For Quick Alerts
  ALLOW NOTIFICATIONS  
  For Daily Alerts

  ಕಠಾರಿವೀರಕ್ಕೆ ಶುಭ ಹಾರೈಸಿದ ಗಾಡ್ ಫಾದರ್ ಮಂಜು

  |

  ನಿರ್ಮಾಪಕ ಕೆ. ಮಂಜು ಕಠಾರಿವೀರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಕಠಾರಿವೀರ ಚಿತ್ರದ ಪ್ರಚಾರಕಾರ್ಯದ ಅಂಗವಾಗಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಕಠಾರಿ ಸುಂದರಿ'ಗೆ ಫೋನ್ ಕರೆ ಮಾಡಿ ಅವರು ಶುಭ ಹಾರೈಸಿದ್ದಾರೆ. ಮುನಿರತ್ನ ನಿರ್ಮಾಣ ಹಾಗೂ ಉಪೇಂದ್ರ ಅಭಿನಯದ ಕಠಾರಿವೀರ ಚಿತ್ರದ ಪ್ರಚಾರಕಾರ್ಯ ಬಿರುಸಿನಿಂದ ನಡೆಯುತ್ತಿದೆ. ನಾಳೆ, ಅಂದರೆ ಮೇ 10, 2012 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  ಮುನಿರತ್ನ, ರಮ್ಯಾ ಹಾಗೂ ಉಪೇಂದ್ರ ಜೊತೆ ನಿರೂಪಕರಾದ ಗೌರೀಶ್ ಅಕ್ಕಿ ನಡೆಸುತ್ತಿದ್ದ ಸಂವಾದ ಕಾರ್ಯಕ್ರಮದ ಮಧ್ಯೆ ಕರೆ ಮಾಡಿ 'ಗುಡ್ ಲಕ್' ಹೇಳಿದ ಮಂಜು ಅವರಿಗೆ ರಮ್ಯಾ, 'ನೀವೇ ನಮಗೆ ಗಾಡ್ ಫಾದರ್' ಎಂದರು. ಅದಕ್ಕೆ ನಕ್ಕು ಸಮಾಧಾನದಿಂದ ಉತ್ತರ ಹೇಳಿದ ಮಂಜು "ದೇವಕನ್ಯೆ ರಮ್ಯಾ ನನ್ನ ಕನಸಿನಲ್ಲಿ ಬಂದು ನನ್ನ ಮೂಡ್ ಚೇಂಜ್ ಮಾಡಿದ್ದಾರೆ. ಈಗ ನಾನು ಹಾಗೂ ಮುನಿ ಮೊದಲಿನಂತೆ ಫ್ರೆಂಡ್ಸ್" ಎಂದಿದ್ದಾರೆ.

  ಮಂಜು ಮಾಡಿದ ಕರೆ, ಅಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ರಮ್ಯಾ, ಉಪೇಂದ್ರ ಹಾಗೂ ಮುನಿರತ್ನರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಸುಳ್ಳಲ್ಲ. ಕೃತಿಚೌರ್ಯದ ಬಗ್ಗೆಯೂ ಮಾತನಾಡಿದ ಮಂಜು, "ನಮ್ಮಂತ ನಿರ್ಮಾಪಕರು ಹಾಗೂ ಉಪೇಂದ್ರರಂಥಹ ನಿರ್ದೇಶಕ, ನಟರ ಬಳಿ ತುಂಬಾ ಮಂದಿ ಕಥೆ ಹೇಳಲು ಬರುತ್ತಾರೆ. ಅದನ್ನೆಲ್ಲಾ ನೆನಪಿಟ್ಟುಕೊಳ್ಳಲು ಆಗುವುದಿಲ್ಲ" ಎಂದು ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Producer K Manju told 'Good Luck' for Katari Veera Surasundarangi movie, by phone call. At the time of movie promotion in Suvarna TV, K Manju spoke many things except this also.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X