ಮತ್ತೊಂದು ವಿಭಿನ್ನ ಪಾತ್ರ ಹೊತ್ತು ಬಂದ ವಿಜಯ್ ಸೇತುಪತಿ

ಕಾಲಿವುಡ್ ನಟ ವಿಜಯ್ ಸೇತುಪತಿ ಎಂದ ತಕ್ಷಣ ಅವರ ಡಿಫರೆಂಟ್ ಪಾತ್ರಗಳು ಕಣ್ ಮುಂದೆ ಬರುತ್ತವೆ. ಪ್ರತಿ ಸಿನಿಮಾದಲ್ಲಿಯೂ ಪ್ರಯೋಗ ಮಾಡುವ ಈ ನಟ ಈಗ ಮತ್ತೊಂದು ಹೊಸ ಪಾತ್ರದ ಹೊತ್ತು ಬಂದಿದ್ದಾರೆ.

ಕೆಲ ದಿನಗಳ ಹಿಂದೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಗೆಟಪ್ ನ ವಿಜಯ್ ಸೇತುಪತಿ ಫೋಟೋ ರಿವೀಲ್ ಆಗಿದೆ. ಅವರ ಗೆಟಪ್ ನೋಡಿ ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ.

ಅಂದಹಾಗೆ, ವಿಜಯ್ ಸೇತುಪತಿ ಈ ರೀತಿ ಬದಲಾಗಿರುವುದು ತಮ್ಮ ಮುಂದಿನ ಸಿನಿಮಾ 'ಕಡೈಸಿ ವ್ಯಾವಸಾಯಿ' (Kadaisi Vivasayi) ಚಿತ್ರಕ್ಕಾಗಿ. ಈ ಸಿನಿಮಾದ ಅವರ ಲುಕ್ ನೋಡಿ ಏನಿದು ಈ ರೀತಿ ಇದೆ ಎನ್ನುವ ಕುತೂಹಲ ಮೂಡುತ್ತಿದೆ.

kadaisi vivasayi tamil movie vijay sethupathi look revealed

ಪಂಚೆ, ಅಂಗಿ, ಅದರ ಮೇಲೊಂದು ಅಂಗಿ, ಐದಾರು ಉಂಗುರ, ವಾಚ್ ಗಳು, ಸರಗಳು, ರುದ್ರಾಕ್ಷಿ, ವಿಭೂತಿ ಇದೆಲ್ಲ ವಿಜಯ್ ಸೇತುಪತಿಗೆ ವಿಭಿನ್ನ ಲುಕ್ ನೀಡಿದೆ. ಮಣಿಕಂದನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ 85 ವರ್ಷದ ನಳಂದಿ ಎಂಬ ರೈತ ಕಾಣಿಸಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಹೇಗೆ ವ್ಯವಸಾಯದ ಹಳೆ ಪದ್ಧತಿಗಳು ಮರೆಯಾಗುತ್ತಿದೆ ಎನ್ನುವುದನ್ನು ಸಿನಿಮಾದಲ್ಲಿ ಹೇಳಲಾಗಿದೆಯಂತೆ.

ಯೋಗಿ ಬಾಬು ಮತ್ತು ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಿದ್ದಾರೆ. ಇಳಯರಾಜ ಸಿನಿಮಾಗೆ ಸಂಗೀತ ನೀಡಲಿದ್ದಾರೆ.

More from Filmibeat

English summary
'Kadaisi Vivasayi' tamil movie Vijay Sethupathi look revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X