ರಾಜ್ಯದಲ್ಲಿ 'ವಿಶ್ವರೂಪಂ' ಮಧ್ಯಾಹ್ನದ ಆಟ ಶುರು
"ರಾಜ್ಯದಲ್ಲಿ ಸರಿಸುಮಾರು 40 ಚಿತ್ರಮಂದಿರಗಳಲ್ಲಿ 'ವಿಶ್ವರೂಪಂ' ಮಧ್ಯಾಹ್ನದ ಪ್ರದರ್ಶನ ಮೂಲಕ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲೇ 17 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಕರ್ನಾಟಕದ ವಿತರಕ ಎಚ್ ಡಿ ಗಂಗರಾಜು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವಿಶ್ವರೂಪಂ ಚಿತ್ರ ವಿಮರ್ಶೆ.
ರಾಜ್ಯದ ಪೊಲೀಸ್ ಇಲಾಖೆ ಚಿತ್ರಕ್ಕೆ ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಗಂಗರಾಜು ಹೇಳಿದ್ದಾರೆ. ಕೆಲವು ಮುಸ್ಲಿಂ ಸಂಘಟನೆಗಳು ಚಿತ್ರವನ್ನು ನಿಷೇಧಿಸಿಬೇಕು ಎಂದು ನಗರ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಅವರಲ್ಲಿ ಮನವಿ ಮಾಡಿಕೊಂಡಿದ್ದವು.
ಸಾಧ್ಯವಾದರೆ ಚಿತ್ರದಲ್ಲಿ "all Muslims are not terrorists" ಎಂಬ ವಾಕ್ಯವನ್ನೂ ಹಾಕುವಂತೆ ಮುಸ್ಲಿಂ ಸಂಘಟನೆಗಳು ಸೂಚಿಸಿದ್ದವು. ಆದರೆ ಚಿತ್ರ ಪ್ರತಿ ಡಿಜಿಟಲ್ ಆವೃತ್ತಿಯಲ್ಲಿರುವ ಕಾರಣ ಅದು ತಮ್ಮಿಂದ ಸಾಧ್ಯವಾಗಲ್ಲ ಎಂದು ಗಂಗರಾಜು ಸ್ಪಷ್ಟಪಡಿಸಿದ್ದರು.
ವಿಶ್ವರೂಪಂ ಬಿಡುಗಡೆಗೂ ಮುನ್ನ ಮಿರ್ಜಿ ಅವರು ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಅವರು ಮಾತನಾಡುತ್ತಾ, ಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ಸನ್ನಿವೇಶಗಳಿಲ್ಲ ಎಂದು ಖುದ್ದು ತಮಗೆ ಹೇಳಿದ್ದಾಗಿ ಗಂಗರಾಜು ತಿಳಿಸಿದ್ದಾರೆ. (ಪಿಟಿಐ)


Click it and Unblock the Notifications












