twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್ 'ವಿಶ್ವರೂಪಂ' : ಅಮೆರಿಕದ ಪ್ರೇಕ್ಷಕ ಕಂಡಂತೆ

    By ಪ್ರವೀಣ್ ಕುಮಾರ್, ನ್ಯೂ ಜೆರ್ಸಿ, ಅಮೆರಿಕ
    |

    ವಿಶ್ವರೂಪಂ. 95 ಕೋಟಿ ರು. ವೆಚ್ಚದಲ್ಲಿ ನಿರ್ಮಿತವಾಗಿರುವ ಬಹುಭಾಷೀಯ ಚಿತ್ರ ಚಿತ್ರದ ನಿರ್ಮಾಪಕ, ನಿರ್ದೇಶಕರಾಗಿರುವ ಬಹುಭಾಷೀಯ ನಟ ಕಮಲ್ ಹಾಸನ್ ಅವರ ಜೇಬು ತುಂಬುವುದಾ? ಜೇಬು ತುಂಬುವುದಿರಲಿ ನಾಲ್ಕೂ ದಿಕ್ಕುಗಳಿಂದ ಎರಗಿರುವ ವಿವಾದಗಳಿಂದ ಚಿತ್ರ ಬಿಡುಗಡೆಯ ದಿನಾಂಕವೇ ಸರಿಯಾಗಿ ನಿಗದಿಯಾಗಿಲ್ಲ.

    ಚಿತ್ರ ಮುಸ್ಲಿಂರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ತಮಿಳುನಾಡು ಸರಕಾರ ಹದಿನೈದು ದಿನಗಳ ಕಾಲ ಚಿತ್ರವನ್ನು ಬ್ಯಾನ್ ಮಾಡಿದೆ. ಹೈದರಾಬಾದಿನಲ್ಲಿ ಪ್ರದರ್ಶನ ನಿಂತಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಮಾತ್ರ ತೆರೆ ಕಂಡಿದೆ. ಡಿಟಿಎಚ್ ಮುಖಾಂತರ ಮೊದಲು ಬಿಡುಗಡೆ ಮಾಡಬೇಕೆಂಬ ಕನಸು ಕಂಡಿದ್ದ ಕಮಲ್ ಹಾಸನ್, ವಿವಾದಗಳಿಂದಾಗಿ ತತ್ತರಿಸಿದ್ದಾರೆ, ದುಗುಡದಲ್ಲಿದ್ದಾರೆ.

    ತಮಿಳುನಾಡಿನಲ್ಲಿ ನಿಷೇಧ ಹೇರಿದ್ದರೇನಂತೆ ಅಮೆರಿಕದಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಕಮಲ್ ಮುಖ ಕಮಲದಂತೆ ಅರಳುವಂತೆ ಮಾಡಿದೆ. ಅಮೆರಿಕದ ನ್ಯೂ ಜೆರ್ಸಿಯಲ್ಲಿರುವ ಒನ್ಇಂಡಿಯಾ ಓದುಗ ಪ್ರವೀಣ್ ಕುಮಾರ್ ಅವರು ಚಿತ್ರವನ್ನು ನೋಡಿ ವಿಮರ್ಶಿಸಿದ್ದಾರೆ.

    ಚಿತ್ರದ ಮೊದಲರ್ಧ ಭಾಗ ಅಮೆರಿಕದಲ್ಲಿಯೇ ಚಿತ್ರೀಕರಣವಾಗಿದೆ. ಚಿತ್ರ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ವಿಭಿನ್ನ ಪಾತ್ರಗಳಿಗೆ ತಹತಹಿಸುವ ಕಮಲ್, ಈ ಚಿತ್ರದಲ್ಲಿ ಕೂಡ ವಿಶ್ವನಾಥನಾಗಿ ವಿಭಿನ್ನ ರೂಪ ಧರಿಸಿದ್ದಾರೆ. ಕಥಕ್ ನೃತ್ಯಪಟುವಾಗಿ ಕಾಣಿಸಿಕೊಂಡಿರುವ ಕಮಲ್ ನಟನೆಯ ವಿರಾಟ್ ರೂಪ ಇಲ್ಲಿ ಮತ್ತೆ ತೋರಿದ್ದಾರೆ. ಎರಡನೇ ಭಾಗವನ್ನು ಸ್ವಲ್ಪ ಎಳೆಯಲಾಗಿದೆಯಾದರೂ ಕೊಟ್ಟ ಕಾಸಿಗೆ ಮೋಸವಿಲ್ಲ ಎಂದಿದ್ದಾರೆ ಪ್ರವೀಣ್ ಕುಮಾರ್.

    ಕಮಲ್ ಪಾತ್ರದ ಅಸಲಿ ಹಿನ್ನೆಲೆಯೇನು? ಬಾಂಬ್ ಸಿಡಿಸಲು ತಂತ್ರ ರೂಪಿಸಿದ್ದ ಅಲ್ ಕೈದಾ ಮತ್ತು ಆ ಪಾತ್ರಕ್ಕೂ ಸಂಬಂಧವೇನು? ಭಯೋತ್ಪಾದಕ ಸಂಘಟನೆ ತನ್ನ ಮಿಷನ್ನಿನಲ್ಲಿ ಯಶಸ್ವಿಯಾಗುವುದೆ? ತಮ್ಮ ವೈಯಕ್ತಿಕ ಜೀವನದಲ್ಲೂ ಎದ್ದಿರುವ ಬಿರುಗಾಳಿಯನ್ನು ಅವರು ಹೇಗೆ ಎದುರಿಸುತ್ತಾರೆ? ಚಿತ್ರ ಸೂಪರಾ, ತೋಪಾ? ಮುಂತಾದ ಪ್ರಶ್ನೆಗಳಿಗೆ ಪ್ರೇಕ್ಷಕರೇ ಉತ್ತರ ಕಂಡುಕೊಳ್ಳಬೇಕು.

    ಅಮೆರಿಕದ ಓದುಗರ ವಿಮರ್ಶೆ

    ಅಮೆರಿಕದ ಓದುಗರ ವಿಮರ್ಶೆ

    ವಿಶ್ವರೂಪಂನಲ್ಲಿ ಕಮಲ್ ಅದ್ಭುತ ಕಥೆಯನ್ನು ಹೆಣೆದಿದ್ದಾರೆ. ಭಯೋತ್ಪಾದಕ ದಾಳಿಯ ಹುನ್ನಾರದ ಕಥಾಹಂದಿರವನ್ನು ಹೊಂದಿರುವ ವಿಶ್ವರೂಪಂ ಚಿತ್ರಕ್ಕೆ ಸಿನೆಮಾಟೋಗ್ರಫಿ ಮತ್ತು ತಾಂತ್ರಿಕ ಬೆಂಬಲ ಅದ್ಭುತವಾಗಿ ದೊರೆತಿದೆ. ಚಿತ್ರದಲ್ಲಿ ಕೇವಲ ಒಂದೇ ಹಾಡಿರುವುದು ವಿಶೇಷ. ಚಿತ್ರಕಥೆಯನ್ನು ಹೇಳದಿರುವುದೇ ಸಮಂಜಸ. ಎಲ್ಲ ಹೇಳಿಬಿಟ್ಟರೆ ಉಳಿಯುವುದಾದರೂ ಏನು?

    ಅಮೆರಿಕದ ಓದುಗರ ವಿಮರ್ಶೆ

    ಅಮೆರಿಕದ ಓದುಗರ ವಿಮರ್ಶೆ

    ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ರಷ್ಯಾದ ಖ್ಯಾತ ರಂಗಕರ್ಮಿ ಕಾನ್‌ಸ್ಟಾನ್ಟಿನ್ ಸ್ಟಾನಿಸ್ಲವಾಸ್ಕಿಗೆ ಸರಿಸಮ ಎಂದು ಹೆಸರಾಗಿರುವ ಕಮಲ್ ಅವರಿಂದ ಸಖತ್ ನಟನೆಯನ್ನು ಪ್ರೇಕ್ಷಕರು ನಿರೀಕ್ಷಿಸುವುದು ಸಹಜ. ಹುಡುಗಿಯರಿಂದ ಸುತ್ತವರಿದಿರುವ ಕಥಕ್ ನೃತ್ಯಗಾರನಾಗಿ ಮತ್ತು ಭಯೋತ್ಪಾದಕನಾಗಿ ಕಮಲ್ ಅಕ್ಷರಶಃ ಪರಕಾಯ ಪ್ರವೇಶ ಮಾಡಿದ್ದಾರೆ. ಜೀಹಾದಿಯ ಪಾತ್ರದಲ್ಲಿ ಅವರ ನಟನೆಯನ್ನು ನೋಡುವುದೇ ಒಂದು ಥ್ರಿಲ್.

    ಅಮೆರಿಕದ ಓದುಗರ ವಿಮರ್ಶೆ

    ಅಮೆರಿಕದ ಓದುಗರ ವಿಮರ್ಶೆ

    ಹೊಸಮುಖ ಪೂಜಾ ಕುಮಾರ್ ಅವರು ಕಮಲ್ ಹೆಂಡತಿಯಾಗಿ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಅವರ ನಟನೆಯಿಂದ ಚಿತ್ರಕ್ಕೆ ಹೊಳಪು ಬಂದಿದೆ. ಇನ್ನು ಸುಂದರ ಮುಖದ ಆಂಡ್ರಿಯಾ ಜೆರ್ಮಿಯಾ ಪಾತ್ರದಲ್ಲಿ ಅಂತಹ ಸತ್ವವಿಲ್ಲ. ಜೀವ ತೆಗೆಯುವ ಭಯೋತ್ಪಾದಕನಾಗಿ ರಾಹುಲ್ ಬೋಸ್ ಪಾತ್ರವನ್ನು ಜೀವಂತವಾಗಿಸಿದ್ದಾರೆ.

    ಅಮೆರಿಕದ ಓದುಗರ ವಿಮರ್ಶೆ

    ಅಮೆರಿಕದ ಓದುಗರ ವಿಮರ್ಶೆ

    ಚಿತ್ರವನ್ನು ಎತ್ತರಕ್ಕೆ ಎತ್ತಿರುವುದು ಸಾನು ವರ್ಗೀಸ್ ಅವರ ಸಿನೆಮಾಟೋಗ್ರಫಿ. ಅಫಘಾನಿಸ್ತಾನದ ಸ್ಥಳಗಳನ್ನು ಅದ್ಭುತವಾಗಿ ತೋರಿಸಿರುವ ಅವರ ಕ್ಯಾಮೆರಾ ಕೈಚಳಕಕ್ಕೆ ಒಂದು ಸಲಾಂ ಹೇಳಲೇಬೇಕು. ಶಂಕರ್ ಎಹಸಾನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಆತ್ಮವಿದ್ದಂತೆ. ಜೆಟ್ ಫೈಟರ್ ದೃಶ್ಯಗಳನ್ನು ನೋಡುತ್ತಿದ್ದರೆ ಮೈನವಿರೇಳದಿದ್ದರೆ ಕೇಳಿ. ಇನ್ನು ಮಹೇಶ್ ನಾರಾಯಣನ್ ಅವರ ಕತ್ತರಿ ಪ್ರಯೋಗ ನಿರ್ಭಿಡೆಯಾಗಿ ಕೆಲಸ ಮಾಡಿದ್ದರೆ ಕೆಲ ದೃಶ್ಯಗಳು ಎಳೆಯದಂತೆ ತಪ್ಪಿಸಬಹುದಿತ್ತು.

    ಅಮೆರಿಕದ ಓದುಗರ ವಿಮರ್ಶೆ

    ಅಮೆರಿಕದ ಓದುಗರ ವಿಮರ್ಶೆ

    ನನ್ನ ಒಟ್ಟಾರೆ ಅಭಿಪ್ರಾಯ : ಕಮಲ್ ಹಾಸನ್ ಅವರ ಬಿಗ್ ಫ್ಯಾನ್ ಆಗಿರುವುದರಿಂದ ಚಿತ್ರ ನನಗಂತೂ ಮೋಸ ಮಾಡಿಲ್ಲ. ಚಿತ್ರವನ್ನು ಸಖತ್ತಾಗಿ ಎಂಜಾಯ್ ಮಾಡಿದೆ. ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲದಂತೆ ನಿರ್ಮಾಣ ಮಾಡಿದ್ದಾರೆ ಕಮಲ್ ಹಾಸನ್. ಈ ಅದ್ಭುತ ನಟ, ನಿರ್ಮಾತೃಗೊಂದು ನನ್ನ ಸೆಲ್ಯೂಟ್.

    English summary
    Vishwaroopam is simultaneously made in Tamil, Telugu and Hindi. It is made with the budget of Rs 95 crore. What does the multilingual action-thriller has to offer? A reader named Praveen Kumar from New Jersey reviewed the film, as the movie was not released in many places in India.
    Monday, January 28, 2013, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X