»   » ಸ್ವಪ್ನ ಜೊತೆ ಸಪ್ತಪದಿ ತುಳಿದ ಕೃಷ್ಣ ಅಜೇಯ್ ರಾವ್

ಸ್ವಪ್ನ ಜೊತೆ ಸಪ್ತಪದಿ ತುಳಿದ ಕೃಷ್ಣ ಅಜೇಯ್ ರಾವ್

Posted By:
Subscribe to Filmibeat Kannada

'ಸ್ಯಾಂಡಲ್ ವುಡ್ ಕೃಷ್ಣ' ಅಜೇಯ್ ರಾವ್ ಅವರು ಗುರುವಾರ (ಡಿ.18) ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಅವರ ಮದುವೆ ಕೊಪ್ಪಳದಲ್ಲಿ ದೇವಸ್ಥಾನವೊಂದರಲ್ಲಿ ಸರಳ, ಸುಂದರವಾಗಿ ನೆರವೇರಿತು. ಕೆಲವೇ ಕೆಲವು ಆಪ್ತರು ಅಜೇಯ್ ರಾವ್ ಮದುವೆಗೆ ಸಾಕ್ಷಿಯಾದರು.

ಇಷ್ಟಕ್ಕೂ ಅವರು ಕೈಹಿಡಿದಿರುವ ಹುಡುಗಿ ಹೆಸರು ಸ್ವಪ್ನ. ಅಜೇಯ್ ರಾವ್ ಅವರ ಹುಟ್ಟೂರು ಹೊಸಪೇಟೆ ಮೂಲದವರು ಸ್ವಪ್ನ. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಡಿಪ್ಲೊಮಾ ಪದವಿಧರರಾಗಿರುವ ಸ್ವಪ್ನ ಅವರು ಹೊಸಪೇಟೆಯ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ['ಸ್ವಪ್ನ'ಸುಂದರಿ ಕೈಹಿಡಿಯುತ್ತಿದ್ದಾರೆ 'ಸ್ಯಾಂಡಲ್ ವುಡ್ ಕೃಷ್ಣ']

ಹೊಸಪೇಟೆಗೆ ಅಜೇಯ್ ರಾವ್ ಭೇಟಿ ನೀಡುತ್ತಿದ್ದಾಗ ಈ ಹುಡುಗಿಯ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ಬದಲಾಗಿ ಈಗ ಗಟ್ಟಿಮೇಳದಲ್ಲಿ ಇಬ್ಬರೂ ಒಂದಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Kannada actor Ajay Rao tie the nuptial knot

ಹೊಸಪೇಟೇಯ ತನ್ನ ಸೋದರ ಸಂಬಂಧಿ ಪಕ್ಕದ ಮನೆ ಹುಡುಗಿ ಸ್ವಪ್ನ. ಆಗಾಗ ಹೊಸಪೇಟೆಗೆ ಬಂದುಹೋಗುತ್ತಿದ್ದಾಗ ಈ ಹುಡುಗಿ ಪರಿಚಯವಾಗಿದೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ಯಾರ್ ಶುರುವಾಗಿದೆ. ತಾವು ಸರಳವಾಗಿ ಮದುವೆಯಾಗುತ್ತಿದ್ದೇವೆ ಎಂದಿದ್ದರು ಅಜೇಯ್.

'ಎಕ್ಸ್ ಕ್ಯೂಸ್ ಮಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಅಜೇಯ್ ರಾವ್ ಅವರಿಗೆ ತಿರುವು ನೀಡಿದ ಚಿತ್ರ ತಾಜ್ ಮಹಲ್. ಬಳಿಕ ಬಂದಂತಹ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳೂ ಭಾರಿ ಸದ್ದು ಮಾಡಿದ್ದವು.

ಆದರೆ ಇತ್ತೀಚೆಗೆ ತೆರೆಕಂಡ 'ಜೈ ಭಜರಂಗಬಲಿ' ಚಿತ್ರ ನಿರೀಕ್ಷಿಸಿದ ಮಟ್ಟ ಮುಟ್ಟಲಿಲ್ಲ. ಕೃಷ್ಣಲೀಲಾ, ಕೃಷ್ಣ ಸನ್ ಆಫ್ ಸಿಎಂ, ಸೆಕೆಂಡ್ ಹ್ಯಾಂಡ್ ಲವರ್ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಹೊಸ ಬಾಳಿನ ಹೊಸಿಸಲಿ ನಿಂತಿರುವ 'ಸ್ಯಾಂಡಲ್ ವುಡ್ ಕೃಷ್ಣ'ನಿಗೆ ಶುಭವಾಗಲಿ. (ಏಜೆನ್ಸೀಸ್)

Read in English: Ajay Rao Ties The Knot!
English summary
Ajay Rao who is well known as Krishna in his movies, has tied the knot today, December 18, in a temple near Koppal. The actor has kept the marriage a low-key affair.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada