»   » 'ಕನಕ' ದುನಿಯಾ ವಿಜಯ್ ಬಾಯಿಯಲ್ಲಿಯೂ ಬಂತು 'ಹವಾ' ಡೈಲಾಗ್

'ಕನಕ' ದುನಿಯಾ ವಿಜಯ್ ಬಾಯಿಯಲ್ಲಿಯೂ ಬಂತು 'ಹವಾ' ಡೈಲಾಗ್

Posted By:
Subscribe to Filmibeat Kannada
ದುನಿಯಾ ವಿಜಯ್ ನಟನೆಯ ಕನಕ ಸಿನಿಮಾದ ಟ್ರೈಲರ್ ರಿಲೀಸ್ | Filmibeat Kannada

'ಹವಾ' ಎನ್ನುವ ಪದಕ್ಕೂ ಕನ್ನಡ ಚಿತ್ರರಂಗಕ್ಕೂ ಅದೇನೂ ನಂಟು ಇದೆಯೋ ಏನೋ.. ಹೀಗಿಗಾ ಈ 'ಹವಾ' ಡೈಲಾಗ್ ಚಿತ್ರಗಳಲ್ಲಿ ಜೋರಾಗುತ್ತಿದೆ. ಜೊತೆಗೆ ಅದೇ ಡೈಲಾಗ್ ಗಳು ದೊಡ್ಡ ವಿವಾದವನ್ನು ಹುಟ್ಟಿಸುತ್ತಿವೆ. ಈಗ 'ಕನಕ' ಚಿತ್ರದ ಟ್ರೇಲರ್ ನಲ್ಲಿಯೂ 'ಹವಾ' ಡೈಲಾಗ್ ಇದೆ.

ದುನಿಯಾ ವಿಜಿಗೆ 'ಅಂತಾರಾಷ್ಟ್ರೀಯ ಅಥ್ಲೆಟ್'ನಿಂದ ತರಬೇತಿ.!

ಆದರೆ ಇಲ್ಲಿ ದುನಿಯಾ ವಿಜಯ್ ಯಾವುದೇ ನಟರಿಗೆ ಆಗಲಿ ಅಥಾವ ಯಾವುದೇ ಚಿತ್ರಕ್ಕೆ ಆಗಲಿ ಟಾಂಗ್ ನೀಡುವಂತೆ ಡೈಲಾಗ್ ಹೇಳಿಲ್ಲ. ಬದಲಿಗೆ ''ಇಲ್ಲಿ ಕನ್ನಡ ಸಿನಿಮಾದೇ ಹವಾ..'' ಎಂದು ಘರ್ಜಿಸಿದ್ದಾರೆ. 'ಕನಕ' ಚಿತ್ರದ ಟ್ರೇಲರ್ ಸದ್ಯ ರಿಲೀಸ್ ಆಗಿದ್ದು, ಟ್ರೇಲರ್ ನಲ್ಲಿ ಈ ಡೈಲಾಗ್ ಇದೆ. ಇನ್ನು ಟ್ರೇಲರ್ ಒಂದು ಪಕ್ಕಾ ಕಮರ್ಶಿಯಲ್ ಚಿತ್ರದ ಫೀಲ್ ನೀಡಿದ್ದು, ಆಕ್ಷನ್ ಹೈಲೆಟ್ ಆಗಿದೆ.

'Kanaka' movie trailer released

'ಕನಕ' ಸಿನಿಮಾ ಒಬ್ಬ ಅಪ್ಪಟ್ಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯ ಕಥೆಯಾಗಿದ್ದು, ಇಲ್ಲಿ ದುನಿಯಾ ವಿಜಯ್ ಆಟೋ ಡ್ರೈವರ್ ಆಗಿದ್ದಾರೆ. ಕನಕ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಹರಿಪ್ರಿಯಾ ಮತ್ತು ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನವೀನ್ ಸಜ್ಜು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

English summary
Watch Video : Duniya Vijay's 'Kanaka' movie trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada