»   » ತಮಿಳು 'ಬಿಗ್ ಬಾಸ್'ನಿಂದ ಹೊರ ಬರ್ತಾರಂತೆ ಕಮಲ್ ಹಾಸನ್.!

ತಮಿಳು 'ಬಿಗ್ ಬಾಸ್'ನಿಂದ ಹೊರ ಬರ್ತಾರಂತೆ ಕಮಲ್ ಹಾಸನ್.!

Posted By:
Subscribe to Filmibeat Kannada

ತಮಿಳು ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿರುವ ತಮಿಳು ಸೂಪರ್ ಸ್ಟಾರ್ ನಟ ಕಮಲ್ ಹಾಸನ್, ಕಾರ್ಯಕ್ರಮದಿಂದ ಹಿಂದೆ ಸರಿಯವುದಾಗಿ ಬಿಗ್ ಬಾಸ್ ಅಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅದ್ಯಾಕೋ ಗೊತ್ತಿಲ್ಲ ತಮಿಳಿನಲ್ಲಿ 'ಬಿಗ್ ಬಾಸ್' ಶೋ ಆರಂಭವಾದಗನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಕಾರ್ಯಕ್ರಮದ ಮೇಲೆ ಮತ್ತು ನಿರೂಪಕ ಕಮಲ್ ಹಾಸನ್ ಅವರ ಮೇಲೆ ಟೀಕೆಗಳು, ಆರೋಪಗಳು ಕೇಳಿ ಬರುತ್ತಲೇ ಇದೆ. ಹೀಗಿರುವಾಗ ಕಮಲ್ ಹಾಸನ್ ತಮ್ಮ ಕಾರ್ಯಕ್ರಮದ ಅಯೋಜಕರ ವಿರುದ್ಧವೇ ಕೋಪ ಮಾಡಿಕೊಂಡಿದ್ದಾರೆ.

Kamal Haasan To Quit Big Boss Tamil,

ಕಳೆದ ವಾರ ಬಿಗ್ ಬಾಸ್ ಸ್ಫರ್ಧಿಗಳಿಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸಬೇಕು, ಅದೇ ರೀತಿ ಬಟ್ಟೆ ಧರಿಸಬೇಕೆಂಬ ಟಾಸ್ಕ್ ಕೊಡಲಾಗಿತ್ತು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರಿಂದ ಬೇಸರ ಮಾಡಿಕೊಂಡಿದ್ದ ಕಮಲ್ ಹಾಸನ್ ''ಇದು ಮಾನಸಿಕ ಅಸ್ವಸ್ಥರನ್ನು ಅಣಕಿಸುವಂತಿದೆ ಜೊತೆಗೆ ಅಸಂಬದ್ಧ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಟಾಸ್ಕ್ ಗಳು ನನಗೆ ನಿಜಕ್ಕೂ ಕೋಪವನ್ನು ತರಿಸುತ್ತೆ. ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿ ಇರುತ್ತೆ. ಇಂತರ ಚಟುವಟಿಕೆಗಳನ್ನು ಮತ್ತೆ ಮಾಡದಿರುವಂತೆ ನಾನು ಮನವಿ ಮಾಡುತ್ತೇನೆ. ಒಂದು ವೇಳೆ ಶೋನಲ್ಲಿ ಈ ರೀತಿಯ ಚಟುವಟಿಕೆಗಳು ನಡೆಸಿದ್ದೇ ಆದರೆ, ಈ ಕಾರ್ಯಕ್ರಮದಿಂದ ಹೊರ ಹೋಗುತ್ತೇನೆ, ನನಗೆ ಈ ಕಾರ್ಯಕ್ರಮ ಮುಖ್ಯವೇನಲ್ಲ ಎಂದು ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ.

English summary
Kamal Haasan's threatening to quit the Bigg Boss Tamil reality show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada