For Quick Alerts
  ALLOW NOTIFICATIONS  
  For Daily Alerts

  ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಕಾಜಲ್ ಗೆ ನೆಟ್ಟಿಗರಿಂದ ಮೆಚ್ಚುಗೆ

  |

  ಸಿನಿಮಾ ನಟಿಯರು ಅಂದ್ರೆ ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳ ಮನಸ್ಸು ಕದ್ದಿರುತ್ತಾರೆ. ಸದಾ ಮೇಕಪ್ ಮೂಲಕವೇ ನೋಡಿರುವ ಫ್ಯಾನ್ಸ್ ಗೆ ಅವರು ಮೇಕಪ್ ಇಲ್ಲದೇ ಹೇಗಿರ್ತಾರೆ ಎಂಬುದು ಬಹುತೇಕರಿಗೆ ಗೊತ್ತಿರಲ್ಲ.

  ಮೇಕಪ್ ಇಲ್ಲದೇ ನಟಿಯರು ಕೂಡ ಎಲ್ಲೋ ಹೋಗಲ್ಲ. ಹಾಗಾಗಿ, ಅವರ ನಿಜ ಸೌಂದರ್ಯದ ಅರಿವು ಸಾಮಾನ್ಯ ಜನರಿಗೆ ಇರಲ್ಲ. ಇದೀಗ, ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲ್ ತಮ್ಮ ನಿಜ ಸೌಂದರ್ಯವನ್ನ ಬಹಿರಂಗಪಡಿಸಿದ್ದಾರೆ.

  ಭಾರತದ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ.!

  ಮೇಕಪ್ ಇಲ್ಲದ ಫೋಟೋ ಹಂಚಿಕೊಂಡು ತಮ್ಮ ನಿಜ ಬಣ್ಣ ಹಾಗೂ ಅಂದದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಾಜಲ್ ಹಂಚಿಕೊಂಡ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಕೂಡ ಭೇಷ್ ಎನ್ನುತ್ತಿದ್ದಾರೆ.

  ದೀಪಿಕಾ, ಪ್ರಿಯಾಂಕಾ ಮದ್ವೆ ನಂತರ ಕಾಜಲ್ ಅಗರ್ವಾಲ್.?

  ಈ ಫೋಟೋಗಳನ್ನ ಶೇರ್ ಮಾಡಿ ಇತರರಿಗೆ ಸಂದೇಶ ನೀಡಿರುವ ಕಾಜಲ್ 'ಸೌಂದರ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಆ ಉತ್ಪನ್ನಗಳು ನಮ್ಮನ್ನು ಸುಂದರವಾಗಿ ತೋರಿಸುತ್ತಿವೆ. ಮೇಕಪ್ ನಮ್ಮ ದೈಹಿಕ ಸೌಂದರ್ಯವನ್ನು ಹೆಚ್ಚಿಸಬಹುದು ಆದರೆ ಇದು ನಮ್ಮ ವ್ಯಕ್ತಿತ್ವವನ್ನು ಹಾಗೂ ನಾವ್ಯಾರು? ಎಂಬುದನ್ನು ಹೇಳಲ್ಲ. ನಾವು ಹೇಗಿದ್ದೇವೋ ಹಾಗೆ ಪ್ರೀತಿಸುವುದೇ ನಮ್ಮ ನಿಜವಾದ ಸೌಂದರ್ಯ'' ಎಂದಿದ್ದಾರೆ.

  ಕಾಜಲ್ ಅವರ ಈ ಪೋಸ್ಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ ಬಂದಿದೆ. ನಿಜಕ್ಕೂ ಕಾಜಲ್ ಅವರ ಧೈರ್ಯ ಮೆಚ್ಚಬೇಕು, ಸೆಲೆಬ್ರಿಟಿಗಳು ಯಾರೂ ಇಂತಹ ಸಾಹಸಕ್ಕೆ ಕೈಹಾಕಲ್ಲ. ಇದು ಇತರರಿಗೆ ಮಾರ್ಗದರ್ಶನವಾಗಬೇಕು ಎಂದು ಕಾಮೆಂಟ್ ಮಾಡ್ತಿದ್ದಾರೆ.

  English summary
  South actress Kajal aggarwal shared her without make up photo in instagram. fans are very positive after watched her photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X