»   » ಕಮಲ್ 'ವಿಶ್ವರೂಪಂ 2' ರಿಲೀಸ್ ಡೇಟ್ ಬಹಿರಂಗ

ಕಮಲ್ 'ವಿಶ್ವರೂಪಂ 2' ರಿಲೀಸ್ ಡೇಟ್ ಬಹಿರಂಗ

Posted By:
Subscribe to Filmibeat Kannada
ಸಾಕಷ್ಟು ವಾದ ವಿವಾದಕ್ಕೆ ಕಾರಣವಾದ ಚಿತ್ರ 'ವಿಶ್ವರೂಪಂ'. ಈ ಚಿತ್ರದ ಬಿಡುಗಡೆ ಸಂಬಂಧ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಸಲ್ಲಿಸಿದ್ದಕ್ಕೆ ಕಮಲ್ ಹಾಸನ್ ಕಂಗಾಲಾಗಿದ್ದರು. ತಾವು ದೇಶ ಬಿಡುವ ಮಾತನ್ನೂ ಹೇಳಿದ್ದರು. ಬಳಿಕ ಎಲ್ಲವೂ ಕೂಲ್ ಆಗಿ ವಿವಾದ ಸುಖಾಂತ್ಯ ಕಂಡಿದ್ದು ಗೊತ್ತೇ ಇದೆ.

ಇದೀಗ ಕಮಲ್ ಅವರು 'ವಿಶ್ವರೂಪಂ' ಭಾಗ 2 ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ವಿಶ್ವರೂಪಂ ಚಿತ್ರದ ಮೇಕಿಂಗ್, ಸಬ್ಜೆಕ್ಟ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ತಮ್ಮ ಮನೆಯನ್ನೂ ಅಡ ಇಟ್ಟು ವಿಶ್ವರೂಪಂ ಚಿತ್ರ ನಿರ್ಮಿಸಿದ್ದರು ಕಮಲ್. ಒಂದು ವೇಳೆ ಚಿತ್ರ ಫ್ಲಾಪ್ ಆಗಿದ್ದರೆ ಅವರು ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದರು.

ಆದರೆ ವಿಶ್ವರೂಪಂ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ರು.120 ಕೋಟಿ ಕಲೆಕ್ಷನ್ ಮಾಡಿತು. ಸರಿಸುಮಾರು ರು.96 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಪೈಸಾ ವಸೂಲ್ ಮಾಡಿತು. ಕಮಲ್ ಅವರಿಗೆ ಆನೆಬಲ ತಂದಿತು.

ಈಗ ವಿಶ್ವರೂಪಂ 2 ಬಗ್ಗೆಯೂ ಅಷ್ಟೇ ನಿರೀಕ್ಷೆಗಳಿವೆ. ಈ ಚಿತ್ರದ ಶೂಟಿಂಗ್ ಶೇ.50ರಷ್ಟು ಮುಗಿದಿದೆ. ಆಂಡ್ರಿಯಾ ಪಾತ್ರಕ್ಕೆ ಚಿತ್ರದಲ್ಲಿ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಆಗಸ್ಟ್ 15ರಂದು ವಿಶ್ವರೂಪಂ 2 ಚಿತ್ರವನ್ನು ಬಿಡುಗಡೆ ಮಾಡಲು ಕಮಲ್ ಹಾಸನ್ ನಿರ್ಧರಿಸಿದ್ದಾರೆ.

ಈ ಬಾರಿ ಕಮಲ್ ನಿರ್ದೇಶನಕ್ಕಷ್ಟೇ ಸೀಮಿತವಾಗಿದ್ದಾರೆ. ನಿರ್ಮಾಣದ ಜವಾಬ್ದಾರಿ ಆಸ್ಕರ್ ವಿ ರವಿಚಂದ್ರನ್ ಅವರದು. ಭಾಗ 2ರಲ್ಲೂ ಉಗ್ರವಾದವೇ ಕಥಾವಸ್ತು. ಇಲ್ಲಿ ತಾಯಿ ಮಕ್ಕಳ ಅನುಬಂಧಕ್ಕೆ ಮಹತ್ವ ಇರುತ್ತದೆಯಂತೆ. ಚಿತ್ರದಲ್ಲಿ ಯುದ್ಧದ ಸನ್ನಿವೇಶಗಳು ಹೈಲೈಟ್ ಆಗಿ ನಿಲ್ಲಲಿವೆ.

ಮೊದಲ ಭಾಗದಲ್ಲಿ ಕೆಲವೊಂದು ಸನ್ನಿವೇಶಗಳನ್ನು ತೋರಿಸಲು ಸಾಧ್ಯವಾಗಿರಲಿಲ್ಲ. ಪ್ರೇಮ ಸನ್ನಿವೇಶಗಳಿರಲಿಲ್ಲ. ಯುದ್ಧ ಸನ್ನಿವೇಶಗಳು ಮಿಸ್ ಆಗಿದ್ದವು. ಈಗ ಅವೆಲ್ಲಕ್ಕೂ ಭಾಗ 2ರಲ್ಲಿ ಸ್ಥಾನ ನೀಡಲಾಗಿದೆ ಎಂದಿದ್ದಾರೆ ಕಮಲ್ ಹಾಸನ್. (ಏಜೆನ್ಸೀಸ್)

English summary
Kamal Haasan’s ‘Vishwaroopam 2′ is currently under production. Kamal Haasan is aiming for an August 15th release and all efforts are being made to get the film ready on time. He has been secretive about the shooting. The sequel is being produced and marketed by Aascar Films V Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada