For Quick Alerts
  ALLOW NOTIFICATIONS  
  For Daily Alerts

  'ವಿಶ್ವರೂಪಂ-2' ಫಸ್ಟ್ ಲುಕ್ ರಿಲೀಸ್: 'ದೇಶಭಕ್ತ'ನಾಗಿ ಕಮಲ್ ಹಾಸನ್ ಮಿಂಚು

  By Bharath Kumar
  |

  ಕಮಲ್ ಹಾಸನ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ 'ವಿಶ್ವರೂಪಂ-2' ಚಿತ್ರಕ್ಕಾಗಿ ಇಡೀ ಸಿನಿ ಪ್ರಪಂಚ ಕಾದು ಕುಂತಿದೆ. ಇದುವರೆಗೂ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಬಿಟ್ಟು ಕೊಡದ ಕಮಲ್ ಹಾಸನ್ ಈಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.['ಬಿಗ್ ಬಾಸ್ ರಿಯಾಲಿಟಿ ಶೋ'ಗೆ ಕಮಲ್ ಹಾಸನ್ ನಿರೂಪಕ!]

  ಮಂಗಳವಾರ ಸಂಜೆ 7 ಗಂಟೆಗೆ 'ವಿಶ್ವರೂಪಂ-2' ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಕಮಲ್ ಹಾಸನ್ ಟ್ವೀಟ್ ಮಾಡಿದ್ದರು. ತಾವು ಹೇಳಿದಂತೆಯೇ ನಿನ್ನೆ (ಮೇ 2) ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಗಮನಿಸುವಾಗೆ ಕಮಲ್ ಹಾಸನ್ ಅವರ ಮುಖದ ಮೇಲೆ ಗಾಯವಾಗಿದ್ದು, ಭಾರತದ ಭಾವುಟದೊಂದಿಗೆ ದೇಶಭಕ್ತನಾಗಿ ಮಿಂಚುತ್ತಿದ್ದಾರೆ. ಇದು ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಹೆಚ್ಚಿಸಿದೆ.[ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್]

  ಅಂದ್ಹಾಗೆ, 'ವಿಶ್ವರೂಪಂ-2', 2013 ರಲ್ಲಿ ಬಿಡುಗಡೆಯಾಗಿದ್ದ 'ವಿಶ್ವರೂಪಂ' ಚಿತ್ರದ ಮುಂದುವರೆದ ಭಾಗ. ಹೀಗಾಗಿ ಈ ಚಿತ್ರಕ್ಕೂ ವಿವಾದ ಅಂಟಿಕೊಳ್ಳಬಹುದಾ ಎಂಬ ಆತಂಕವಿದೆ. ಯಾಕಂದ್ರೆ, 'ವಿಶ್ವರೂಪಂ' ಮೊದಲ ಭಾಗವನ್ನ ತಮಿಳುನಾಡು ಸರ್ಕಾರ ಆರಂಭದ ದಿನಗಳಲ್ಲಿ ಬಿಡುಗಡೆ ಮಾಡಿರಲಿಲ್ಲ. ಕೆಲವು ರಾಜ್ಯಗಳಲ್ಲೂ ಸಿನಿಮಾ ತೆರೆಕಾಣಲೇ ಇಲ್ಲ. ಹೀಗಾಗಿ, ಈ ಬಾರಿಯೂ ಬಿಡುಗಡೆಗೆ ಸಂಕಷ್ಟ ಎದುರಾದರೂ ಆಗಬಹುದು.[ಕಮಲ್ ಹಾಸನ್ 'ವಿಶ್ವರೂಪಂ 2' ಬಿಡುಗಡೆಗೆ ಸಿದ್ಧ]

  ಇನ್ನು 'ವಿಶ್ವರೂಪಂ-2' ಚಿತ್ರವನ್ನ ಸ್ವತಃ ಕಮಲ್ ಹಾಸನ್ ಅವರೇ ನಟಿಸಿ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಈ ವರ್ಷದ ಡಿಸೆಂಬರ್ ನಲ್ಲಿ 'ವಿಶ್ವರೂಪಂ-2' ತೆರೆಕಾಣುವ ತಯಾರಿಯಲ್ಲಿದೆ. ಈ ಹಿಂದೆ ಕಮಲ್ ಹಾಸನ್ ಹಾಗೂ ನಿರ್ಮಾಪಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಇತ್ತು. ಆದ್ರೆ, ಇದು ಈಗ ಬಗೆಹರಿದಿದ್ದು, ರಾಜ್ ಕಮಲ್ ಫಿಲಿಂಸ್ ಇಂಟರ್ ನ್ಯಾಷನಲ್ ಮೂಲಕ ಸಿನಿಮಾ ರಿಲೀಸ್ ಆಗಲಿದೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

  English summary
  The first look of Vishwaroopam 2, the sequel to the 2013 film starring and directed by Kamal Haasan, has been released. In it, an injured Haasan, who looks pensive, holds his hand over his heart with the Indian tricolour superimposed on him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X