For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ನಲ್ಲಿ ಈಗ 'ಕನಸು ಮಾರಾಟಕ್ಕಿದೆ'

  |

  ಇತ್ತೀಚಿಗಷ್ಟೆ 'ಮನೆ ಮಾರಾಟಕ್ಕಿದೆ' ಸಿನಿಮಾ ಬಂದಿತ್ತು. ಈಗ 'ಕನಸು ಮಾರಾಟಕ್ಕಿದೆ' ಎಂಬ ಸಿನಿಮಾ ಬರ್ತಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನಿಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಈ ಚಿತ್ರ ಈಗ ಕುತೂಹಲ ಮೂಡಿಸಿದೆ.

  ಸ್ಮಿತೇಶ್ ಎಸ್ ಬಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನವೀನ್ ಪೂಜಾರಿ ಚಿತ್ರದ ಕಥೆ ಹೆಣೆದಿದ್ದು, ಅನೀಶ್ ಪೂಜಾರಿ ಚಿತ್ರಕಥೆ ಸಂಭಾಷಣೆ ರಚಿಸಿದ್ದಾರೆ.

  ಕನಸಿನ ರೆಕ್ಕೆ ಬಿಚ್ಚಿ ಹಾರುವ ತವಕದ ಕಥೆಯಿದು. ಕಂಪ್ಲೀಟ್ ಕಾಮಿಡಿ ಥ್ರಿಲ್ಲರ್ ಸಿನಿಮಾ. ನಾಯಕನಾಗಿ ಪ್ರಜ್ಞೇಶ್, ನಾಯಕಿ ಸ್ವಸ್ತಿಕ, ಹಾಗೂ ನವ್ಯ, ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಧೀರಜ್ ನೀರ್ಮಾರ್ಗ, ಚಿದಂಬರ, ಸೂರ್ಯ ಕುಂದಾಪುರ ಹಾಗೂ ಚೇತನ್ ರೈ ಮಾಣಿ, ಮೋಹನ್ ಶೇಣಿ ಹೀಗೆ ಹಲವಾರು ಕಲಾವಿದರ ದಂಡೇ ಇದೆ.

  Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?

  ಕನಸು ಮಾರಾಟಕ್ಕೆ ನಾಗೇಂದ್ರ ಪ್ರಸಾದ್ ಸಾಥ್

  'ಕನಸು‌ ಮಾರಾಟಕ್ಕಿದೆ' ಚಿತ್ರಕ್ಕೆ ಮಾನಸ ಹೊಳ್ಳರವರು ಸಂಗೀತ ನಿರ್ದೇಶನವಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಸಾಹಿತಿ ನಾಗೇಂದ್ರ ಪ್ರಸಾದ್ ರವರು ಚಿತ್ರಕ್ಕೆ ಎರಡು ಗೀತೆಗಳನ್ನು ಬರೆದಿದ್ದಾರೆ. ನಿರ್ದೇಶಕ ಕವಿರಾಜ್ ಈಗಾಗಲೇ ಒಂದು ಗೀತೆಗೆ ಸಾಹಿತ್ಯ ಬರೆದಿದ್ದಾರೆ. ಅಂತೆಯೇ ನಿರ್ದೇಶಕ‌ ಭರಾಟೆ ಚೇತನ್ ರವರು ಒಂದು ಗೀತೆಗೆ ಸಾಹಿತ್ಯ ಬರೆಯಲಿದ್ದಾರೆ. ಹಾಗೂ ಯುವ ಸಾಹಿತಿ ಸುಕೇಶ್ ಕೂಡ ಒಂದು ಗೀತೆಗೆ ಸಾಹಿತ್ಯ ಬರೆದಿದ್ದಾರೆ.

  ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದ 'ದಿನೇಶ್ ದಿಗ್ಗಜರು'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್ ಗೆದ್ದ 'ದಿನೇಶ್ ದಿಗ್ಗಜರು'

  ಇನ್ನುಳಿದಂತೆ ತಾಂತ್ರಿಕವಾಗಿಯೂ ಚಿತ್ರತಂಡ ಉತ್ತಮವಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಸಂಕಲನಕಾರರಾಗಿ ಗಣೇಶ್ ನಿರ್ಚಾಲ್ ಜೊತೆಯಾಗಿದ್ದಾರೆ.

  ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯದಲ್ಲೆ ತೆರೆಗೆ ಬರುವ ತಯಾರಿ ನಡೆಸುತ್ತಿದೆ. ಅದಕ್ಕೂ ಮುಂಚೆ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯೂ ಮಾಡುವ ಹಾದಿಯಲ್ಲಿದೆ ಚಿತ್ರತಂಡ.

  English summary
  Kanasu Maaratakkide movie is ready to release. comedy kiladigalu fame anisha poojari has write scripts and dialogues for this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X