»   » ರಮೇಶ್ ಅರವಿಂದ್ ಮತ್ತು ಕಾಜಲ್ ಕಾಂಬಿನೇಶನ್ ಚಿತ್ರಕ್ಕೆ ಅದ್ದೂರಿ ಚಾಲನೆ!

ರಮೇಶ್ ಅರವಿಂದ್ ಮತ್ತು ಕಾಜಲ್ ಕಾಂಬಿನೇಶನ್ ಚಿತ್ರಕ್ಕೆ ಅದ್ದೂರಿ ಚಾಲನೆ!

Posted By:
Subscribe to Filmibeat Kannada

ನಟ ರಮೇಶ್ ಅರವಿಂದ್ ಹಿಂದಿಯ 'ಕ್ವೀನ್' ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಎಲ್ಲ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಸಿನಿಮಾದ ಹೊಸ ನಾಯಕಿಯಾಗಿ ಈಗ ಕಾಜಲ್ ಅಗರ್ ವಾಲ್ ಎಂಟ್ರಿ ಕೊಟ್ಟಿದ್ದಾರೆ.

'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

'ಕ್ವೀನ್' ಚಿತ್ರದ ತಮಿಳು ಅವತರಣಿಕೆಗೆ ಅಧಿಕೃತವಾಗಿ ಈಗ ನಟಿ ಕಾಜಲ್ ನಾಯಕಿಯಾಗಿದ್ದಾರೆ. ಹಿಂದಿಯಲ್ಲಿ ಕಂಗನಾ ಮಾಡಿದ ಪಾತ್ರವನ್ನು ಇಲ್ಲಿ ಕಾಜಲ್ ನಿರ್ವಹಿಸಲಿದ್ದಾರೆ. ಜೊತೆಗೆ ಈ ಸಿನಿಮಾಗೆ 'ಪ್ಯಾರಿಸ್.. ಪ್ಯಾರಿಸ್' ಎಂದು ಹೆಸರಿಡಲಾಗಿದ್ದು, ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. 'ಪ್ಯಾರಿಸ್.. ಪ್ಯಾರಿಸ್' ಸಿನಿಮಾದ ಮುಹೂರ್ತ ನಿನ್ನೆ (ಸಪ್ಟೆಂಬರ್ 24) ನೆರವೇರಿದೆ.

Kajal Aggarwal's 'Paris Paris' movie launched

'ಕ್ವೀನ್' ಚಿತ್ರದ ಕನ್ನಡ ಮತ್ತು ತಮಿಳು ಅವತರಣಿಕೆಯನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಚಿತ್ರಕ್ಕೆ ಪಾರೂಲ್ ನಾಯಕಿಯಾಗಿದ್ದಾರೆ. 'ಬಟರ್ ಫ್ಲೈ' ಹೆಸರಿನಲ್ಲಿ ಈಗಾಗಲೇ ಕನ್ನಡದ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ.

English summary
Tamil remake of 'Queen' featuring Kajal Aggarwal launched, titled 'Paris Paris'. the movie is direted by Ramesh Aravind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada