»   » ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್

ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್

By: ಸೋನು
Subscribe to Filmibeat Kannada

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ-ನಟ-ನಿರ್ಮಾಪಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ಹತ್ತು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಈಗ ಚಿತ್ರ ವಿತರಣೆ ಕ್ಷೇತ್ರದಲ್ಲೂ ಕೈಯಾಡಿಸುತ್ತಿದ್ದು ತಮಿಳಿನ 'ಪುಲಿ' ಬಾಲ ಹಿಡಿದು ನಿಂತಿದ್ದಾರೆ. ಕನ್ನಡದ ಕಿಚ್ಚ ಸುದೀಪ ಕೂಡಾ ನಟಿಸಿರುವ ತಮಿಳು ನಟ ವಿಜಯ್ ಅಭಿನಯದ ಈ ಚಿತ್ರವನ್ನು ಹೆಚ್ಚು ಕಡೆ ಹೆಚ್ಚೆಚ್ಚು ಜನರಿಗೆ ತಲುಪಿಸುವ ಹೊಣೆ ಹೊತ್ತಿದ್ದಾರೆ.

ಎಸ್.ನಾರಾಯಣ್ ಅವರು ಲೇಟೆಸ್ಟ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನಪ್ಪಾ ಅಂದ್ರೆ, ತಮಿಳು ನಟ ಇಳೆಯದಳಪತಿ ವಿಜಯ್ ಹಾಗೂ ನಮ್ಮ ಕನ್ನಡದ ನಟ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕಾಲಿವುಡ್ ನ ಈ ವರ್ಷದ ಬಹುನಿರೀಕ್ಷಿತ 'ಪುಲಿ' ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಸುದ್ದಿ.[ವಿಜಯ್ ಹುಟ್ಟುಹಬ್ಬಕ್ಕೆ 'ಪುಲಿ' ಟೀಸರ್ ಗಿಫ್ಟ್]

Kala Samrat S Narayan takes up distribution rights in Vijay's 'Puli'

ಇತ್ತೀಚೆಗಷ್ಟೇ ಬಾಕ್ಸಾಫೀಸ್ ಧೂಳೆಬ್ಬಿಸಿದ್ದ ತೆಲುಗು ಚಿತ್ರದ ವಿತರಣಾ ಹಕ್ಕನ್ನು ಕೂಡ ನಮ್ಮ ಕನ್ನಡದವರೇ ವಹಿಸಿಕೊಂಡಿದ್ದು ಕಂಡರೆ ಈಗ ಇದೊಂಥರಾ ಟ್ರೆಂಡಿ ಆದಂತಿದೆ.

ಬಹುಮುಖ ಪ್ರತಿಭೆ ಎಸ್.ನಾರಾಯಣ್ ಅವರು ಇದೀಗ ತಮಿಳು 'ಪುಲಿ' ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸಲು ಪ್ರಮುಖ ಕಾರಣವೇನೆಂದರೆ, ನಮ್ಮ ಕನ್ನಡದ ನಟರೇ ಆದ ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಇರಲೂಬಹುದು ಅನ್ನೋದು ನಮ್ಮ ಅನಿಸಿಕೆ.[ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]

ಅದೇನೆ ಇರಲಿ ಪರಭಾಷಾ ಚಿತ್ರಗಳನ್ನು ಕರ್ನಾಟಕದಲ್ಲಿ ನಮ್ಮ ಕನ್ನಡದವರೇ ವಿತರಿಸುತ್ತಿರುವುದು ನಮಗೆ ಅನುಕೂಲವಾದಂತಿದೆ. ಸುಮಾರು 130 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಪುಲಿ' ಚಿತ್ರದಲ್ಲಿ ಇಳೆಯದಳಪತಿ ವಿಜಯ್, ಶ್ರೀದೇವಿ, ಸುದೀಪ್, ಹನ್ಸಿಕಾ ಮೋಟ್ವಾನಿ, ಶ್ರುತಿ ಹಾಸನ್, ಪ್ರಭು, ನಂದಿತ ಶ್ವೇತಾ ಮುಂತಾಧ ತಾರಾ ಬಳಗವೇ ಇದೆ.[ಸುದೀಪ್ ಚಿತ್ರಗಳಿಗೆ ಪರಭಾಷಾ ಸಂಗೀತ ನಿರ್ದೇಶಕರು!]

Kala Samrat S Narayan takes up distribution rights in Vijay's 'Puli'

ನಿರ್ದೇಶಕ ಅಮೀನ್ ಮಡತಿಲ್ ಆಕ್ಷನ್-ಕಟ್ ಹೇಳಿರುವ 'ಪುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್, ವಿಜಯ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ ವುಡ್ ಹಾಗೂ ಕಾಲಿವುಡ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ. ಚಿತ್ರಕ್ಕೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ನಾನ್(ಈಗ) ಚಿತ್ರದ ಮೂಲಕ ತೆಲುಗಿನಲ್ಲಿ ಮನೆಮಾತಾದ ನಂತರ ಇದೀಗ, ಟೀಸರ್ ನ ಮೂಲಕ ತುಂಬಾ ನಿರೀಕ್ಷೆ ಹುಟ್ಟು ಹಾಕಿರುವ 'ಪುಲಿ' ಸುದೀಪ್ ಗೆ ತಮಿಳು ಚಿತ್ರರಂಗದಲ್ಲಿ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಬಹುದೇ ಅನ್ನೋದನ್ನ ಕಾದು ನೋಡಬೇಕಿದೆ.

English summary
Kala Samrat S Narayan takes up distribution rights in Vijay's 'Puli'. Tamil movie 'Puli' features Kannada actor Sudeep, Tamil actor Vijay, Actress Shruti hassan, Actress Hansika Motwani, Bollywood actress Sridevi in the lead role. The movie is directed by Ameen Madathil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada