For Quick Alerts
  ALLOW NOTIFICATIONS  
  For Daily Alerts

  ಗೌತಮಿ, ಆಕೆಯ ಪುತ್ರಿ ಜೊತೆ ನಟ ಕಮಲ್ ಹಾಸನ್

  By ಉದಯರವಿ
  |

  ನಟ ಕಮಲ್ ಹಾಸನ್ ಹಾಗೂ ಗೌತಮಿ ಕೆಲ ವರ್ಷಗಳಿಂದ ಒಟ್ಟಿಗೆ ಸಹಬಾಳ್ವೆ ನಡೆಸುತ್ತಿರುವುದು ಗೊತ್ತೇ ಇದೆ. ಕಮಲ್ ಹಾಸನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರೆ, ಗೌತಮಿಗೆ ಒಂದು ಹೆಣ್ಣು ಮಗಳು ಇದ್ದಾರೆ. ಆಕೆಯ ಹೆಸರು ಸುಬ್ಬುಲಕ್ಷ್ಮಿ.

  ಆದರೆ ಕಮಲ್ ಹಾಗೂ ಗೌತಮಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಇತ್ತೀಚೆಗೆ ಇಬ್ಬರೂ ಕಾರ್ಯಕ್ರಮವೊಂದಕ್ಕೆ ಜೊತೆಯಾಗಿ ಬರುವ ಮೂಲಕ ಎಲ್ಲರ ಗಮನಸೆಳೆದರು. ಮುಂಬೈನಲ್ಲಿ ಆರಂಭವಾದ ಫಿಲಂ ಫೆಸ್ಟಿವಲ್ ನಲ್ಲಿ ಗೌತಮಿ, ಅವರ ಮಗಳು ಸುಬ್ಬುಲಕ್ಷ್ಮಿ ಹಾಗೂ ಕಮಲ್ ಜೊತೆಯಾಗಿ ಕಾಣಿಸಿಕೊಂಡರು.

  ಕಮಲ್ ಸೀದಾಸಾದಾ ಉಡುಪಿನಲ್ಲಿ, ಗೌತಮಿ ಕಾಂಜೀವರಂ ಸೀರೆಯಲ್ಲಿ, ಸುಬ್ಬುಲಕ್ಷ್ಮಿ ಮಾಡರ್ನ್ ಡ್ರೆಸ್ ನಲ್ಲಿ ಹಾಜರಾಗಿದ್ದರು. ಇವರು ಮೂವರೂ ಜೊತೆಯಾಗಿ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಹಾಗಾಗಿ ಎಲ್ಲಾ ಕ್ಯಾಮೆರಾ ಕಣ್ಣುಗಳು ಇವರ ಮೇಲೆ ಬಿದ್ದವು. ಸ್ಲೈಡ್ ಗಳಲ್ಲಿ ಆ ದೃಶ್ಯಗಳನ್ನು ಕಣ್ತುಂಬಿಕೊಳ್ಳೋಣ ಬನ್ನಿ...

  ಕಮಲ್ ಗೆ ಜೀವಮಾನ ಸಾಧನೆ ಪ್ರಶಸ್ತಿ

  ಕಮಲ್ ಗೆ ಜೀವಮಾನ ಸಾಧನೆ ಪ್ರಶಸ್ತಿ

  ಭಾರತೀಯ ಸಿನಿಮಾಗೆ ಕಮಲ್ ಸಲ್ಲಿಸಿದ ಸೇವೆಗೆ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಚಲನಚಿತ್ರೋತ್ಸವದಲ್ಲಿ ಫ್ರೆಂಚ್ ಫಿಲಂ ಮೇಕರ್ ಕೋಸ್ಟಾ ಗಾವ್ರಾಸ್, ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಮತ್ತಿತರರು ಪಾಲ್ಗೊಂಡಿದ್ದರು.

  ತಾನು ಈ ಮಟ್ಟಕ್ಕೆ ಬೆಳೆಯಲು ಬಾಲಚಂದರ್ ಕಾರಣ

  ತಾನು ಈ ಮಟ್ಟಕ್ಕೆ ಬೆಳೆಯಲು ಬಾಲಚಂದರ್ ಕಾರಣ

  ತಾನು ಈ ಮಟ್ಟಕ್ಕೆ ಬಳೆಯಲು ನಿರ್ದೇಶಕ ಕೆ ಬಾಲಂಚಂದರ್ ಅವರೇ ಕಾರಣ. ನನ್ನಲ್ಲಿನ ನಟನನ್ನು ಈ ಜಗತ್ತಿಗೆ ಪರಿಚಯಿಸಿದ್ದೇ ಅವರು ಎಂದು ಕಮಲ್ ಹೇಳಿದರು.

  ಗುರುಗಳಿಗೆ ಪ್ರಶಸ್ತಿ ಅರ್ಪಣೆ ಮಾಡಿದ ಕಮಲ್

  ಗುರುಗಳಿಗೆ ಪ್ರಶಸ್ತಿ ಅರ್ಪಣೆ ಮಾಡಿದ ಕಮಲ್

  ಬಾಲಚಂದರ್ ನನಗೆ ಗುರು. ಗುರು ಎಂದರೆ ಅವರ ತರಹವೇ ಇರಬೇಕು. ನನ್ನ ಗೆಲುವಿನ ಹಿಂದೆ, ನಾನು ಈ ಮಟ್ಟಕ್ಕೆ ಬೆಳೆದಿರುವುದರ ಹಿಂದೆ ಅವರ ಶ್ರಮ ಇದೆ. ನನಗೆ ಕೊಡುತ್ತಿರುವ ಈ ಪ್ರಶಸ್ತಿಯನ್ನು ಅವರಿಗೇ ಅರ್ಪಿಸುತ್ತಿದ್ದೇನೆ ಎಂದರು.

  ದಿ ಬಟ್ಲರ್ ಚಲನಚಿತ್ರ ಪ್ರದರ್ಶನ

  ದಿ ಬಟ್ಲರ್ ಚಲನಚಿತ್ರ ಪ್ರದರ್ಶನ

  ಮುಂಬೈ ಫಿಲಂ ಫೆಸ್ಟಿವಲ್ ಉದ್ಘಟನಾ ಸಮಾರಂಭದ ದಿನ ಐತಿಹಾಸಿಕ ಫಿಕ್ಷನ್ ಡ್ರಾಮಾ 'ದಿ ಬಟ್ಲರ್' ಚಿತ್ರವನ್ನು ಪ್ರದರ್ಶಿಸಲಾಯಿತು. ಓಫ್ರಾ ವಿನ್ ಫ್ರೇ ಈ ಚಲನಚಿತ್ರೋತ್ಸವನ್ನು ಉದ್ಘಾಟಿಸಿದರು. ಅಕ್ಟೋಬರ್ 24ರಂದು ಚಲನಚಿತ್ರೋತ್ಸವಕ್ಕೆ ತೆರೆಬೀಳಲಿದೆ.

  ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಬ್ಯೂಟಿಗಳು

  ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಬ್ಯೂಟಿಗಳು

  ಬಾಲಿವುಡ್ ಬ್ಯೂಟಿಗಳಾದ ಸೋನಾಕ್ಷಿ ಸಿನ್ಹಾ, ಟಿಸ್ಕಾ ಚೋಪ್ರಾ, ನಂದಿತಾ ದಾಸ್, ದಿವ್ಯಾ ದತ್ತ ಸೇರಿದಂತೆ ಮತ್ತಿತತರು ಈ ಚಲನಚಿತ್ರೋತ್ಸವಕ್ಕೆ ಹಾಜರಾಗಿದ್ದರು.

  ಎಲ್ಲರ ಗಮನಸೆಳೆದ ಸೋನಾಕ್ಷಿ ಸಿನ್ಹಾ

  ಎಲ್ಲರ ಗಮನಸೆಳೆದ ಸೋನಾಕ್ಷಿ ಸಿನ್ಹಾ

  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೋನಾಕ್ಷಿ ಸಿನ್ಹಾ ಆಗಮಿಸಿದ್ದ ಅವರ ಡ್ರೆಸ್ ಎಲ್ಲರ ಕಣ್ಣು ಕುಕ್ಕಿತು.

  ಸುಮಾರು 200 ಚಿತ್ರಗಳ ಪ್ರದರ್ಶನ

  ಸುಮಾರು 200 ಚಿತ್ರಗಳ ಪ್ರದರ್ಶನ

  ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಮರ್ಪಿಸುತ್ತಿರುವ ಈ ಚಲನಚಿತ್ರೋತ್ಸವದಲ್ಲಿ 200 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಸ್ಪಾನಿಷ್, ಕೊಲಂಬಿಯಾ, ಫ್ರೆಂಚ್ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

  English summary
  Very rarely we see Kamal Hassan spotting with his family members. The actor, on Thursday (October 17), was spotted with his partner Gauthami and her daughter Subbulaksmi at the ongoing 15th edition of Mumbai Film Festival (MFF).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X