತಾರೆ ನಿರ್ದೇಶಕ, ಕಥೆಗಾರ, ಸಂಭಾಷಣೆಗಾರ ಕೆ ಎಂ ರಘು.

  ಮಿತ್ರ, ಅಕ್ಷತ, ಮನೋಜ್, ಮಜಾ ಟಾಕೀಸ್ ಪವನ್, ಚಂದ್ರಪ್ರಭಾ, ಕಾಮಿಡಿ ಕೀಳದಿಗಳು ಸಂಜು ಬಸಯ್ಯ, ಗೋವಿಂದೆ ಗೌಡ, ತರುಣ್ ಸುಧೀರ್ ಅಭಿನಯಿಸಿದ್ದಾರೆ.

  'ಶಿವು ಪಾರು' ಖ್ಯಾತಿಯ ಅಮೆರಿಕ ಸುರೇಶ್ ಗೆ ಇದು ಆನಂದದ ಸಮಯ

  ಅಮೆರಿಕದಿಂದ ಬಂದ ಈ ಹೊಸಕೋಟೆಯ ಲವಲವಿಕೆಯ ವ್ಯಕ್ತಿ ಅಮೆರಿಕ ಸುರೇಶ್ ಪ್ರಥಮ ಚಿತ್ರ 'ಶಿವು ಪಾರು' ಬಿಡುಗಡೆಗೆ ಸಿದ್ದವಾಗಿದೆ. ಹೀಗಿರುವಾಗ, ಅಮೆರಿಕ ಸುರೇಶ್ ಅವರ ದಯಾಪರ ಕೆಲಸಕ್ಕೆ ಎನ್ ವಿ ಯು ಪಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಇದು ಅವರ ಸೇವೆಯನ್ನು ಗುರುತಿಸಿ ನೀಡಲಾಗಿದೆ.

  ಇದೇ ಸಮಯಕ್ಕೆ ಅಮೆರಿಕ ಸುರೇಶ್ ಅವರ ಸಿನಿಮಾ ಶಿವು ಪಾರು' ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ 2018ಕ್ಕೆ ಆಯ್ಕೆ ಆಗಿದೆ. ಈ ಸಿನಿಮಾವನ್ನು ಕರ್ನಾಟಕದಾದ್ಯಂತ ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಬೇಕು ಎಂದು ಸಕಲಕಲಾ ವಲ್ಲಭ ಅಮೆರಿಕ ಸುರೇಶ್ ನಿರ್ಧರಿಸಿದ್ದಾರೆ.

  'ಶಿವು ಪಾರು' ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೇ, ಪೌರಾಣಿಕವಾಗಿ ಬೆಸೆದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ. ಸೂರಿ ಫಿಲ್ಮ್ಸ್ ಅಡಿಯಲ್ಲಿ ಶ್ರೀಮತಿ ಶೈಲಜ ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಹಿನ್ನಲೆ ಸಂಗೀತ ನೀಡಿದ್ದಾರೆ.

  ಅಮೆರಿಕ ಸುರೇಶ್ ಹಾಗೂ ದಿಶಾ ಪೂವಯ್ಯ ಮುಖ್ಯ ತಾರಗಣದ ಈ ಶಿವು ಪಾರು' ಸಿನಿಮಾದಲ್ಲಿ ಭವ್ಯ, ರಕ್ಷಿತಾ, ಮೇಘನ, ರಂಜಿತ, ಲಕ್ಷ್ಮಿ, ಸಿಮ್ರಾನ್, ವಂದನ, ನೇಹ,ಆರ್ತಿ, ಸೋನಿಯ, ಸ್ವಾತಿ, ಲೋಕೇಶ್, ರವಿ, ರಂಜನ ಹಿರಿಯ ನಟರುಗಳಾದ ಹೊನ್ನಾವಳ್ಳಿ ಕೃಷ್ಣ, ರಮೇಶ್ ಭಟ್, ಚಿತ್ರ ಶೆಣೈ,ವಿಶ್ವ, ಸುಂದರ್ ಹಾಗೂ ಇತರರು ಇದ್ದಾರೆ.

  English summary
  Kannada Director Jogi prem has sing a song for Kannada movie parasanga. the movie directed by Km Raghu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X