Don't Miss!
- News
35 ಪ್ರಯಾಣಿಕರನ್ನು ಬಿಟ್ಟು ಅಮೃತಸರ ಏರ್ಪೋರ್ಟ್ನಿಂದ ಆಕಾಶಕ್ಕೆ ಜಿಗಿದ ವಿಮಾನ
- Sports
U-19 Women's World Cup 2023: ಸ್ಕಾಟ್ಲೆಂಡ್ ಮಣಿಸಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದ ಭಾರತ
- Lifestyle
ಎದೆನೋವು ಮಾತ್ರವಲ್ಲ, ಇವು ಕೂಡ ಹೃದಯಾಘಾತ ಲಕ್ಷಣಗಳು, ನಿರ್ಲಕ್ಷ್ಯ ಮಾಡಿದರೆ ತಪ್ಪಿದ್ದಲ್ಲ ಅಪಾಯ
- Automobiles
ಏರ್ಬ್ಯಾಗ್ ಸಮಸ್ಯೆ, 17 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ
- Finance
ಸಿಇಒ ಜೊತೆ ಒಂದು ಸಭೆ, ಮರುದಿನವೇ 3,000 ಉದ್ಯೋಗಿಗಳ ವಜಾ!
- Technology
ವಾಟ್ಸಾಪ್ನ ಸ್ಟೇಟಸ್ ವಿಭಾಗದಲ್ಲಿ ನೂತನ ಫೀಚರ್ಸ್; ಏನೆಂದು ತಿಳಿಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿಚ್ಚ ಸುದೀಪ್ ಜೊತೆ ಮಿರ ಮಿರ ಮಿಂಚುತ್ತಿರುವ ಈ ಬೆಡಗಿ ಯಾರು?
ಲಾಕ್‌ಡೌನ್ ಬ್ರೇಕ್ ಮುಗಿಸಿದ ನಟ ಕಿಚ್ಚ ಸುದೀಪ್ ಮತ್ತೆ ಸಿನಿಮಾ ಕೆಲಸ ಆರಂಭಿಸಿದ್ದರು. ವಿಕ್ರಾಂತ್ ರೋಣ ಚಿತ್ರದ ಡಬ್ಬಿಂಗ್ ಮುಗಿಸಿದ ಸುದೀಪ್ ಬಾಕಿ ಉಳಿದಿದ್ದ ಹಾಡಿನ ಚಿತ್ರೀಕರಣ ಸಹ ಮುಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಪೂರ್ಣ ಟಾಕಿ ಪೋಷನ್ ಶೂಟಿಂಗ್ ಪೂರ್ಣಗೊಳಿಸಿದ್ದ ವಿಕ್ರಾಂತ್ ರೋಣ ಚಿತ್ರತಂಡ ಕೊನೆಯದಾಗಿ ಸ್ಪೆಷಲ್ ಹಾಡೊಂದನ್ನು ಉಳಿಸಿಕೊಂಡಿತ್ತು. ಇದೀಗ, ಈ ಹಾಡಿನ ಚಿತ್ರೀಕರಣ ಮುಗಿದಿದ್ದು, ರಿಲೀಸ್‌ಗೆ ಸಜ್ಜಾಗಿದೆ. ಈ ನಡುವೆ ಕಿಚ್ಚ ಸುದೀಪ್ ಜೊತೆ ಯುವತಿಯೊಬ್ಬಳು ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
'ವಿಕ್ರಾಂತ್
ರೋಣ'
ಹಾಡಿನ
ಚಿತ್ರೀಕರಣದಲ್ಲಿ
ಜಾಕ್ವೆಲಿನ್;
ಮೇಕಿಂಗ್
ನೋಡಿ
ಬೆರಗಾದ
ನಟಿ?
ಸ್ಯಾಂಡಲ್‌ವುಡ್ ಪ್ರೇಕ್ಷಕರು ಬಹುಶಃ ಇದೇ ಮೊದಲ ಸಲ ಆಕೆಯನ್ನು ನೋಡುತ್ತಿದ್ದಾರೆ. ಹಾಗಾಗಿ, ಯಾರು ಈಕೆ ಎಂಬ ಕುತೂಹಲ ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ...

ವಿಕ್ರಾಂತ್ ರೋಣಗಾಗಿ ಬಂದ ಜಾಕ್ವೆಲಿನ್
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಸ್ಪೆಷಲ್ ನಂಬರ್ ಡ್ಯಾನ್ಸ್ ಇದೆ. ಈ ಹಾಡಿನಲ್ಲಿ ಸುದೀಪ್ ಜೊತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ್ದಾರೆ. ಇತ್ತೀಚಿಗಷ್ಟೆ ಜಾಕ್ವೆಲಿನ್ ಫರ್ನಾಂಡೀಸ್ ಬೆಂಗಳೂರಿಗೆ ಬಂದಿದ್ದ ವೇಳೆ ವಿಡಿಯೋ, ಫೋಟೋಗಳು ವೈರಲ್ ಆಗಿದ್ದವು.

ಜಾಕ್ವೆಲಿನ್‌ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ಇದೇ ಬೆಡಗಿ
ಈಗ ಕಿಚ್ಚ ಸುದೀಪ್ ಜೊತೆ ಮಿರ ಮಿರ ಮಿಂಚುತ್ತಿರುವ ಬೆಡಗಿಯ ಹೆಸರು ಜ್ಯೂಯಿಲಿ ವೈದ್ಯಾ. ಈಕೆ ಹಿಂದಿ ಇಂಡಸ್ಟ್ರಿಯ ಯುವ ಮತ್ತು ಬೇಡಿಕೆಯ ನೃತ್ಯ ಸಂಯೋಜಕಿ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ವೆಲಿನ್‌ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ಇದೇ ಬೆಡಗಿ.

'ಮಕ್ಕಿ' ನೋಡಿ ಫ್ಯಾನ್ ಆಗ್ಬಿಟ್ಟೆ
ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣದಲ್ಲಿ ಕೆಲಸ ಮಾಡಿದ ಜ್ಯೂಯಿಲಿ ವೈದ್ಯಾ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ವೈದ್ಯಾ, ''ಸುದೀಪ್ ಅವರ ಮಕ್ಕಿ (ಈಗ ಸಿನಿಮಾ ಹಿಂದಿ ವರ್ಷನ್) ಸಿನಿಮಾ ನೋಡಿದ್ಮೇಲೆ ಇವರ ಆಕ್ಟಿಂಗ್‌ಗೆ ಫ್ಯಾನ್ ಆದೆ. ವಿಕ್ರಾಂತ್ ರೋಣ ಹಾಡು ನೋಡಲು ಕಾಯುತ್ತಿದ್ದೇನೆ. ಜಾನಿ ಮಾಸ್ಟರ್‌ಗೆ ಥ್ಯಾಂಕ್ಸ'' ಎಂದು ಪೋಸ್ಟ್ ಹಾಕಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ಬಂದ ವೈದ್ಯ
ಜ್ಯೂಯಿಲಿ ವೈದ್ಯಾ ಬಾಲ್ಯದಿಂದಲೂ ವೃತ್ತಿಪರ ಡ್ಯಾನ್ಸರ್. ಬಹಳ ಸಣ್ಣ ವಯಸ್ಸಿನಿಂದಲೂ ಡ್ಯಾನ್ಸ್ ಕಲಿತಿರು ವೈದ್ಯಗೆ ತಾಯಿಯೇ ಶಕ್ತಿ. ಭರತನಾಟ್ಯ, ಟ್ರಡಿಷನಲ್, ಕ್ಲಾಸಿಕ್ ಡ್ಯಾನ್ಸ್, ವೆಸ್ಟರ್ನ್ ಡ್ಯಾನ್ಸ್‌ನಲ್ಲಿ ಪರಿಣಿತಿ ಹೊಂದಿದ್ದಾರೆ. ಹಿಂದಿಯ ಹಲವು ಟಿವಿ ಶೋಗಳಲ್ಲಿ, ಡ್ಯಾನ್ಸ್ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ವೈದ್ಯಾ ಕೆಲಸ ಮಾಡಿದ್ದಾರೆ.

ಟೈಗರ್ ಶ್ರಾಫ್ ಜೊತೆ ಡ್ಯಾನ್ಸ್ ಅಭ್ಯಾಸ
ಪರೇಶ್ ಶಿರೋದ್ಕರ್ ಬಳಿ ಜ್ಯೂಯಿಲಿ ವೈದ್ಯಾ ಡ್ಯಾನ್ಸ್ ತರಬೇತಿ ಪಡೆದುಕೊಂಡಿದ್ದಾರೆ. ಟೈಗರ್ ಶ್ರಾಫ್ ಸಹ ಇವರ ಬಳಿಯೇ ಡ್ಯಾನ್ಸ್ ಕಲಿತಿರುವುದು. ಇಬ್ಬರು ಒಟ್ಟಿಗೆ ಡ್ಯಾನ್ಸ್ ಅಭ್ಯಾಸ ಮಾಡಿದ್ದರು. ಟೈಗರ್ ಶ್ರಾಫ್ ಡ್ಯಾನ್ಸ್ ಮಾಡಿದ್ದ ಹಾಡೊಂದಕ್ಕೆ ಜ್ಯೂಯಿಲಿ ವೈದ್ಯಾ ಕೊರಿಯೋಗ್ರಫಿ ಮಾಡಿದ್ದರು.
Recommended Video

ಪ್ರಭುದೇವ ಜೊತೆ ಕೆಲಸ
ಮಾಧುರಿ ದೀಕ್ಷಿತ್, ಹೃತಿಕ್ ರೋಷನ್, ಕರೀಷ್ಮಾ ಕಪೂರ್ ಅಂತಹ ಡ್ಯಾನ್ಸರ್‌ಗಳು ಜ್ಯೂಯಿಲಿ ಅವರಿಗೆ ಬಹಳ ಇಷ್ಟ. ಅವರ ಡ್ಯಾನ್ಸ್‌ಗಳನ್ನು ನೋಡಿ ಬೆಳೆದಿದ್ದಾರೆ. ಅದೃಷ್ಟವಶಾತ್ ಪ್ರಭುದೇವ ಜೊತೆ ಸಹ ಕೆಲಸ ಮಾಡಿದರು. 'ಎಬಿಸಿಡಿ' (2013) ಚಿತ್ರದಲ್ಲಿ ಪ್ರಭುದೇವ ಜೊತೆ ಹೆಜ್ಜೆ ಹಾಕಿದ್ದರು. ಪ್ರಸ್ತುತ, ಬಹಳಷ್ಟು ಸೆಲೆಬ್ರಿಟಿಗಳಿಗೆ ಡ್ಯಾನ್ಸ್ ತರಬೇತಿ ಮಾಡುತ್ತಿದ್ದಾರೆ.