»   » ರಜನಿ ಜೊತೆ ಕೈ ಜೋಡಿಸುತ್ತಾರಾ ಆಪ್ತಮಿತ್ರ ಕಮಲ್ ಹಾಸನ್?

ರಜನಿ ಜೊತೆ ಕೈ ಜೋಡಿಸುತ್ತಾರಾ ಆಪ್ತಮಿತ್ರ ಕಮಲ್ ಹಾಸನ್?

Posted By:
Subscribe to Filmibeat Kannada
ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಮಲ್ ಹಾಸನ್ ಹೇಳಿದ್ದೇನ್ ಗೊತ್ತಾ | Filmibeat Kannada

ನಟ ರಜನಿಕಾಂತ್ ಅಧಿಕೃತ ರಾಜಕೀಯ ಪ್ರವೇಶ ಆಗಿದೆ. ಕನ್ನಡದ ನಟರು ಸೇರಿದಂತೆ ಅನೇಕರು ರಜನಿಕಾಂತ್ ಅವರಿಗೆ ಶುಭಾಶಯ ಕೋರಿದ್ದಾರೆ. ಇದೀಗ ಕಾಲಿವುಡ್ ನಟ ಹಾಗೂ ರಜನಿಕಾಂತ್ ಅವರ ಆಪ್ತಮಿತ್ರ ಕಮಲ್ ಹಾಸನ್ ಕೂಡ ರಜನಿ ಅವರಿಗೆ ವಿಶ್ ಮಾಡಿದ್ದಾರೆ.

ರಾಜಕೀಯ ಅಖಾಡಕ್ಕೆ ಇಳಿದ ರಜನಿ : ಕನ್ನಡ ಚಿತ್ರರಂಗದ ಅಭಿಪ್ರಾಯ ಏನು?

ಕಮಲ್ ಹಾಸನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಜನಿ ರಾಜಕೀಯ ಎಂಟ್ರಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ''ನನ್ನ ಸಹೋದರ ರಜನಿ ಅವರ ಸಾಮಾಜಿಕ ಕಳಕಳಿ ಮತ್ತು ಅವರ ರಾಜಕೀಯ ಎಂಟ್ರಿಗೆ ಶುಭಾಶಯ ಕೋರಿತ್ತೇನೆ.'' ಎಂದಿದ್ದಾರೆ.

Kamal Haasan Congratulate Rajinikanth on his political entry

ಈಗಾಗಲೇ ಕಮಲ್ ಹಾಸನ್ ಕೂಡ ರಾಜಕೀಯಕ್ಕೆ ಬಂದಿದ್ದಾರೆ. ಆದರೆ ಈವರೆಗೆ ಅವರು ಹೊಸ ಪಕ್ಷ ಅಥಾವ ಯಾವ ಪಕ್ಷ ಸೇರುತ್ತಾರೆ ಎನ್ನುವುದು ಬಹಿರಂಗವಾಗಿಲ್ಲ. ಅದೇ ರೀತಿ ರಜನಿಕಾಂತ್ ಕೂಡ ರಾಜಕೀಯ ಪ್ರವೇಶ ಮಾಡಿದ್ದು ಸದ್ಯಕ್ಕೆ ತಮ್ಮ ಪಕ್ಷದ ಬಗ್ಗೆ ಹೇಳಿಕೊಂಡಿಲ್ಲ.

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ಒಳ್ಳೆಯ ಸ್ನೇಹಿತರು. ಒಟ್ಟಿಗೆ ಸಿನಿಮಾ ಮಾಡಿರುವ ಇವರು ಒಟ್ಟಿಗೆ ಸೇರಿ ರಾಜಕೀಯ ಮಾಡಿದರೆ ಹೇಗಿರುತ್ತೆ ಎನ್ನುವ ಮಾತುಗಳು ಸಹ ಇದೆ. ಇಬ್ಬರು ಒಟ್ಟಿಗೆ ಸೇರಿದರೆ ಆ ಪಕ್ಷಕ್ಕೆ ಆನೆ ಬಲ ಬರಲಿದೆ. ಅಲ್ಲದೆ ಎಂ.ಜಿ.ಆರ್ ಮತ್ತು ಜಯಲಲಿತಾ ಅವರ ರೀತಿ ಈ ಇಬ್ಬರು ಸಹ ತಮಿಳುನಾಡಿನ ರಾಜಕೀಯ ಆಳುತ್ತಾರಾ ಎನ್ನುವ ಕುತೂಹಲ ಇನ್ನೊಂದು ಕಡೆ ಮೂಡಿದೆ.

English summary
Kollywood actor Kamal Haasan Congratulate Super Star Rajinikanth. Rajinikanth had confirmed his entry into politics Today (December 31) in Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X