»   » 'ಬೆಂಗಳೂರು ಅಂಡರ್ ವರ್ಲ್ಡ್‌' ಗೆ ಕಾಲಿಟ್ಟ 'ಡೆಡ್ಲಿ' ಆದಿತ್ಯ

'ಬೆಂಗಳೂರು ಅಂಡರ್ ವರ್ಲ್ಡ್‌' ಗೆ ಕಾಲಿಟ್ಟ 'ಡೆಡ್ಲಿ' ಆದಿತ್ಯ

Posted By:
Subscribe to Filmibeat Kannada

'ರೆಬೆಲ್' ಚಿತ್ರದ ನಂತರ ಗಾಂಧಿನಗರದಲ್ಲಿ ಕಾಣೆಯಾಗಿದ್ದ 'ಡೆಡ್ಲಿ ಸೋಮ' ಖ್ಯಾತಿಯ ನಟ ಆದಿತ್ಯ ಅವರು ನಿರ್ದೇಶಕ ಪಿ.ಎನ್ ಸತ್ಯ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಈ ಮೊದಲು ಸುದ್ದಿಯಾಗಿತ್ತು.

ಇದೀಗ ಆ ಸುದ್ದಿ ನಿಜವಾಗಿದೆ. ನಟ ಆದಿತ್ಯ ಅವರು ನಿರ್ದೇಶಕ ಪಿ.ಎನ್ ಸತ್ಯ ಅವರ ಜೊತೆ ಹೊಸ ಪ್ರಾಜೆಕ್ಟ್ ಒಂದಕ್ಕೆ ಸಹಿ ಹಾಕಿದ್ದಾರೆ. ಚಿತ್ರಕ್ಕೆ 'ಬೆಂಗಳೂರು ಅಂಡರ್ ವರ್ಲ್ಡ್' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಬೆಂಗಳೂರಿನ ಭೂಗತ ಲೋಕವನ್ನು ಎಳೆ-ಎಳೆಯಾಗಿ ಬಿಚ್ಚಿಡಲಾಗಿದೆ.[ಸ್ಯಾಂಡಲ್ ವುಡ್ ಹೀರೋಗಳು ಪರಭಾಷೆಯಲ್ಲಿ ವಿಲನ್ ಗಳು]

Kannada Actor Aditya's new movie is 'Bengaluru Underworld'

ಚಿತ್ರಕ್ಕೆ ನಿರ್ಮಾಪಕರಾದ ಸುಧಾಕರ್ ಮತ್ತು ಆನಂದ್ ಬಂಡವಾಳ ಹೂಡುತ್ತಿದ್ದು, ನಿರ್ದೇಶಕ ಪಿ.ಎನ್ ಸತ್ಯ ಅವರೇ ಕಥೆ-ಚಿತ್ರಕಥೆ-ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಈ ಮೊದಲು ನಿರ್ಮಾಪಕ ಕೆ.ಮಂಜು ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾದಲ್ಲಿ ಆದಿತ್ಯ ಅವರು ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ ಅಂತ ಗಾಸಿಪ್ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಆದಿತ್ಯ ಜಾಗಕ್ಕೆ ತಮಿಳು-ತೆಲುಗು ನಟ ಶ್ಯಾಮ್ ಎಂಟ್ರಿಯಾಗಿದ್ದಾರೆ.[ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?]

Kannada Actor Aditya's new movie is 'Bengaluru Underworld'

ಇನ್ನೇನು ಸದ್ಯದಲ್ಲೇ 'ಡೆಡ್ಲಿ' ಆದಿತ್ಯ ಹಾಗೂ ನಿರ್ದೇಶಕ ಪಿ.ಎನ್ ಸತ್ಯ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾ ಸೆಟ್ಟೇರಿ ಶೂಟಿಂಗ್ ಆರಂಭಿಸಲಿದೆ.

English summary
Kannada Actor Aditya has signed a new project titled as 'Bengaluru Underworld'. Director P N Satya himself has written the story, screenplay and dialogues apart from directing the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada