»   » ಇದಕ್ಕೆ ಖುಷಿ ಪಡಬೇಕೋ, ತಲೆ ಚಚ್ಚಿಕೊಳ್ಳಬೇಕೋ, ನೀವೇ ನಿರ್ಧರಿಸಿ.!

ಇದಕ್ಕೆ ಖುಷಿ ಪಡಬೇಕೋ, ತಲೆ ಚಚ್ಚಿಕೊಳ್ಳಬೇಕೋ, ನೀವೇ ನಿರ್ಧರಿಸಿ.!

Posted By:
Subscribe to Filmibeat Kannada

'ಸರ್, ನನ್ನ ಅಜ್ಜಿಯ ಚಿಕ್ಕಮ್ಮ ಇವತ್ತು ತೀರಿಕೊಂಡಿದ್ದಾರೆ. ಇಂದು ನನಗೆ ರಜೆ ಬೇಕು.'

'ನಿನ್ನೆ ರಾತ್ರಿಯಿಂದ ಒಂದೇಸಮನೆ ವಾಂತಿ-ಭೇದಿ. ಇಂದು ಆಫೀಸ್ ಗೆ ಬರಲು ಸಾಧ್ಯವಾಗುತ್ತಿಲ್ಲ.'

'ಮಧ್ಯರಾತ್ರಿಯಿಂದ ಶೀತ-ಜ್ವರ ಶುರು ಆಗಿದೆ. ಇಂದು ನಾನು ರಜೆ ಹಾಕುತ್ತಿದ್ದೇನೆ.'

ಒಂದು ದಿನದ ರಜೆಗಾಗಿ ಇಂತಹ ಕಾರಣಗಳು ತಮಿಳುನಾಡಿನಲ್ಲಿ ಪದೇ ಪದೇ ಮರುಕಳಿಸುವುದು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಿಡುಗಡೆ ಆಗುವ ದಿನ. [ಕಬಾಲಿಗೆ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಅವಕಾಶ]

ಈಗ 'ಕಬಾಲಿ' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಜುಲೈ 22 ರಂದು ತಮಿಳುನಾಡಿನಾದ್ಯಂತ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು ಮೇಲೆ ಹೇಳಿರುವ ಕಾರಣ ಕೊಟ್ಟು ರಜೆ ಪಡೆಯಲು ರೆಡಿಯಾಗಿದ್ದಾರೆ. ಇನ್ನೂ ಕೆಲವರು ಮೊಂಡು ಬಿದ್ದು, ಶುಕ್ರವಾರ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮುಂದೆ ಓದಿ.....

ಸಾಮೂಹಿಕ ರಜೆ ಹಾಕಲು....

'ತಲೈವಾ' ರಜನಿಕಾಂತ್ ಸಿನಿಮಾ ಬಿಡುಗಡೆ ಆಗುತ್ತೆ ಅಂದ್ರೆ ತಮಿಳುನಾಡಿನಲ್ಲಿ ಅಕ್ಷರಶಃ ಪೊಂಗಲ್ ಹಬ್ಬ ಆಚರಣೆ ಮಾಡಿದ ಹಾಗೆ. ಚೆನ್ನೈ ಒಂದರಲ್ಲೇ ಬರೋಬ್ಬರಿ 300ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 'ಕಬಾಲಿ' ಸಿನಿಮಾ ಬಿಡುಗಡೆ ಆಗುತ್ತಿದೆ. 'ಕಬಾಲಿ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ಅನೇಕರು ತಮ್ಮ ಕೆಲಸಕ್ಕೆ ರಜೆ ಹಾಕಲು ನಿರ್ಧರಿಸಿದ್ದಾರೆ. [ಸಿಲಿಕಾನ್ ಸಿಟಿಯಲ್ಲಿ ಕಬಾಲಿ ಕ್ರೇಜ್: 'ನೆರುಪ್ಪುಡಾ'...]

ಮಾಸ್ ಬಂಕ್ ಗೆ ಬ್ರೇಕ್ ಹಾಕಲು....

ಹುಷಾರಿಲ್ಲ, ಅಜ್ಜಿ (ಎಷ್ಟು ಬಾರಿ?) ತೀರಿಕೊಂಡಿದ್ದಾರೆ ಎಂಬ ಇಲ್ಲಸಲ್ಲದ ಕಾರಣ ಕೊಟ್ಟು ಸಾಮೂಹಿಕ ರಜೆ ಹಾಕುವ ಕಂಪನಿ ನೌಕರರ ಪ್ಲಾನ್ ಗೆ ಬ್ರೇಕ್ ಹಾಕಲು ಚೆನ್ನೈನ ಕೆಲ ಕಂಪನಿಗಳು ಕೌಂಟರ್ ಪ್ಲಾನ್ ಮಾಡಿದೆ. [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

ಕೌಂಟರ್ ಪ್ಲಾನ್ ಏನು.?

ಸಾಮೂಹಿಕ ರಜೆ/ಮಾಸ್ ಬಂಕ್ ಮಾಡುವ ಬದಲು ಜುಲೈ 22 ರಂದು ಚೆನ್ನೈನ ಕೆಲ ಕಂಪನಿಗಳು ರಜೆ ಘೋಷಣೆ ಮಾಡಿದೆ. [ಕಬಾಲಿಗೆ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಅವಕಾಶ]

ಇದು ಸತ್ಯವೇ.?

ನೀವು ನಂಬಲ್ಲ ಅಂದ್ರೂ ಇದೇ ಸತ್ಯ. ಚೆನ್ನೈ ನ FYNDUS ಕಂಪನಿ ಜುಲೈ 22 ರಂದು ರಜೆ ಘೋಷಿಸಿದೆ.

ಬೆಂಗಳೂರಿನ ಕಂಪನಿಗೂ ರಜೆ.!

ಬೆಂಗಳೂರಿನ OPUS ಕಂಪನಿ ಕೂಡ ಜುಲೈ 22 ರಂದು ರಜೆ ಘೋಷಿಸಿದೆ. ಸಾಲದಕ್ಕೆ ಕಂಪನಿ ನೌಕರರಿಗೆ ಹಾಗೂ ಕುಟುಂಬ ವರ್ಗದವರಿಗೆ 'ಕಬಾಲಿ' ಚಿತ್ರದ ಉಚಿತ ಟಿಕೆಟ್ಸ್ ನೀಡಲು ನಿರ್ಧರಿಸಿದೆ.

ಇದಕ್ಕೆ ನೀವೇನು ಅಂತೀರಾ.?

ಪರಭಾಷೆಯ ಸಿನಿಮಾಗಳು ಅಂದ್ರೆ ತಲೆ ಚಚ್ಚಿಕೊಳ್ಳುವ ಅಪ್ಪಟ ಕನ್ನಡ ಸಿನಿಪ್ರಿಯರು ಇದಕ್ಕೆ ಏನು ಹೇಳ್ತೀರಾ.? ನಿಮ್ಮ ಅಭಿಪ್ರಾಯಗಳನ್ನ ನಮಗೆ ತಿಳಿಸಿ....ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ....

English summary
Few Bangalore based and Chennai based companies have declared holiday on July 22nd, The day Tamil Movie 'Kabali' is releasing, to avoid mass sick leaves.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada