Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುಬೈನಲ್ಲಿ ರಾಜ್ ಕಪ್: ಹೆಡ್ ಬುಷ್, ಕಬ್ಜ ಸಿನಿಮಾದ್ದೇ ಹವಾ!
ಸ್ಯಾಂಡಲ್‌ವುಡ್ ಜನಪ್ರಿಯ ಕ್ರಿಕೆಟ್ ಪಂದ್ಯಾವಳಿ ರಾಜ್ ಕಪ್‌ನ 5ನೇ ಆವೃತ್ತಿ ದುಬೈನಲ್ಲಿ ನಡೆಯುತ್ತಿದೆ. ರಾಜ್ ಕಪ್ ಯುಎಇನಲ್ಲಿ ನಡೆಯಬೇಕು ಅನ್ನೋದು ಪುನೀತ್ ರಾಜ್‌ಕುಮಾರ್ ಕನಸಾಗಿತ್ತು. ಹೀಗಾಗಿ ರಾಜ್ ಕಪ್ ಅನ್ನು ಈ ಬಾರಿ ದುಬೈನಲ್ಲಿಯೇ ಆಯೋಜಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ದುಬೈನಲ್ಲಿ ಕನ್ನಡ ತಾರೆಯರ ದಂಡು ಬೀಡು ಬಿಟ್ಟಿದೆ. ಈ ಪಂದ್ಯಾವಳಿಯನ್ನು ಕರ್ನಾಟಕ ನೃತ್ಯ ನಿರ್ದೇಶಕರರು ಹಾಗೂ ಡ್ಯಾನ್ಸರ್ಸ್ ಸಂಘ ಆಯೋಜನೆ ಮಾಡುತ್ತಿದೆ. ದುಬೈನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯವಾಳಿ ನಡೆಯುತ್ತಿದೆ. ಈ ವೇಳೆ ಕನ್ನಡದ ಎರಡು ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ಸ್ಯಾಂಡಲ್‌ವುಡ್
ನಟ
ರಮೇಶ್
ಅರವಿಂದ್‌ಗೆ
'ಡಾ.
ಶಿವರಾಮ
ಕಾರಂತ
ಹುಟ್ಟೂರು
ಪ್ರಶಸ್ತಿ'
ದುಬೈನಲ್ಲಿ 'ಕಬ್ಜ' ಸೆಲೆಬ್ರೆಷನ್
ಇತ್ತೀಚೆಗಷ್ಟೇ ಆರ್ ಚಂದ್ರು ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ 'ಕಬ್ಜ' ಟೀಸರ್ ರಿಲೀಸ್ ಆಗಿದೆ. ರಿಲೀಸ್ ಆಗುತ್ತಿದ್ದಂತೆ ಟೀಸರ್‌ಗೆ ಜನಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಸುಮಾರು ಕಬ್ಜ ಟೀಸರ್‌ಗೆ ಸುಮಾರು 30 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದೇ ವೇಳೆ ಉಪೇಂದ್ರ ಸೇರಿದಂತೆ 'ಕಬ್ಜ' ತಂಡ ದುಬೈಗೆ ಹಾರಿದೆ.
ದುಬೈನಲ್ಲಿ ರಾಜ್ ಕಪ್ ಪಂದ್ಯದ ವೇಳೆ 'ಕಬ್ಜ' ಸಿನಿಮಾವನ್ನು ಪ್ರಚಾರ ಮಾಡುವ ಯೋಜನೆ ಇದೆ. ಸದ್ಯ ರಿಯಲ್ ಉಪೇಂದ್ರ ರಾಜ್ ಕಪ್ ಪಂದ್ಯಾವಳಿಯನ್ನು ವೀಕ್ಷಿಸಲು ದುಬೈಗೆ ತೆರಳಿದ್ದಾರೆ. ಇವರೊಂದಿಗೆ ಕಬ್ಜ ತಂಡ ಕೂಡ ಹೋಗಿರೋದು ಮತ್ತೊಂದು ವಿಶೇಷ.
'ಕ್ರಾಂತಿ'
ಸಿನಿಮಾದ
ಪೋಲೆಂಡ್
ಮೇಕಿಂಗ್
ವಿಡಿಯೋ
ಲೀಕ್:
ದರ್ಶನ್
ಸೈಲ್‌ಗೆ
ಫ್ಯಾನ್ಸ್
ಫಿದಾ!
ಏರ್‌ಪೋರ್ಟ್‌ನಿಂದಲೇ 'ಹೆಡ್ ಬುಷ್' ತಂಡ ಪ್ರಚಾರ
ಡಾನ್ ಜಯರಾಜ್ ಕಥೆಯನ್ನಿಟ್ಟುಕೊಂಡು ನಿರ್ಮಿಸಿರೋ ಸಿನಿಮಾ 'ಹೆಡ್ ಬುಷ್'. ಈ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಆರಂಭ ಮಾಡಲಾಗಿದೆ. ಧನಂಜಯ್ ದುಬೈಗೆ ರೆಟ್ರೋ ಸ್ಟೈಲಿನಲ್ಲೇ ಪ್ರಯಾಣ ಮಾಡಿದ್ದರು. ಬೆಂಗಳೂರಿನಿಂದ ಜಯರಾಜ್ ಲುಕ್‌ನಲ್ಲಿಯೇ ಕಾಣಿಸಿಕೊಂಡಿದ್ದರು.
ಧನಂಜಯ್ ದುಬೈನಲ್ಲೂ ರೆಟ್ರೋ ಲುಕ್‌ನಲ್ಲಿಯೇ ಓಡಾಡುತ್ತಿದ್ದಾರೆ. ರಾಜ್ ಕಪ್ ಪಂದ್ಯಾವಳಿ ಒಂದು ಕಡೆಯಾದರೆ, ಇನ್ನೊಂದು ಕಡೆ 'ಹೆಡ್ ಬುಷ್' ಪ್ರಚಾರ ಕೂಡ ಜೋರಾಗಿಯೇ ನಡೆಯುತ್ತಿದೆ.

ಆಸ್ಪತ್ರೆಗೆ
ದೌಡಾಯಿಸಿದ
ರಶ್ಮಿಕಾ:
ನಟಿಗೆ
ಕಾಡುತ್ತಿರುವ
ಸಮಸ್ಯೆಯೇನು..?
ರಾಜ್ ಕಪ್‌ಗೆ ಸ್ಯಾಂಡಲ್‌ವುಡ್ ದಿಗ್ಗಜರು
ರಾಜ್ ಕಪ್ ಪಂದ್ಯಾವಳಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾವಳಿ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯಗಳಲ್ಲಿ ಭಾಗವಹಿಸಲು ಸ್ಯಾಂಡಲ್‌ವುಡ್ ದುಬೈಗೆ ಹಾರಿದ್ದಾರೆ. ಈಗಾಗಲೇ ಉಪೇಂದ್ರ, ನೀನಾಸಂ ಸತೀಶ್, ಧನಂಜಯ್, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್, ರಾಗಿಣಿ ದ್ವಿವೇದಿ, ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ ಸೇರಿದಂತೆ ಹಲವು ಮಂದಿ ದುಬೈನಲ್ಲಿದ್ದಾರೆ.
ಸುಮಾರು 150ಕ್ಕೂ ಅಧಿಕ ಮಂದಿ ರಾಜ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಯುಎಇಯಲ್ಲಿರುವ ಎನ್‌ಆರ್‌ಐಗಳು ಪಂದ್ಯ ವೀಕ್ಷಣೆ ಮಾಡಲಿದ್ದಾರೆ. ಇದೇ ವೇಳೆ ವಿದೇಶಿ ಕನ್ನಡಿಗರಿಗೆ ಸಿನಿಮಾ ಬಗ್ಗೆ ಪ್ರಚಾರ ಮಾಡಲು ರಾಜ್ ಕಪ್ ಅನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ.