For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಮೊದಲ ಜೋಂಬಿ ಸಿನಿಮಾಗೆ 'ಜೋಗಿ ಪ್ರೇಮ್' ಹೀರೊ: ಧ್ರುವ ಸಿನಿಮಾ ಕಥೆಯೇನು?

  |

  ಕಳೆದ 15 ದಿನಗಳಿಂದ ಜೋಗಿ ಪ್ರೇಮ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಒಂದ್ಕಡೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡುವ ತರಾತುರಿಯಲ್ಲಿದ್ದಾರೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ನಾಳೆ (ಅಕ್ಟೋಬರ್ 20) ಟೈಟಲ್ ಲಾಂಚ್ ಮಾಡೋಕೆ ರೆಡಿಯಾಗಿದ್ದಾರೆ.

  ಇನ್ನೊಂದು ಕಡೆ ಜೋಗಿ ಪ್ರೇಮ್ ಮತ್ತೆ ಬಣ್ಣ ಹಚ್ಚುವುದಕ್ಕೂ ತಯಾರಿ ನಡೆಸಿದ್ದಾರೆ. ಸುಮಾರು ಆರೇಳು ವರ್ಷಗಳ ಬಳಿಕ ಪ್ರೇಮ್ ಹೀರೊ ಆಗುತ್ತಿದ್ದಾರೆ. ಹಾಗಂತ ಇದೂವರೆಗೂ ಪ್ರೇಮ್ ನಟಿಸಿದ ಸಿನಿಮಾಗಳಿಗಿಂತ ಇದು ಕಂಪ್ಲೀಟ್ ಡಿಫ್ರೆಂಟ್ ಆಗಿರುತ್ತೆ.

  ಮೋಹನ್ ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ, ಸುಕುಮಾರನ್: ಪ್ರೇಮ್ ಹೇಳಿದ 6 ಜನರ ಕಥೆ ಇದೇನಾ?ಮೋಹನ್ ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ, ಸುಕುಮಾರನ್: ಪ್ರೇಮ್ ಹೇಳಿದ 6 ಜನರ ಕಥೆ ಇದೇನಾ?

  2015ರಲ್ಲಿ ತೆರೆಕಂಡ 'ಡಿಕೆ' ಸಿನಿಮಾವೇ ಕೊನೆ. ಆ ಬಳಿಕ ಪ್ರೇಮ್ ನಿರ್ದೇಶನದ ಕಡೆ ಮರಳಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿರೋ ಪ್ರೇಮ್, ಪ್ಯಾನ್ ಇಂಡಿಯಾ ಸಿನಿಮಾಗೆ ನಿರ್ದೇಶಿಸಿದ್ದಾರೆ. ಈ ಮಧ್ಯವೇ ಹೀರೊ ಆಗುತ್ತಿದ್ದಾರೆ. ಆ ಸಿನಿಮಾದ ವಿಶೇಷತೆ ಏನು? ಪ್ರೇಮ್ ಮತ್ತೆ ಹೀರೊ ಆಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಏಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ದಕ್ಷಿಣ ಭಾರತದ ಮೊದಲ ಜೋಂಬಿ ಸಿನಿಮಾ

  ದಕ್ಷಿಣ ಭಾರತದ ಮೊದಲ ಜೋಂಬಿ ಸಿನಿಮಾ

  ಏಳು ವರ್ಷಗಳ ಬಳಿಕ ಜೋಗಿ ಪ್ರೇಮ್ ಮತ್ತೆ ಹೀರೊ ಆಗಲು ಒಪ್ಪಿರುವುದಕ್ಕೆ ಕಾರಣವಿದೆ. ನಟನೆಯನ್ನೇ ಮರೆತು ನಿರ್ದೇಶನದಲ್ಲಿ ಮುಳುಗಿ ಹೋಗಿದ್ದ ಪ್ರೇಮ್ ಮತ್ತೆ ಬಣ್ಣ ಹಚ್ಚಲು ಕಾರಣ ಕಥೆ. ಇದು ಸೌತ್ ಇಂಡಿಯಾದ ಮೊಟ್ಟ ಮೊದಲ ಜೋಂಬಿ ಸಿನಿಮಾ. ಜೊತೆಗೆ ಸೈಕಾಲಾಜಿಕಲ್ ಥ್ರಿಲ್ಲರ್ ಕೂಡ ಹೌದು. ಇನ್ನೂ ಹೆಸರಿಡದ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಲು ಚಿತ್ರ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಹಾಗೇ ಈ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಯ ದೊಡ್ಡ ಸ್ಟಾರ್‌ಕಾಸ್ಟ್‌ ಇದೆ.

  VFXನಲ್ಲಿ ಪರಿಣಿತಿ ಹೊಂದಿರೋ ನಿರ್ದೇಶಕ

  VFXನಲ್ಲಿ ಪರಿಣಿತಿ ಹೊಂದಿರೋ ನಿರ್ದೇಶಕ

  ಜೋಗಿ ಪ್ರೇಮ್ ಇದೇ ಮೊದಲ ಬಾರಿಗೆ ಯುವ ನಿರ್ದೇಶಕನ ಡೈರೆಕ್ಷನ್‌ನಲ್ಲಿ ನಟಿಸಲಿದ್ದಾರೆ. ಅಂದ್ಹಾಗೆ ಮೈಸೂರಿನ 28 ವರ್ಷದ ಯುವ ಎಂ. ಶಶಿಧರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಫಿಲ್ಮ್‌ ಮೇಕಿಂಗ್ ಕಲಿಯೋದರ ಜೊತೆಗೆ VFXನಲ್ಲಿ ಪರಿಣಿತಿ ಪಡೆದಿದ್ದಾರೆ. ಇದೊಂದು ಜೋಂಬಿ ಸಿನಿಮಾ ಆಗಿರುವುದರಿಂದ ವಿಎಫ್‌ಎಕ್ಸ್‌ಗೆ ಹೆಚ್ಚಿನ ಮಹತ್ವವಿದೆ. ಈಗಾಗಲೇ ಶಶಿಧರ್ 'ಘಾರ್ಗಾ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಾಯಿ ಕುಮಾರ್, ಸಂಪತ್ ರಾಜ್, ಅರುಣ್ ಸಾಗರ್, ದೇವಗಿಲ್, ರಾಹುಲ್ ದೇವ್ ಜೊತೆಗೆ ಸ್ಯಾಂಡಲ್‌ವುಡ್ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಪುತ್ರ ಅರುಣ್ ರಾಮ್ ಪ್ರಸಾದ್ ಮೊದಲ ಬಾರಿಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

  ಇದೊಂದು ಬಿಗ್ ಬಜೆಟ್ ಸಿನಿಮಾ

  ಇದೊಂದು ಬಿಗ್ ಬಜೆಟ್ ಸಿನಿಮಾ

  ಅಂದ್ಹಾಗೆ ದಕ್ಷಿಣ ಭಾರತದ ಮೊದಲ ಜೋಂಬಿ ಸಿನಿಮಾಗೆ ಎರಡು ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. 'ಜೋಗಿ' ಸಿನಿಮಾದ ನಿರ್ಮಾಪಕ ಹಾಗೂ ಪ್ರೇಮ್ ಡ್ರೀಮ್ಸ್ ಎರಡೂ ಸಂಸ್ಥೆಗಳೂ ಬಂಡವಾಳ ಹೂಡುತ್ತಿವೆ. ಬಹುಭಾಷೆಯ ನಟ-ನಟಿಯರು ಈ ಸಿನಿಮಾದಲ್ಲಿ ಇರುವ ಕಾರಣ ಬಜೆಟ್ ಕೂಡ ದುಬಾರಿ ಎನ್ನಲಾಗಿದೆ. ಹೀಗಾಗಿ ಜೋಂಬಿ ಸಿನಿಮಾದಲ್ಲಿ ಪ್ರೇಮ್ ಹೇಗೆ ಕಾಣಿಸಿಕೊಳ್ಳುತ್ತಾರೆ? ಸಿನಿಮಾ ಹೇಗೆ ಇರುತ್ತೆ ಅನ್ನೋದು ಕುತೂಹಲವಿದೆ.

  ಧ್ರುವ ಸರ್ಜಾ ಸಿನಿಮಾ ಕಥೆಯೇನು?

  ಧ್ರುವ ಸರ್ಜಾ ಸಿನಿಮಾ ಕಥೆಯೇನು?

  ಜೋಗಿ ಪ್ರೇಮ್ ಕೆವಿಎನ್‌ ಸಂಸ್ಥೆ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಧ್ರುವ ಸರ್ಜಾ ನಟಿಸುತ್ತಿರುವ ಈ ಸಿನಿಮಾದ ಟೈಟಲ್ ಲಾಂಚ್ ಅನ್ನೇ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸುಮಾರು ಒಂದು ತಿಂಗಳಿನಿಂದ ಹರಸಾಹಸ ನಡೆಸಿದ್ದಾರೆ. ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ವಿಜಯ್ ಸೇತುಪತಿ, ಸಂಜಯ್ ದತ್, ಸೆಂಚುರಿ ಸ್ಟಾರ್ ಶಿವಣ್ಣ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಈ ಟೈಟಲ್‌ ಲಾಂಚ್‌ಗೆ ಬೆಂಬಲ ನೀಡಲಿದ್ದಾರೆ.

  ಪ್ರಮೋಷನ್ ಕಿಂಗ್ ಪ್ರೇಮ್ ಈಸ್ ಬ್ಯಾಕ್: ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್‌ಗೆ ಹೇಗಿದೆ ಗೊತ್ತಾ ಪ್ಲ್ಯಾನ್?ಪ್ರಮೋಷನ್ ಕಿಂಗ್ ಪ್ರೇಮ್ ಈಸ್ ಬ್ಯಾಕ್: ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್‌ಗೆ ಹೇಗಿದೆ ಗೊತ್ತಾ ಪ್ಲ್ಯಾನ್?

  English summary
  Jogi Prem Will Be Seen As Hero In First South Indian Zombie Movie, Know More.
  Wednesday, October 19, 2022, 20:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X