»   » ದುನಿಯಾ ವಿಜಿ ಈಗ ವೀರ, ಧೀರ ಸಿಕ್ಸ್ ಪ್ಯಾಕ್ ರಾಮ

ದುನಿಯಾ ವಿಜಿ ಈಗ ವೀರ, ಧೀರ ಸಿಕ್ಸ್ ಪ್ಯಾಕ್ ರಾಮ

Posted By:
Subscribe to Filmibeat Kannada

ದುನಿಯಾ ವಿಜಿ ಅಭಿನಯದ ಪ್ರೀತಂ ಗುಬ್ಬಿ ನಿರ್ದೇಶನ ಮಾಡಿರುವ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ಬರಲು ಸಿದ್ದವಾಗಿದೆ. ಈ ಹಿಂದೆ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಎಂದಿದ್ದ ಪ್ರೀತಂ ಹಾಗೂ ವಿಜಿ ಈಗ ಅದೇ ಸ್ಟೈಲ್ ನಲ್ಲಿ ಹೊಸ ರೀತಿಯ ಕಥೆಯನ್ನು ಹೇಳಲು ಬರುತ್ತಿದ್ದಾರೆ.

ಮಾರ್ಚ್ 30 ರಂದು ಬಿಡುಗಡೆ ಆಗುತ್ತಿರುವ ಜಾನಿ ಜಾನಿ ಎಸ್ ಪಪ್ಪಾ ಚಿತ್ರ ತಂಡ ರಾಮನವಮಿ ಹಬ್ಬದ ವಿಶೇಷವಾಗಿ ಚಿತ್ರದಲ್ಲಿರುವ ವಿಶೇಷವಾದ ಸೀನ್ ಅನ್ನು ರಿಲೀಸ್ ಮಾಡಿದ್ದಾರೆ. 'ದನಕಾಯೋನು' ಚಿತ್ರದಲ್ಲಿ ಕೃಷ್ಣ ಅವತಾರವೆತ್ತಿದ್ದ ದುನಿಯಾ ವಿಜಿ ಜಾನಿ ಚಿತ್ರದಲ್ಲಿ ರಾಮನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Johnny Johnny Yes Pappa movie new teaser released

ಪುನೀತ್ ಹಾಡಿದ್ರೆ ಆ ಸಾಂಗ್ ಹಿಟ್: ಇನ್ನೊಂದು ಹೊಸ ಹಾಡು ಕೇಳಿ.!

ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿರುವ ರಾಮ ಸಾಮಾನ್ಯನಲ್ಲ. ವೀರ, ಧೀರ ಹಾಗೂ ಸಿಕ್ಸ್ ಪ್ಯಾಕ್ ಇರುವ ರಾಮ. ಈ ಮಾತನ್ನು ನಾವು ಹೇಳುತ್ತಿರುವುದಲ್ಲ ಸ್ವತಃ ಸಿನಿಮಾ ತಂಡವೇ ಹೇಳುತ್ತಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್ ಚಿತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಮೂಡಿಸುವಂತಿದೆ.

ಜಾನಿ ಜಾನಿ ಎಸ್ ಪಪ್ಪಾ ಸಿನಿಮಾದಲ್ಲಿ ದುನಿಯಾ ವಿಜಿ ನಾಯಕನಾಗಿ ಅಭಿನಯಿಸುವುದರ ಜೊತೆಯಲ್ಲಿ ನಿರ್ಮಾಣವನ್ನು ಮಾಡಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲ, ದತ್ತಣ್ಣ ಇನ್ನು ಅನೇಕರು ಅಭಿನಯಿಸಿದ್ದಾರೆ. ಪ್ರೀತಂ ಗುಬ್ಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಚಿತ್ರದ ಹಾಡುಗಳ ಟೀಸರ್ ಸಿನಿಮಾ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚು ಮಾಡಿದೆ.

ದುನಿಯಾ ವಿಜಿಗೆ ಸಾಥ್ ನೀಡಿದ ಪವರ್ ಸ್ಟಾರ್

English summary
Johnny Johnny Yes Pappa movie new teaser released, Duniya Viji, Rachita Ram is acting in the movie Pritham Gubbi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X