For Quick Alerts
  ALLOW NOTIFICATIONS  
  For Daily Alerts

  Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ

  |

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ಚಲನಚಿತ್ರ ನಟಿಯಾಗಿದ್ದ ಜೆ ಜಯಲಲಿತಾ ಅವರ ಜೀವನ ಮತ್ತು ಸಾವು ಎರಡು ತೀರಾ ವಿಶೇಷ. ಹಾಗಾಗಿ, ಅವರ ಬಯೋಪಿಕ್ ಸಿನಿಮಾ ಮಾಡಲು ಎಲ್ಲ ಚಿತ್ರರಂಗದವರು ದುಂಬಾಲು ಬಿದ್ದಿದ್ದಾರೆ.

  ಅಮ್ಮನ ಜೀವನ ಚರಿತ್ರೆ ನಾವು ಮಾಡ್ತೀವಿ, ನಾವು ಮಾಡ್ತೀವಿ ಎಂದು ಪೈಪೋಟಿಗೆ ಇಳಿದಿದ್ದಾರೆ. ಈಗಾಗಲೇ ನಟಿ ನಿತ್ಯಾ ಮೆನನ್ ಅಭಿನಯಿಸುತ್ತಿರುವ ಜಯಲಲಿತಾ ಬಯೋಪಿಕ್ ದೊಡ್ಡ ಕುತೂಹಲ ಹುಟ್ಟಿಸಿದೆ.

  ಊಹೆ ಮಾಡಿದ್ದು ಒಂದು, ಆಗಿದ್ದೇ ಇನ್ನೊಂದು: ನಿತ್ಯಾ ಮೆನನ್ ಗೆ ಇದು ಅದೃಷ್ಟ.!

  'ಐರನ್ ಲೇಡಿ' ಎಂಬ ಹೆಸರಿನಲ್ಲಿ ಸಿನಿಮಾ ಮಾಡ್ತಿದ್ದು, ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡ್ತಿದೆ. ಇದೀಗ, ಜಯಲಲಿತಾ ಮೇಲೆ ಬಾಲಿವುಡ್ ಕಣ್ಣಾಕಿದ್ದು, ಖ್ಯಾತ ನಟಿಯ ಅಮ್ಮನ ಪಾತ್ರದಲ್ಲಿ ಮಿಂಚಲಿದ್ದಾರೆ. ಅಷ್ಟಕ್ಕೂ, ಯಾರದು? ಮುಂದೆ ಓದಿ.....

  ಅಮ್ಮನಾದ ಕಂಗನಾ ರಣಾವತ್

  ಅಮ್ಮನಾದ ಕಂಗನಾ ರಣಾವತ್

  ಇತ್ತೀಚಿಗಷ್ಟೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕುರಿತು ಮಣಿಕರ್ಣಿಕಾ ಎಂಬ ಸಿನಿಮಾ ಮಾಡಿದ್ದ ಕಂಗನಾ, ಈಗ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಪುರಚ್ಚಿ ತಲೈವಿ ಜಯಲಲಿತಾ ಅವರ ಬಯೋಪಿಕ್ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ.

  ಜಯಲಲಿತಾ ಬಯೋಪಿಕ್ ಗಾಗಿ ಮೂವರ ನಡುವೆ ಕಿತ್ತಾಟ.!

  ಹಿಂದಿ ಮತ್ತು ತಮಿಳಿನಲ್ಲಿ ಸಿನಿಮಾ

  ಹಿಂದಿ ಮತ್ತು ತಮಿಳಿನಲ್ಲಿ ಸಿನಿಮಾ

  ಕಂಗನಾ ಮಾಡಲಿರುವ ಈ ಬಯೋಪಿಕ್ ಸಿನಿಮಾ ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಬರಲಿದೆ. ತಮಿಳಿನಲ್ಲಿ 'ತಲೈವಿ' ಎಂದು ಹೆಸರಿಟ್ಟಿದ್ದು, ಹಿಂದಿಯಲ್ಲಿ 'ಜಯಾ' ಎಂದು ಟೈಟಲ್ ಅಂತಿಮವಾಗಿದೆ.

  'ಜಯಲಲಿತಾ' ಬಯೋಪಿಕ್ ನಲ್ಲಿ ಯಾರಾಗಾಲಿದ್ದಾರೆ 'ಅಮ್ಮ'.?

  ವಿಜಯೇಂದ್ರ ಪ್ರಸಾದ್ ಕಥೆ

  ವಿಜಯೇಂದ್ರ ಪ್ರಸಾದ್ ಕಥೆ

  ಬಾಹುಬಲಿ, ಮಣಿಕರ್ಣಿಕಾ ಅಂತಹ ಚಿತ್ರಗಳಿಗೆ ಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್ (ಎಸ್ ಎಸ್ ರಾಜಮೌಳಿ ಅವರ ತಂದೆ) ಜಯಲಲಿತಾ ಅವರ ಬಯೋಪಿಕ್ ಗೆ ಕಥೆ ಬರೆಯುತ್ತಿದ್ದಾರೆ. ಹೀಗಾಗಿ, ಈ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಎ.ಎಲ್ ವಿಜಯ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.

  ತನ್ನ ಬಯೋಪಿಕ್ ಯಾರು ಮಾಡಬೇಕೆಂದು ಜಯಲಲಿತಾ ಅಂದೇ ಹೇಳಿದ್ದರಂತೆ: ಯಾರು ಆ ನಟಿ.?

  ನಿತ್ಯಾ ಮೆನನ್ vs ಕಂಗನಾ

  ನಿತ್ಯಾ ಮೆನನ್ vs ಕಂಗನಾ

  ಈಗ ಈ ಎರಡು ಬಯೋಪಿಕ್ ಚಿತ್ರಗಳ ಮೇಲೆ ಚಿತ್ರಜಗತ್ತಿನ ಕಣ್ಣು ಬಿದ್ದಿದೆ. ಯಾವ ಬಯೋಪಿಕ್ ನಲ್ಲಿ ಯಾವ ಕಥೆ ಹೇಳಲು ಹೊರಟಿದ್ದಾರೆ. ಯಾರ ಸಿನಿಮಾ ಪಾರದರ್ಶಕತೆಯಿಂದ ಕೂಡಿರುತ್ತೆ. ಇಬ್ಬರಲ್ಲಿ ಯಾರೂ ಚೆನ್ನಾಗಿ ನಟಿಸಬಲ್ಲರು ಅಥವಾ ಸೂಕ್ತವಾಗಿ ಪಾತ್ರವನ್ನ ನಿಭಾಯಿಸಬಲ್ಲರು ಎಂಬ ಮಾತುಗಳು ಈಗ ಚರ್ಚೆಯಾಗ್ತಿದೆ. ಆದ್ರೆ, ಈ ಎರಡು ಸಿನಿಮಾ ತೆರೆಗೆ ಬರೋದು ಮುಂದಿನ ವರ್ಷದ ಅಂತ್ಯಕ್ಕೆ ಎನ್ನುವುದು ಸದ್ಯದ ಮಾಹಿತಿ.

  English summary
  Bollywood actress Kangana Ranaut will be playing the role of Tamilnadu ex cm jayalalitha. The film will be titled Thalaivi and directed by Devi filmmaker AL Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X