»   » ಕನ್ನಡಕ್ಕೆ ಬಂದ 'ಕಬಾಲಿ' ಮಗಳು ಸಾಯಿ ಧನ್ಸಿಕಾ!

ಕನ್ನಡಕ್ಕೆ ಬಂದ 'ಕಬಾಲಿ' ಮಗಳು ಸಾಯಿ ಧನ್ಸಿಕಾ!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ'ಯನ್ನ ನೀವು ನೋಡಿದ್ದರೇ, ಅಲ್ಲಿ ರಜನಿಕಾಂತ್ ಮಗಳ ಪಾತ್ರದಲ್ಲಿ ಒಬ್ಬ ಸ್ಟೈಲಿಶ್ ನಟಿ ಗಮನ ಸೆಳೆಯುತ್ತಾಳೆ.

ಸ್ಟೈಲಿಶ್ ಲುಕ್, ಮೋಹಕ ಅಭಿನಯ ರಜನಿಕಾಂತ್ ನಂತರ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಪಾತ್ರ ಅವರದ್ದು. ಇದೀಗ ಈ ನಟಿ ಕನ್ನಡಕ್ಕೆ ಬರ್ತಿದ್ದಾರೆ. ತಮಿಳಿನಲ್ಲಿ ಮೋಡಿ ಮಾಡುತ್ತಿದ್ದ ಸಾಯಿ ಧನ್ಸಿಕಾ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

ಹಾಗಾದ್ರೆ, ಸಾಯಿ ಧನ್ಸಿಕಾ ಕನ್ನಡದಲ್ಲಿ ಅಭಿನಯಿಸುತ್ತಿರುವ ಚಿತ್ರ ಯಾವುದು? ಸಾಯಿ ಧನ್ಸಿಕಾ ಹಿನ್ನಲೆ ಏನು? ಎಂಬುದು ಮುಂದೆ ಓದಿ......

'ಉದ್ಘರ್ಷ' ಚಿತ್ರಕ್ಕಾಗಿ ಕನ್ನಡಕ್ಕೆ ಬಂದ ಕಬಾಲಿ ಮಗಳು

ಕನ್ನಡದ 'ಉದ್ಘರ್ಷ' ಚಿತ್ರಕ್ಕಾಗಿ ತಮಿಳು ನಟಿ ಕನ್ನಡಕ್ಕೆ ಬರ್ತಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಕಬಾಲಿ ಮಗಳು ಮೊದಲ ಚಿತ್ರವನ್ನ ಆರಂಭಿಸುತ್ತಿದ್ದಾರೆ.

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ

'ಉದ್ಘರ್ಷ' ಚಿತ್ರವನ್ನ ಕನ್ನಡದ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲರ್ ಸಿನಿಮಾ ವಾಗಿದ್ದು, ಧನ್ಸಿಕಾ ಅವರದ್ದು ಯಾವ ರೀತಿಯ ಪಾತ್ರವೆಂಬುದು ಬಹಿರಂಗವಾಗಿಲ್ಲ.

ಠಾಕೂರ್ ಅನೂಪ್ ಸಿಂಗ್ ಗೆ ಜೋಡಿ

ಬಾಲಿವುಡ್ ನಟ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಠಾಕೂರ್ ಗೆ ಸಾಯಿ ಧನ್ಸಿಕಾ ಜೋಡಿಯಾಗಲಿದ್ದಾರೆ.

ಧನ್ಸಿಕಾ ಬಗ್ಗೆ ಪರಿಚಯ!

ತಮಿಳು ಚಿತ್ರ ನಟಿಯಾಗಿರುವ ಧನ್ಸಿಕಾ, 'ಪೆರನ್ಮೈ', 'ಅರವಾನ್', 'ಪರದೇಶಿ', ಹಾಗೂ 'ಕಬಾಲಿ' ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ, ಮಲಯಾಳಂನಲ್ಲೂ ಬ್ಯುಸಿಯಾಗಿದ್ದಾರೆ.

English summary
Actress Sai Dhansika of 'Kabaali' fame makes Sandalwood debut in Sunil Kumar Deasi directorial Kannada Movie 'Udgarsha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada