For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಗೆದ್ದ ರಾಜ ಯಾರಾದ್ರೂ ಇದ್ರೆ ಅದು ಪುನೀತ್ ಮಾತ್ರ; ಸ್ಪಷ್ಟ ಕನ್ನಡದಲ್ಲೇ ಅಪ್ಪು ಗುಣಗಾನ ಮಾಡಿದ ಎನ್‌ಟಿಆರ್

  |

  ಇಂದು ( ನವೆಂಬರ್ 1 ) ಬೆಂಗಳೂರು ವಿಜೃಂಭಣೆಯ ಕನ್ನಡ ರಾಜ್ಯೋತ್ಸವದ ಜತೆಗೆ ಐತಿಹಾಸಿಕ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ವಿಧಾನಸೌಧದ ಮುಂದೆ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದರು ಹಾಗೂ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಡೆದರು.

  ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಜನಿಕಾಂತ್, ಜೂನಿಯರ್ ಎನ್‌ಟಿಆರ್ ಹಾಗೂ ಸುಧಾಮೂರ್ತಿ ಆಗಮಿಸಿದ್ದರು. ಮೊದಲಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ರಜನಿಕಾಂತ್ ಮಾತಾನಾಡಿ ಅಪ್ಪು ಅವರನ್ನು ಹಾಡಿ ಹೊಗಳಿದರು. ನಂತರ ಮಾತಾನಾಡಿದ ಜೂನಿಯರ್ ಎನ್‌ಟಿಆರ್ ಕನ್ನಡದಲ್ಲಿಯೇ ಮಾತನಾಡಿ ಪುನೀತ್ ಅವರನ್ನು ಹಾಡಿ ಹೊಗಳಿದರು.

  ಎಲ್ಲರಿಗೂ ನಮಸ್ಕಾರ ಎಂದು ಮಾತನ್ನು ಆರಂಭಿಸಿದ ಜೂನಿಯರ್ ಎನ್‌ಟಿಆರ್ ನಾನು ಪ್ರಾರಂಭಿಸುವ ಮುನ್ನ ಇಡೀ ಕರ್ನಾಟಕ ರಾಜ್ಯಕ್ಕೆ ಮತ್ತು ಪ್ರಪಂಚಾದ್ಯಂತ ಇರುವ ಎಲ್ಲಾ ಕನ್ನಡ ಜನಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಶುಭಕೋರಿದರು. ನಂತರ ತನ್ನ ಗೆಳೆಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಜ್ ಕುಟುಂಬವನ್ನು ಹೊಗಳಿದರು.

  {document3}

  ವ್ಯಕ್ತಿತ್ವ ಅನ್ನೋದು ಸ್ವಂತ ಸಂಪಾದನೆ

  ವ್ಯಕ್ತಿತ್ವ ಅನ್ನೋದು ಸ್ವಂತ ಸಂಪಾದನೆ

  ಒಬ್ಬ ಮನುಷ್ಯನಿಗೆ ಪರಂಪರೆ ಮತ್ತು ಉಪನಾಮ ಅನ್ನೋದು ಹಿರಿಯರಿಂದ ಬರುತ್ತೆ, ಆದರೆ ವ್ಯಕ್ತಿತ್ವ ಅನ್ನೋದು ಆ ಮನುಷ್ಯನ ಸ್ವಂತ ಸಂಪಾದನೆ ಎಂದು ಜೂನಿಯರ್ ಎನ್‌ಟಿಆರ್ ಹೇಳಿದರು. ಈ ಮೂಲಕ ಪುನೀತ್ ರಾಜ್‌ಕುಮಾರ್ ರಾಜ್‌ಕುಮಾರ್ ಕುಟುಂಬದ ಪರಂಪರೆಯನ್ನು ಹೊಂದಿದ್ದರೂ ಸಹ ತನ್ನದೇ ಆದ ವ್ಯಕ್ತಿತ್ವವನ್ನು ಸಂಪಾದಿಸಿದ್ದರು ಎಂದು ಜೂನಿಯರ್ ಎನ್‌ಟಿಆರ್ ಹೊಗಳಿದರು.

  ರಾಜ್ಯ ಗೆದ್ದ ರಾಜ ಯಾರಾದ್ರೂ ಇದ್ರೆ ಪುನೀತ್ ಮಾತ್ರ

  ರಾಜ್ಯ ಗೆದ್ದ ರಾಜ ಯಾರಾದ್ರೂ ಇದ್ರೆ ಪುನೀತ್ ಮಾತ್ರ

  ಇನ್ನೂ ಮುಂದುವರಿದು ಮಾತನಾಡಿದ ಜೂನಿಯರ್ ಎನ್‌ಟಿಆರ್ ಒಂದು ವ್ಯಕ್ತಿತ್ವದಿಂದ, ನಗುವಿನಿಂದ, ಅಹಂ ಇಲ್ಲದೇ, ಅಹಂಕಾರವಿಲ್ಲದೇ, ಯುದ್ಧವನ್ನೂ ಮಾಡದೇ ಒಂದು ರಾಜ್ಯವನ್ನು ಗೆದ್ದ ರಾಜ ಯಾರಾದ್ರೂ ಇದ್ರೆ ಅದು ಶ್ರೀ ಪುನೀತ್ ರಾಜ್‌ಕುಮಾರ್ ಮಾತ್ರ ಎಂದು ಅಪ್ಪುವನ್ನು ಕೊಂಡಾಡಿದರು. ಇಬ್ಬ ಸೂಪರ್‌ಸ್ಟಾರ್ ಆಗಿರುವುದರ ಜತೆಗೆ ಉತ್ತಮ ಮಗ, ಉತ್ತಮ ಗಂಡ, ಉತ್ತಮ ಅಪ್ಪ, ಉತ್ತಮ ಸಹೋದರ, ಉತ್ತಮ ನಟ, ಗಾಯಕ ಹಾಗೂ ಡ್ಯಾನ್ಸರ್ ಇದೆಲ್ಲಕ್ಕೆಂತ ಹೆಚ್ಚಾಗಿ ಅವರು ಓರ್ವ ಅತ್ಯುತ್ತಮ ಮನುಷ್ಯ ಎಂದು ಎನ್‌ಟಿಆರ್ ಪುನೀತ್ ರಾಜ್‌ಕುಮಾರ್ ಅವರನ್ನು ಹೊಗಳಿದರು.

  ತಪ್ಪು ತಿಳಿಯಬೇಡಿ ಕರ್ನಾಟಕ ರತ್ನದ ಅರ್ಥನೇ ಪುನೀತ್ ರಾಜ್‌ಕುಮಾರ್

  ತಪ್ಪು ತಿಳಿಯಬೇಡಿ ಕರ್ನಾಟಕ ರತ್ನದ ಅರ್ಥನೇ ಪುನೀತ್ ರಾಜ್‌ಕುಮಾರ್

  ಅವರ ನಗುವಿನಲ್ಲಿ ಇದ್ದ ಶ್ರೀಮಂತಿಕೆಯನ್ನು ನಾನು ಎಲ್ಲೂ ನೋಡಿಲ್ಲ, ಅದಕ್ಕೆ ಅವರನ್ನು ನಗುವಿನ ಒಡೆಯ ಎನ್ನುವುದು, ಇವತ್ತು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗ್ತಿದೆ, ಆದರೆ ಯಾರೂ ಸಹ ತಪ್ಪು ತಿಳಿಯಬೇಡಿ ಕರ್ನಾಟಕ ರತ್ನಕ್ಕೆ ಅರ್ಥನೇ ಪುನೀತ್ ರಾಜ್‌ಕುಮಾರ್ ಎಂದು ಜೂನಿಯರ್ ಎನ್‌ಟಿಆರ್ ಅಪ್ಪು ಬಗ್ಗೆ ಗೌರವದ ಮಾತುಗಳನ್ನಾಡಿದರು.

  ವೇದಿಕೆಗೆ ಬಂದದ್ದು ಕೇವಲ ಹೆಮ್ಮೆಯ ಗೆಳೆಯನಾಗಿ

  ವೇದಿಕೆಗೆ ಬಂದದ್ದು ಕೇವಲ ಹೆಮ್ಮೆಯ ಗೆಳೆಯನಾಗಿ

  ನಾನು ಈ ವೇದಿಕೆಗೆ ಬಂದದ್ದು ನನ್ನ ಸಾಧನೆಯ ಅರ್ಹತೆಯಿಂದಲ್ಲ ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ನಾನಿಲ್ಲಿ ನಿಂತಿದ್ದೇನೆ ಎಂದರು ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮುಖ್ಯಮಂತ್ರಿ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದರು. ಇದೇ ವೇಳೆ ತನ್ನನ್ನು ಹೊರ ರಾಜ್ಯದ ನಟನಂತೆ ಕಾಣದೇ ತಮ್ಮ ಮನೆಯ ಮಗನಂತೆ ಕಾಣುವ ಕನ್ನಡ ಕಂಠೀರವ ಡಾ ರಾಜ್‌ಕುಮಾರ್ ಕುಟುಂಬಕ್ಕೂ ಧನ್ಯವಾದ ಅರ್ಪಿಸಿದರು.

  English summary
  Jr NTR praised Puneeth Rajkumar in kannada language at Karnataka Ratna event. Take a look
  Tuesday, November 1, 2022, 17:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X