»   » ಕಮಲ್ ಹಾಸನ್ ಚಿತ್ರಕ್ಕೆ ನಮ್ಮ ರಮ್ಯಾ ಎಂಟ್ರಿ

ಕಮಲ್ ಹಾಸನ್ ಚಿತ್ರಕ್ಕೆ ನಮ್ಮ ರಮ್ಯಾ ಎಂಟ್ರಿ

Posted By:
Subscribe to Filmibeat Kannada

ಚಿತ್ರರಂಗದಲ್ಲಿ ಒಬ್ಬರಿಗೆ ಚಾನ್ಸ್ ಮಿಸ್ ಆದ್ರೆ ಇಬ್ಬರಿಗೂ ಅದು ಲಾಭವಾಗುವುದು ಮಾಮೂಲಿ. ಕಾಲಿವುಡ್, ಟಾಲಿವುಡ್ ಹಾಗೂ ಇತ್ತೀಚೆಗೆ ಬಾಲಿವುಡ್ ಗೂ ಕಾಲಿಟ್ಟಿರುವ ಕಾಜಲ್ ಅಗರವಾಲ್ ಗೂ ಇದೇ ರೀತಿ ಆಗಿದೆ.

ನಿರ್ಮಾಪಕ ಎನ್ ಲಿಂಗುಸ್ವಾಮಿ ಅವರ ನಿರ್ಮಾಣದ ಕಮಲ್ ಹಾಸನ್ ಅವರ ಹೊಸ ಚಿತ್ರದ ಆಫರ್ ಅನ್ನು ಕಾಜಲ್ ಬದಿಗೊತ್ತಿದ್ದಾರೆ. ಬಾಲಿವುಡ್ ನಲ್ಲಿ ಬ್ಯುಸಿ ಇದ್ದೇನೆ. ಡೇಟ್ಸ್ ಪ್ರಾಬ್ಲಂ ಒಳ್ಳೆ ಅವಕಾಶ ಮಿಸ್ ಆಯ್ತು ಎಂದು ಕಾಜಲ್ ಹಲುಬುತ್ತಿದ್ದಾಳೆ.

ಸದ್ಯಕ್ಕೆ ಈ ದೊಡ್ಡ ಆಫರ್ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಮನೆ ಬಾಗಿಲು ಬಡಿಯುತ್ತದೆ. ಆದರೆ, ಈ ಬಗ್ಗೆ ರಮ್ಯಾ ಎಲ್ಲೂ ಬಾಯ್ಬಿಟ್ಟಿಲ್ಲ ಹಾಗೂ ಟ್ವೀಟ್ ಕೂಡಾ ಮಾಡಿಲ್ಲ.

ತಮಿಳಿನಲ್ಲಿ ವಿಜಯ್ ಜೊತೆ ತುಪಾಕಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾಜಲ್ ಅಗರವಾಲ್ ಈಗ ವರ್ಷವಿಡಿ ಬ್ಯುಸಿಯಂತೆ. ಇಲ್ಲದಿದ್ದರೆ ಕಮಲ್ ಸರ್ ಜೊತೆ ಚಿತ್ರ ಎಂದರೆ ಹೇಗೆ ಮಿಸ್ ಮಾಡಿಕೊಳ್ಳುತ್ತಿದೆ. ಮತ್ತೊಮ್ಮೆ ಅವಕಾಶ ಸಿಗಬಹುದು ನೋಡೋಣ ಎಂದಿದ್ದಾಳೆ.

ಸದ್ಯಕ್ಕೆ ಚಿತ್ರ ಮಾತುಕತೆ ಹಂತದಲ್ಲಿರುವುದರಿಂದ ರಮ್ಯಾ ಅವರು ನಟಿಸುತ್ತಾರೋ ಇಲ್ಲವೋ ಇನ್ನೂ ಗೊತ್ತಿಲ್ಲ. ಚೆನ್ನೈನ ನಮ್ಮ ಪ್ರತಿನಿಧಿ ನಿರ್ಮಾಪಕ ಲಿಂಗುಸ್ವಾಮಿ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ.

ಮುಂಬರುವ ದಿನಗಳಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ. ಒಟ್ಟಾರೆ ಬಹುತೇಕ ರಮ್ಯಾ ಅವರು ಆಗಸ್ಟ್ ನಂತರ ಮತ್ತೆ ಕಾಲಿವುಡ್ ಗೆ ಕಾಲಿಡುವುದು ಖಚಿತ ಎನ್ನಬಹುದು.. ಸದ್ಯಕ್ಕೆ ಈ ಚಿತ್ರದ ಬಗ್ಗೆ ನಡೆದ ಬೆಳವಣಿಗೆ ಚಿತ್ರಸರಣಿಯಲ್ಲಿ ನಿಮ್ಮ ಮುಂದಿದೆ.

ರಮ್ಯಾ ಕೈಲಿರುವ ಚಿತ್ರಗಳು

ನೀರ್ ದೋಸೆ, ದಿಲ್ ಕಾ ರಾಜಾ, ಆರ್ಯನ್ ಜೊತೆಗೆ ತೆಲುಗಿನ ಅರುಂಧತಿ ಖ್ಯಾತಿ ಕೋಡಿ ರಾಮಕೃಷ್ಣ ಅವರ ಒಂದು ಚಿತ್ರ, ಸುದೀಪ್ ನಿರ್ದೇಶನ, ನಾಯಕತ್ವದ ಒಂದು ಚಿತ್ರ ಎಲ್ಲವೂ ರಮ್ಯಾ ಅವರು ಬ್ಯುಸಿಯಾಗಿಡಲಿದೆ.

ಪುರುಸೊತ್ತು ಮಾಡಿಕೊಂಡು ಈ ಟಿವಿ ಸೀರಿಯಲ್ ಅಶ್ವಿನಿ ನಕ್ಷತ್ರ ಕಥೆ ಹೇಳುವ ಜವಾಬ್ದಾರಿ ಕೂಡಾ ರಮ್ಯಾ ಹೆಗಲಿಗೇರಿಸಿಕೊಂಡಿದ್ದಾರೆ.

ರಮ್ಯಾ ಬೆಳವಣಿಗೆ

ರಮ್ಯಾ ಆಗಿ ತಮಿಳು ಚಿತ್ರರಂಗ (ಕಾಲಿವುಡ್) ಪ್ರವೇಶಿಸಿದವರು ನಂತರ ದಿವ್ಯ ಸ್ಪಂದನ ಆದರು. ಕುತ್ತು ರಮ್ಯಾ ಎಂದು ಕರೆಯಲ್ಪಡುತ್ತಿದ್ದ ರಮ್ಯಾ ನಂತರ ಧನುಷ್ ಜೊತೆ ಪೊಲ್ಲಾದವನ್, ಸೂರ್ಯ ಜೊತೆ ವಾರನಂ ಆಯಿರಮ್ ಚಿತ್ರದಲ್ಲಿ ಅಭಿನಯಿಸಿದರು.

ಲೇಖಾಗೂ ಅವಕಾಶ

ಮೊದಲಿಗೆ ಲೇಖಾ ವಾಷಿಂಗ್ಟನ್ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ನಂತರ ಬೇರೆ ಪಾತ್ರ ನೀಡುವ ಭರವಸೆ ನೀಡಲಾಯಿತು. ಲೇಖಾ ಈ ಚಿತ್ರದಲ್ಲಿ ನಾಯಕಿ ಅಲ್ಲದಿದ್ದರೂ ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಾರೆ ಎಂದು ನಿರ್ಮಾಪಕ ಲಿಂಗುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿವೇಕ್ ಮುಖ್ಯ ಪಾತ್ರ

ಪ್ರಮುಖ ಪಾತ್ರದಲ್ಲಿ ನಾಯಕನ ಜೊತೆಗೆ ವಿವೇಕ್ ಇರುತ್ತಾರಂತೆ. ಎರಡು ದಶಕಗಳ ನಂತರ ಕಮಲ್ ಹಾಸನ್ ಜೊತೆ ನಂಬರ್ ಒನ್ ಹಾಸ್ಯ ಪಾತ್ರಧಾರಿ ವಿವೇಕ್ ಕಾಣಿಸಿಕೊಳ್ಳುತ್ತಿರುವುದು ಕುತೂಹಲಕಾರಿಯಾಗಿದೆ.

ಚಿತ್ರದ ಹೆಸರೇನು?

ವಿಶ್ವರೂಪಂ -2 ನಿರೀಕ್ಷೆಯಲ್ಲಿ ಜನರಿರುವಾಗ ಈ ಚಿತ್ರ ಕೂಡಾ ಕುತೂಹಲ ಹುಟ್ಟಿಸಿದ್ದು ,ಚಿತ್ರದ ಹೆಸರು 'ಉತ್ತಮ ವಿಲನ್' ಎಂದು ಇಡಲಾಗಿದೆ ಎಂಬ ಸುದ್ದಿಯಿದೆ. ಕಮಲ್ ಹಾಸನ್ ಅವರು ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರ ತ್ವರಿತ ಗತಿಯಲ್ಲಿ ಚಿತ್ರೀಕರಣ ಮುಗಿಸುವ ಸಾಧ್ಯತೆ ಹೆಚ್ಚಾಗಿದೆ.

English summary
Kajal Aggarwal has possibly missed out the biggest film of her career as the actress has reportedly turned down the offer to star in Kamal Hassan's next film produced by N Lingusamy. Well, now the offer has landed in Ramya aka Divya Spandana's doors.
Please Wait while comments are loading...