»   » ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!

ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರದ ಶೂಟಿಂಗ್ ಮುಂದಿನ ತಿಂಗಳು ಮಲೇಷಿಯಾದಲ್ಲಿ ಆರಂಭವಾಗಲಿದೆ. ಮಲೇಷಿಯಾ ಜೊತೆಗೆ ಹಾಂಗ್ ಕಾಂಗ್, ಸಿಂಗಪುರದಲ್ಲೂ ರಜನಿ ಸುತ್ತಾಡಲಿದ್ದಾರೆ. ಈ ನಡುವೆ ಕಬಾಲಿ ಚಿತ್ರದ ಎಳೆಯನ್ನು ಯಾರೋ ಹೊರ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಮೈಸೂರಿನ ಆಸುಪಾಸಿನಲ್ಲಿ ಶೂಟಿಂಗ್ ಮಾಡುವ ರಜನಿ ಅವರನ್ನು ಇದ್ದಕ್ಕಿದ್ದಂತೆ ಮಲೇಷಿಯಾ, ಸಿಂಗಪುರಕ್ಕೆ ಹಾರುತ್ತಿರುವುದೇಕೆ? ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಏಷ್ಯಾದ ದೇಶಗಳಲ್ಲಿನ ಕಾರ್ಮಿಕ ಸಮಸ್ಯೆ ಕಥೆಯನ್ನು ಚಿತ್ರ ಹೊಂದಿದೆಯಂತೆ. ಹೀಗಾಗಿ, ಮಲೇಷಿಯಾ, ಸಿಂಗಪುರ ಹಾಗೂ ದುಬೈ ವಾತಾವರಣವನ್ನು ಇಲ್ಲಿ ಪುನರ್ ಸೃಷ್ಟಿಸುವ ಬದಲು ಅಲ್ಲಿಗೆ ಹೋಗಿ ಚಿತ್ರೀಕರಿಸಲು ಚಿತ್ರ ತಂಡ ನಿರ್ಧರಿಸಿದೆ.

ಈಗಾಗಲೇ ಫ್ಯಾನ್ಸಿಗೆ ತಿಳಿದಿರುವಂತೆ ರಜನಿ ಅವರು ಈ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಡಾನ್ ಜೊತೆಗೆ ಏಷ್ಯಾದ ಅನೇಕ ದೇಶಗಳ ಕಾರ್ಮಿಕರು ಯಾವ ರೀತಿ ಲಿಂಕ್ ಹೊಂದಿರುತ್ತಾರೆ. ಬಾಷಾ ಚಿತ್ರದಂತೆ ಇಲ್ಲೂ ಫ್ಲಾಶ್ ಬ್ಯಾಕ್ ಕಥೆ ಇರುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಜನಿ ಜೊತೆ ಯಾರು ಯಾರು ನಟಿಸಲಿದ್ದಾರೆ ಎಂಬ ವಿವರ ಮಾತ್ರ ನಿರ್ದೇಶಕ ರಂಜಿತ್ ಹೊರ ಹಾಕಿದ್ದಾರೆ.

ಧನ್ಸಿಕಾಗೆ ಭರ್ಜರಿ ಚಾನ್ಸ್

2006ರಲ್ಲಿ ತಿರುಡಿ ಚಿತ್ರದ ಮೂಲಕ ಕಾಲಿವುಡ್ ಗೆ ಕಾಲಿಟ್ಟ ಧನ್ಸಿಕಾ, ಪರದೇಶಿ ಚಿತ್ರಕ್ಕಾಗಿ ಫಿಲಂಫೇರ್ (ಪೋಷಕ ಪಾತ್ರ) ಪ್ರಶಸ್ತಿ ಗೆದ್ದಿದ್ದು, ಈಗ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವ ಕನಸು ಕಬಾಲಿ ಚಿತ್ರದ ಮೂಲಕ ಈಡೇರಿದೆ. ಕಬಾಲಿ ಚಿತ್ರದಲ್ಲಿ ರಜನಿ ಅವರ ಪುತ್ರಿಯ ಪಾತ್ರದಲ್ಲಿ ಧನ್ಸಿಕಾ ನಟಿಸುವ ಸಾಧ್ಯತೆಯಿದೆ.

ಕಾರ್ತಿಕ್ ಸುಬ್ಬರಾಜ್ ತಂದೆಗೂ ಪಾತ್ರ

ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ತಂದೆ ಗಜರಾಜ್ ಅವರಿಗೂ ರಜನಿ ಜೊತೆ ನಟಿಸುವ ಯೋಗ ಸಿಕ್ಕಿದೆ. ರಜನಿ ಫ್ಯಾನ್ಸ್ ಆಗಿರುವ ಗಜರಾಜ್ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆಯಂತೆ.

ರಂಜಿತ್ ಗೆ ಫುಲ್ ಫ್ರೀಡಂ ನೀಡಿದ ರಜನಿ

ಯುವ ನಿರ್ದೇಶಕ ರಂಜಿತ್ ಗೆ ಫುಲ್ ಫ್ರೀಡಂ ನೀಡಿರುವ ರಜನಿಕಾಂತ್ ಅವರು ಪಾತ್ರವರ್ಗ ಆಯ್ಕೆ, ಚಿತ್ರಕಥೆ, ಲೊಕೇಷನ್ ಬಗ್ಗೆ ಏನು ರಜನಿ ಪ್ರಶ್ನಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ರಾಧಿಕಾ ಆಪ್ಟೆ ನಾಯಕಿ ಪಾತ್ರ

ರಾಧಿಕಾ ಆಪ್ಟೆ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯಿದೆ. ಚೆನ್ನೈಗೆ ಆಗಮಿಸಿ ಫೋಟೋ ಶೂಟ್ ಮಾಡುವ ಸಾಧ್ಯತೆಯಿದೆ.

ಸೆಪ್ಟೆಂಬರ್ 17ಕ್ಕೆ ಫಸ್ಟ್ ಲುಕ್ ರಿಲೀಸ್

ಸೆಪ್ಟೆಂಬರ್ 17ಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಬಾಲಿ ಚಿತ್ರದ ಬಗ್ಗೆ ಲಿಂಗಾಗಿಂತ ಹೆಚ್ಚಿನ ಕ್ರೇಜ್ ಕಂಡು ಬಂದಿದೆ.

English summary
The shoot of Superstar Rajinikanth's Kabali is all set to get underway next month in Malaysia. It is also being reported that the crew will shoot in places like Hong Kong and Singapore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada