»   » ರಮೇಶ್-ಕಮಲ್ ಕಾಂಬಿನೇಷನ್ 'ಉತ್ತಮ ವಿಲನ್' ಫಿನಿಷ್

ರಮೇಶ್-ಕಮಲ್ ಕಾಂಬಿನೇಷನ್ 'ಉತ್ತಮ ವಿಲನ್' ಫಿನಿಷ್

Posted By:
Subscribe to Filmibeat Kannada

ಸಕಲ ಕಲಾವಲ್ಲಭ ಕಮಲಹಾಸನ್ ನಾಯಕರಾಗಿರುವ ರಮೇಶ್ ಅರವಿಂದ್ ನಿರ್ದೇಶನದ ಬಹುಭಾಷಾ ಚಿತ್ರ' ಉತ್ತಮ ವಿಲನ್' ಇತ್ತೀಚೆಗೆ ಶೂಟಿಂಗ್ ಮುಕ್ತಾಯವಾಗಿದ್ದು, ಮ್ಯಾಜಿಕಲ್ ಜರ್ನಿ ಮುಕ್ತಾಯಗೊಂಡಿದೆ. ವಿಎಫ್ ಎಕ್ಸ್, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭಗೊಂಡಿದೆ ಎಂದು ರಮೇಶ್ ಅರವಿಂದ್ ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಆರಂಭಗೊಂಡ ಉತ್ತಮ ವಿಲನ್ ಚಿತ್ರೀಕರಣ ಚೆನ್ನೈ, ಮಧ್ಯಪ್ರದೇಶ, ಟರ್ಕಿ ಹಾಗೂ ಇನ್ನಿತರ ಕಡೆಗಳಲ್ಲಿ ಸುತ್ತಾಡಿದೆ. 21ನೇ ಶತಮಾನದ ಸಿನಿಸ್ಟಾರ್ ಹಾಗೂ 8ನೇ ಶತಮಾನದ ಡ್ರಾಮಾ ನಟ ಹೀಗೆ ದ್ವಿಪಾತ್ರದಲ್ಲಿ ಕಮಲಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ.

ತಿರುಪತಿ ಬ್ರದರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಕೆ ವಿಶ್ವನಾಥ್, ಕೆ ಬಾಲಚಂದರ್, ಜಯರಾಮನ್, ಪಾರ್ವತಿ ಮೆನನ್, ಊರ್ವಶಿ, ಎಂಎಸ್ ಭಾಸ್ಕರ್ ಅವರು ತಾರಾಗಣದಲ್ಲಿದ್ದಾರೆ. ಹಲವು ದಿಗ್ಗಜರನ್ನು ಒಟ್ಟುಗೂಡಿಸಿ ತೆರೆಯ ಮೇಲೆ ಕಾಣುವಂತೆ ಮಾಡುವಲ್ಲಿ ರಮೇಶ್ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ.

ಉತ್ತಮ ವಿಲನ್ ನಂತರ ದೃಶ್ಯಂ ಚಿತ್ರದ ರಿಮೇಕ್ ನಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಸದ್ಯಕ್ಕೆ ಪಾಪನಾಶಂ ಎಂದು ಹೆಸರಿಡಲಿಡಲಾಗಿದೆ, ಈ ನಡುವೆ ಬಹು ನಿರೀಕ್ಷಿತ ವಿಶ್ವರೂಪಂ 2 ಚಿತ್ರದ ಸ್ಥಿತಿ ಬಗ್ಗೆ ಕಮಲ್ ಇನ್ನೂ ಏನೂ ಹೇಳಿಲ್ಲ ಇವತ್ತು ಮಂಗಳವಾರ ಹಾಲಿವುಡ್ ನಟ ರಾಬಿನ್ ವಿಲಿಯಮ್ಸ್ ಸಾವಿಗೆ ಕಮಲ್ ಕಂಬನಿ ಸುರಿಸಿದ್ದಾರೆ. ಉತ್ತಮ ವಿಲನ ಬಗ್ಗೆ ಇನ್ನಷ್ಟು ಮಾಹಿತಿ, ಸುದ್ದಿ ಮುಂದೆ

ಉತ್ತಮ ವಿಲನ್ ಚಿತ್ರದ ಮೊದಲ ಲುಕ್

ಉತ್ತಮ ವಿಲನ್ ಚಿತ್ರದ ಮೊದಲ ಲುಕ್ ಕಲಾತ್ಮಕವಾಗಿದ್ದು, ಆಕರ್ಷಕವಾಗಿದ್ದು, ಪೋಸ್ಟರ್ ಡಿಸೈನ್ ಮಾಡಲು ಫ್ರೆಂಚ್ ಕಲಾವಿದ ಎರಿಕ್ ಲಾಫೊರ್ ಗ್ಯೂ ಅವರ ಮಲಬಾರ್ ಥೆಯ್ಯಂ ಕಲಾಕೃತಿ ಸ್ಪೂರ್ತಿ ನೀಡಿದೆಯಂತೆ

ಮಲಬಾರ್ ಥೆಯ್ಯಂ ಕಲಾಕೃತಿ

ಉತ್ತಮ ವಿಲನ್ ಪೋಸ್ಟರ್ ಗೆ ಸ್ಪೂರ್ತಿ ನೀಡಿದ ಮಲಬಾರ್ ಥೆಯ್ಯಂ ಕಲಾವಿದ ಚಿತ್ರ ಎಡಬದಿಯಲ್ಲಿದೆ. ಈ ಚಿತ್ರ ತೆಗೆದವರು ಫ್ರಾನ್ಸ್ ಮೂಲದ ಪ್ರವಾಸಿ ಕಲಾವಿದ ಎರಿಕ್ ಲಾಫೊರ್ ಗ್ಯೂ

ಈ ಚಿತ್ರದಲ್ಲಿ ಘಟಾನುಘಟಿಗಳ ಸಂಗಮವಿದೆ

ರಮೇಶ್ ಅರವಿಂದ್ ಹಾಗೂ ಕಮಲ್ ಜೋಡಿ ಫೇಲ್ ಆಗಿದ್ದೆ ಕಮ್ಮಿ. ಅದರಲ್ಲೂ ರಮೇಶ್ ನಿರ್ದೇಶನದಲ್ಲಿ ಕಮಲ್ ನಟಿಸುತ್ತಿರುವುದು ಅಭಿಮಾನಿಗಳಿಗೆ ಹಬ್ಬದೂಟವಾಗಲಿದೆ. ಕಮಲ್ ಅವರು ಚಿತ್ರಕ್ಕೆ ಕಥೆ ಹಾಗೂ ಸಹ ನಿರ್ದೇಶನ ಮಾಡಲು ಸ್ನೇಹಪೂರ್ವಕವಾಗಿ ಒಪ್ಪಿಕೊಂಡರಂತೆ. ಹೀಗಾಗಿ ಇಬ್ಬರು ಸಮಾನ ಮನಸ್ಕರು ತಯಾರಿಸಿದ ವಿಶಿಷ್ಟ ಚಿತ್ರ ಇದಾಗಲಿದೆ. ಇಬ್ಬರೂ ನಿರ್ದೇಶಕ ಕೆ.ಬಾಲಚಂದರ್ ಅವರ ಗರಡಿಯಿಂದ ಪ್ರತಿಭೆಗಳು ಎಂಬುದನ್ನು ಮರೆಯುವಂತಿಲ್ಲ.

ಚಿತ್ರದ ಹೀರೋಯಿನ್ ಯಾರು? ಗಾಳಿ ಸುದ್ದಿ

ಚಿತ್ರದ ಹೀರೋಯಿನ್ ಯಾರು? ಎಂಬ ವಿಷಯದಲ್ಲಿ ಇನ್ನೂ ಕುತೂಹಲ ಕಾಯ್ದುಕೊಳ್ಳಲಾಗಿದೆ. ಕಾಜಲ್ ಅಗರವಾಲ್, ಆಸೀನ್, ದೀಪಿಕಾ ಪಡುಕೋಣೆ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು.ಆದರೆ, ಲಿಂಗುಸ್ವಾಮಿ ನಿರ್ಮಾಣದ ಈ ಚಿತ್ರದಲ್ಲಿ ಭಾರಿ ಸಂಭಾವನೆ ಪಡೆಯುವ ನಾಯಕಿಯರ ಬದಲಿಗೆ ಕಡಿಮೆ ಸಂಭಾವನೆಯ ನಾಯಕಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕಮಲ್ ಆಯ್ಕೆಯ ಹೀರೋಯಿನ್ ಗಳು

ಕಮಲ್ ಅವರು ಮೆಚ್ಚಿದ ಆಂಡ್ರಿಯಾ ಹಾಗೂ ಪೂಜಾ ಕುಮಾರ್ ಅವರಿಗೆ ಪ್ರಮುಖ ಪಾತ್ರ ಸಿಗಲಿದೆ ಎಂಬ ಮಾತಿದೆ. ಕಮಲ್ ಹಾಸನ್ ಅವರು ಕಾಮಿಡಿ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಐತಿಹಾಸಿಕ ಪಾತ್ರ ಹೊಂದಿದ್ದರೂ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿಯಬಹುದಂತೆ.

ರಮೇಶ್ ಸದ್ಯಕ್ಕೆ ವೀಕೆಂಡ್ ನಲ್ಲಿ ಬಿಸಿ

ವೀಕೇಂಡ್ ವಿಥ್ ರಮೇಶ್ ಅರವಿಂದ್ ಕಾರ್ಯಕ್ರಮದಲ್ಲಿ

ಉತ್ತಮ ವಿಲನ್ ಟೀಸರ್

ಉತ್ತಮ ವಿಲನ್ ಟೀಸರ್ ನೋಡಿ.. ಚಿತ್ರದ ಮೊದಲ ಶಾಟ್ ಗೆ ಆಕ್ಷನ್ ಹೇಳಿದ್ದು ಕಮಲ್ ಹಾಗೂ ರಮೇಶ್ ಅವರ ಗುರು ಕೆ ಬಾಲಚಂದರ್

English summary
Kamal Hassan starrer Uttama Villain shooting has come to an end. The filming was wrapped up today (August 9). Director Ramesh Aravind gave the first indication of the completion and said post-production works will begin soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada