For Quick Alerts
  ALLOW NOTIFICATIONS  
  For Daily Alerts

  19 ವರ್ಷದ ಬಳಿಕ ಒಂದಾದ ಕಮಲ್ ಹಾಸನ್-ಎಆರ್ ರೆಹಮಾನ್

  |

  ನಟ ರಾಜಕಾರಣಿ ಕಮಲ್ ಹಾಸನ್ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರೆ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದರಿಂದ ಇನ್ಮುಂದೆ ಸಿನಿಮಾ ಮಾಡಲ್ಲ ಎಂಬ ಸುದ್ದಿ ದೊಡ್ಡದಾಗಿ ಚರ್ಚೆ ಆಗಿತ್ತು. ಇದರ ಮಧ್ಯೆ ಶಂಕರ್ ನಿರ್ದೇಶನದ ಇಂಡಿಯನ್ 2 ಸಿನಿಮಾ ಘೋಷಿಸಿದರು ಕಮಲ್ ಹಾಸನ್. ಬಹುಶಃ ಇದೇ ಅವರ ಕೊನೆಯ ಚಿತ್ರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಅಭಿಮಾನಿಗಳು.

  ಇದೀಗ, ಕಮಲ್ ಹಾಸನ್ ಇನ್ನೊಂದು ಹೊಸ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆಸ್ಕರ್ ವಿಜೇತ, ಭಾರತದ ಮ್ಯಾಜಿಕಲ್ ಕಂಪೋಸರ್ ಎ.ಆರ್ ರೆಹಮಾನ್ ಕೆಲಸ ಮಾಡುತ್ತಿದ್ದಾರೆ. ಈ ವಿಷ್ಯವನ್ನ ರೆಹಮಾನ್ ಮತ್ತು ಕಮಲ್ ಹಾಸನ್ ಇಬ್ಬರು ಅಧಿಕೃತವಾಗಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

  'ಕೆಜಿಎಫ್' ಸಿನಿಮಾಗೂ ಕಮಲ್ ಹಾಸನ್ ಗೂ ಸಂಬಂಧ ಇದ್ಯಾ?

  ಹೌದು, ಲೈಕಾ ಪ್ರೊಡಕ್ಷನ್ ಮತ್ತು ರಾಜ್ ಕಮಲ್ ಫಿಲಂಸ್ ಬ್ಯಾನರ್ ನಲ್ಲಿ ಮೂಡಿಬರಲಿರುವ 'ತಲೈವಾನ್ ಇರುಕಿಂದರಾನ್' (Thalaivan Irukkindraan) ಚಿತ್ರದಲ್ಲಿ ಕಮಲ್ ನಟಿಸುತ್ತಿದ್ದು, ಎ.ಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ. ಈ ಮೂಲಕ ಸುಮಾರು 19 ವರ್ಷಗಳ ಬಳಿಕ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ.

  ಈ ಬಗ್ಗೆ ಸಂತಸ ಹಂಚಿಕೊಂಡಿರುವ ಎಆರ್ ರೆಹಮಾನ್ ''ಕಮಲ್ ಹಾಸನ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ. ರೆಹಮಾನ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಮಲ್ ''ನಮ್ಮ ಚಿತ್ರದಲ್ಲಿ ಭಾಗಿಯಾಗಿದ್ದಕ್ಕೆ ರೆಹಮಾನ್ ಗೆ ಧನ್ಯವಾದ'' ಎಂದಿದ್ದಾರೆ.

  ಪ್ರೈವೇಟ್ ಫೋಟೋ ಲೀಕ್: ಕಮಲ್ ಹಾಸನ್ ಪುತ್ರಿ ಫುಲ್ ಗರಂ

  ಇದಕ್ಕೂ ಮುಂಚೆ 2000 ಇಸವಿಯಲ್ಲಿ ಬಂದಿದ್ದ 'ತೆನಾಲಿ' ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಎಆರ್ ರೆಹಮಾನ್ ಒಟ್ಟಿಗೆ ಕೆಲಸ ಮಾಡಿದ್ದರು. ಸದ್ಯ ಬಿಗ್ ಬಾಸ್ ಮೂರನೇ ಆವೃತ್ತಿಯ ಚಿತ್ರೀಕರಣದಲ್ಲಿ ಕಮಲ್ ಹಾಸನ್ ಬ್ಯುಸಿ ಇದ್ದಾರೆ. ಈ ಮಧ್ಯೆ ಇಂಡಿಯನ್-2 ಸಿನಿಮಾ ಕಾರಣಾಂತರಗಳಿಂದ ನಿಂತಿದೆ. ಬಹುಶಃ ಈ ಗ್ಯಾಪ್ ನಲ್ಲಿ ಹೊಸ ಸಿನಿಮಾ ಆರಂಭವಾಗಬಹುದು.

  English summary
  Kamal Haasan and AR Rahman reunite after two decades. Will work after 19 years on Tamil film Thalaivan Irukkindraan. Produced by Lyca Productions and Raaj Kamal Films International.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X