ಜಿಎಸ್ ಟಿ ಜಾರಿಯಾದ್ರೆ ಚಿತ್ರರಂಗಕ್ಕೆ ಗುಡ್ ಬೈ: ಕಮಲ್ ಹಾಸನ್
ಸಿನಿಮಾ ಟಿಕೆಟ್ ಮೇಲೆ ಜಿಎಸ್ ಟಿ ವಿಧಿಸಿರುವುದರ ವಿರುದ್ಧ ನಟ ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ಟಿಕೆಟ್ ಮೇಲೆ ಜಿಎಸ್ ಟಿ ಜಾರಿಗೆ ಸಂಬಂಧಪಟ್ಟಂತೆ ಇಂದು (ಜೂನ್ 2) ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಲ್ ಹಾಸನ್ ''ತೆರಿಗೆ ಜಾರಿಯಾದ್ರೆ ಸಿನಿಮಾ ಬೀಡ್ತಿನಿ'' ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
''ಸಿನಿಮಾ ಟಿಕೆಟ್ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲಾಗಿದೆ. ಇದನ್ನ ನಾವು ಒಪ್ಪಲ್ಲ. ಈ ತೆರಿಗೆಯನ್ನ ಕಡಿಮೆ ಮಾಡಿ ಅಥವಾ ತೆಗೆದುಹಾಕಿ, ಹಾಲಿವುಡ್ ನವರು ಒಪ್ಪಿದರು ನಾವು ಒಪ್ಪಲ್ಲ. ಒಂದು ಪಕ್ಷ ಜಿಎಸ್ ಟಿ ಜಾರಿಯಾದ್ರೆ ಚಿತ್ರರಂಗ ಬಿಡುತ್ತೇನೆ'' ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.

ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜುಲೈ 1 ರಿಂದ ಜಾರಿಯಾಗಲಿದೆ.
English summary
States GST of 28% will ruin the film industry. Requests it be Made 12 % Says Actor Kamal haasan.


Click it and Unblock the Notifications