For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಗಂಧದಗುಡಿ'ಗಾಗಿ ಕೈ ಜೋಡಿಸಲಿದ್ದಾರೆ ವಿಕ್ರಮ್, ರೋಲೆಕ್ಸ್

  |

  ಇದೇ ತಿಂಗಳ 28ರಂದು ವಿಶ್ವದಾದ್ಯಂತ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರ ಬಿಡುಗಡೆಗೊಳ್ಳುವ ಮಾರನೇ ದಿನವೇ ಪುನೀತ್‌ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ ಹಾಗೂ ನವೆಂಬರ್ 1 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಗೌರವವನ್ನು ಸಲ್ಲಿಸಲಾಗಲಿದೆ.

  ಹೀಗೆ ಈ ತಿಂಗಳ ಅಂತಿಮ ವಾರದಲ್ಲಿ ಅಪ್ಪು ಅವರ ಕುರಿತಾಗಿ ಸಾಕಷ್ಟು ಕಾರ್ಯಕ್ರಮಗಳಿರುವ ಕಾರಣ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಾಲು ಸಾಲು ಸಂಭ್ರಮಾಚರಣೆ ಹಾಗೂ ಪುನೀತ್ ಸ್ಮರಣೆ ನಡೆಸಲು ತೀರ್ಮಾನಿಸಿದ್ದಾರೆ. ಈ ಪೈಕಿ ಗಂಧದ ಗುಡಿ ಪ್ರಿ ರಿಲೀಸ್ ಕಾರ್ಯಕ್ರಮವೂ ಸಹ ಸೇರಿದೆ. ಈ ಕಾರ್ಯಕ್ರಮಕ್ಕೆ ಪುನೀತ ಪರ್ವ ಎಂಬ ಹೆಸರನ್ನು ಇಡಲಾಗಿದ್ದು, ಪುನೀತ್ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ರಾಜ್ ಫ್ಯಾಮಿಲಿ ತೀರ್ಮಾನಿಸಿದೆ.

  ಹೀಗಾಗಿ ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು ಹಾಗೂ ಚಿತ್ರರಂಗದ ಸ್ಟಾರ್ ನಟ ನಟಿಯರನ್ನು ರಾಜ್ ಕುಟುಂಬ ಆಹ್ವಾನಿಸುತ್ತಿದ್ದು, ಇತ್ತೀಚೆಗಷ್ಟೆ ಮೋಹಕತಾರೆ ರಮ್ಯಾ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಆಹ್ವಾನಿಸಿತ್ತು. ಇದೀಗ ಈ ಸಾಲಿಗೆ ಬಹುಭಾಷಾ ಸ್ಟಾರ್ ನಟ ಕಮಲ್ ಹಾಸನ್ ಹಾಗೂ ಸೂರ್ಯ ಹೆಸರುಗಳೂ ಸಹ ಸೇರಿಕೊಂಡಿವೆ.

  ಹೌದು, ಮುಖ್ಯ ಅತಿಥಿಗಳಾಗಿ ಕಮಲ್ ಹಾಸನ್ ಹಾಗೂ ಸೂರ್ಯ ಆಗಮಿಸಲಿದ್ದಾರೆ ಎಂಬ ಪೋಸ್ಟರ್‌ಗಳ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ಪುನೀತ ಪರ್ವ ಕಾರ್ಯಕ್ರಮವನ್ನು ತುಂಬಾ ದೊಡ್ಡ ಮಟ್ಟದಲ್ಲಿ ನಡೆಸಲು ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದು.

  ಇನ್ನು ಅಕ್ಟೋಬರ್ ಕೊನೆಯ ವಾರ ಪುನೀತ್ ರಾಜ್‌ಕುಮಾರ್ ಅವರ ವಿಷಯವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಪಟ್ಟಿ ಈ ಕೆಳಕಂಡಂತಿದೆ.

  * 26 - 10 - 2022: ಅಪ್ಪು ಸಮಾಧಿ ಬಳಿ ವಿಶ್ವ ದಾಖಲೆ ಮಟ್ಟದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬರೋಬ್ಬರಿ 75 ಕಟ್‌ಔಟ್‌ಗಳನ್ನು ನಿಲ್ಲಿಸಲಾಗಲಿದೆ.

  * 27-10-2022ರಂದು ಮಧ್ಯಾಹ್ನ ಎಲ್ಲಾ ಕಟ್‌ಔಟ್‌ಗಳಿಗೂ ಭಾರೀ ಹೂವಿನ ಹಾರ ಹಾಕಲಾಗುವುದು ಹಾಗೂ ಸಂಜೆ ಸ್ಮಾರಕದ ಒಂದು ಕಿಲೋಮೀಟರ್ ಸುತ್ತ ದಸರಾ ರೀತಿ ದೀಪಾಲಂಕಾರ ಮಾಡಲಾಗುವುದು.

  * 28-10-2022ರಂದು ಗಂಧದ ಗುಡಿ ಬಿಡುಗಡೆಯ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ.

  * 29-10-2022ರಂದು ಪುನೀತ್ ರಾಜ್‌ಕುಮಾರ್ ಒಂದನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಸ್ಮಾರಕದ ಬಳಿ ಅಭಿಮಾನಿಗಳಿಗೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿದೆ.

  English summary
  Kamal Haasan and Suriya to grace the Gandhada Gudi pre release event as cheif guests. Read on
  Saturday, October 15, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X