For Quick Alerts
  ALLOW NOTIFICATIONS  
  For Daily Alerts

  ಅಂಬಿ ವಿ ಮಿಸ್ ಯೂ....ಕಣ್ಣೀರು ತರಿಸುತ್ತೆ ಅಂತಿಮಯಾತ್ರೆಯ ಈ ಫೋಟೋಗಳು

  |
  Ambareesh : ಅಂಬರೀಷ್ ಅಂತಿಮ ಕ್ಷಣಗಳ ಫೋಟೋಗಳು | FILMIBEAT KANNADA

  ಅಂಬಿ ಇನ್ನಿಲ್ಲ ಎಂಬ ಸುದ್ದಿ ಬರಸಿಡಲು ಬಡಿದಂತೆ ಹೊರಬಿತ್ತು. ಪ್ರೀತಿಯ ಅಂಬಿ ನಮ್ಮನ್ನ ಬಿಟ್ಟು ಹೋದರಲ್ಲ ಎಂದು ಕೋಟ್ಯಾಂತರ ಅಭಿಮಾನಿಗಳು ಕಣ್ಣೀರಿಟ್ಟರು. ಇನ್ಮುಂದೆ ನಮ್ಮನ್ನ ಬೈಯೋರು ಯಾರು.? ಎಂದು ಗೋಳಾಡಿದರು. ಕೊನೆಯ ಸಲ ಅಂಬಿ ಅಂತಿಮ ದರ್ಶನ ಪಡೆಯಬೇಕು ಎಂದು ರಾತ್ರಿವಿಡಿ ಕಾದು ಕುಂತರು.

  ಅಂಬಿಯ ಅಂತಿಮ ದರ್ಶನ ಪಡೆದುಕೊಂಡವರು ನಾನು ಧನ್ಯ ಅಂದುಕೊಂಡರು ಹೋದರು. ಅಂತಿಮ ನಮನ ಸಲ್ಲಿಸಲಾಗದವರು 'ನಮ್ಮ ಅಣ್ಣಾ ಸತ್ತಿಲ್ಲ, ನಮ್ಮೊಳಗೆ ಇದ್ದಾರೆ' ಅಂದುಕೊಂಡು ಹೋದರು.

  ಸಾವನ್ನ 'ಜೋಕರ್' ಎಂದು ಗೇಲಿ ಮಾಡಿದ್ರು ಅಂಬಿ: ಹಂಸಲೇಖ

  ಇದನ್ನ ಮೀರಿ ಹೃದಯ ಸ್ಪರ್ಶಿಸುವಂತಹ ಕ್ಷಣಗಳು ಅಂಬಿ ಅಂತಿಮಯಾತ್ರೆಯಲ್ಲಿ ಕಂಡು ಬಂದವು. ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು 'ಜಲೀಲ'ನ ಅಂತಿಮಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಅಂಬಿಯನ್ನ ಕಳೆದುಕೊಂಡವರು ಭಾವನೆಗಳು ಫೋಟೋಗಳಲ್ಲಿ ಸೆರೆಯಾಗಿದೆ. ಅಂಬಿ ಅಂತಿಮಯಾತ್ರೆಯಲ್ಲಿ ಸೆರೆಯಾಗಿರುವ ಕೆಲವು ಮನಮುಟ್ಟುವ ಫೋಟೋಗಳು ಆಯ್ಕೆ ಮಾಡಲಾಗಿದೆ. ಆ ಫೋಟೋಗಳನ್ನ ಮುಂದೆ ಓದಿ....

  ಹೋಗಿ ಬಾ ಅಪ್ಪ....

  ಹೋಗಿ ಬಾ ಅಪ್ಪ....

  'ಅಪ್ಪ ನೀನ್ ಮತ್ತೆ ಬರೋವರೆಗೆ ಅಮ್ಮನನ್ನ ನಾನು ನೋಡ್ಕೊತಾ ಇರ್ತಿನಿ..ರೀ ನೀವು ಹೋಗ್ ಬನ್ನಿ.. ಅಲ್ಲಿವರೆಗೆ ಅಭಿನ ನಾನ್ ನೋಡ್ಕೊತಾ ಇರ್ತಿನಿ..'' ಎನ್ನುವ ರೀತಿ ಇದೆ ಈ ಫೋಟೋ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

  ಈ ಭಾವನಾತ್ಮಕ ಫೋಟೋ ಹಿಂದಿನ ಛಾಯಾಗ್ರಾಹಕ ಇವರೇ

  37 ವರ್ಷದ ಬಿಟ್ಟು ಹೋದೆ ನೀನು

  37 ವರ್ಷದ ಬಿಟ್ಟು ಹೋದೆ ನೀನು

  ಸುಮಾರು 37 ವರ್ಷದ ಸ್ನೇಹಿತನನ್ನ ಕಳೆದುಕೊಂಡ ತೆಲುಗು ನಟ ಮೋಹನ್ ಬಾಬು, ಅಂಬಿಯ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತರು. ತನ್ನ ಮಗ, ಮಗಳು ಜೊತೆ ಎರಡು ದಿನ ಇಲ್ಲೇ ಇದ್ದು, ಅಂಬಿಯನ್ನ ಕಳುಹಿಸಿಕೊಟ್ಟರು. ಕೊನೆಯವರೆಗೂ ಸ್ನೇಹಿತನನ್ನ ಕಳೆದುಕೊಂಡೇ ನೋವ ಬಾಬು ಅವರನ್ನ ಕಾಡುತ್ತಲೇ ಇತ್ತು.

  ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!

  ಒಂದೇ ಒಂದು ಸಾರಿ ಎದ್ದೇಳು 'ಅಂಬಿ'

  ಒಂದೇ ಒಂದು ಸಾರಿ ಎದ್ದೇಳು 'ಅಂಬಿ'

  'ಅಂಬಿ ನಿಂಗ್ ವಯಸ್ಸಾಯ್ತೋ' ಎಂಬ ಟೈಟಲ್ ಇಟ್ಟಿದ್ದೇ ಕಿಚ್ಚ ಸುದೀಪ್. ಆ ಟೈಟಲ್ ಇಟ್ಟಾಗ ಬಹುಶಃ ಅವರಿಗೆ ಅರ್ಥವಾಗಲೇ ಇಲ್ಲ ಅನಿಸುತ್ತೆ. ಅಂಬಿಗೆ ನಿಜವಾಗಲೂ ವಯಸ್ಸಾಗಿದೆ. ಅವರು ಕೊನೆಯ ದಿನಗಳನ್ನ ಕಳೆಯುತ್ತಿದ್ದಾರೆ ಅಂತ. ಅದಕ್ಕೆ ಅಂಬಿ ಕೂಡ 'ಇದು ನನ್ನ ಕೊನೆಯ ಸಿನಿಮಾ' ಎನ್ನುತ್ತಲೇ ಇದ್ದರು.

  ಮತ್ತೆ ಹುಟ್ಟಿ ಬಾ ಮಂಡ್ಯಕ್ಕೆ..

  ಮತ್ತೆ ಹುಟ್ಟಿ ಬಾ ಮಂಡ್ಯಕ್ಕೆ..

  ಅಂಬರೀಶ್ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಬಂದಿದ್ದರು. ವಯಸ್ಸಿನ ಮಿತಿಯಿರಲಿಲ್ಲ. ಯುವಕರು, ವಯಸ್ಸಾದವರು, ನಡೆಯಲು ಆಗದ ಹಿರಿಯರು, ವಿಕಲಚೇತನರು....ಇವರಿಗೆ ತಮ್ಮ ಕಷ್ಟಕ್ಕಿಂತ ಜಲೀಲನ ಮುಖ ನೋಡುವುದು ಮುಖ್ಯವಾಗಿತ್ತು.

  ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ

  ಒಡೆಯನಿಲ್ಲದ ಮನೆಯ ಕಾಯಬೇಕು

  ಒಡೆಯನಿಲ್ಲದ ಮನೆಯ ಕಾಯಬೇಕು

  ಅಂಬರೀಶ್ ಅವರು ಎಲ್ಲೇ ಹೋದರು ಅವರ ಆಪ್ತ, ಸಹಾಯಕ, ಸೇವಕ, ಎಲ್ಲವೂ ಆಗಿದ್ದ ಶ್ರೀನಿವಾಸ್. ಒಡೆಯನಿಲ್ಲದ ಮನೆಯಲ್ಲಿ ಒಡೆಯನಿಗಾಗಿ ಕಾಯುವ ಸ್ಥಿತಿ ಈಗ ಅವರದ್ದು.

  ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

  ಮಂಡ್ಯದ ಮಗನಾಗಿದ್ದಕ್ಕೆ ಸಾರ್ಥಕ

  ಮಂಡ್ಯದ ಮಗನಾಗಿದ್ದಕ್ಕೆ ಸಾರ್ಥಕ

  ನಮ್ಮ ತಂದೆಯ ಮೇಲೆ ಮಂಡ್ಯದ ಜನತೆ ಇಟ್ಟಿರುವ ಪ್ರೀತಿಗೆ ನಾನು ಋಣಿಯಾಗಿರುತ್ತೇನೆ. ನಿಮ್ಮ ಅಭಿಮಾನವನ್ನ ನಾನು ಮರೆಯುವುದಿಲ್ಲ ಎಂದು ಅಂಬಿ ಮಗ ಅಭಿಷೇಕ್ ಮಂಡ್ಯಕ್ಕೆ ಕೈಮುಗಿದ ಸಂದರ್ಭ. ಮಂಡ್ಯದ ಗಂಡು ಅಂಬರೀಶ್ ಅವರ ಪಾರ್ಥಿವ ಶರೀರ ಮಂಡ್ಯಕ್ಕೆ ತರಬೇಕು ಎಂದು ಪಟ್ಟು ಹಿಡಿದು ಕುಂತಿದ್ದರು ಮಂಡ್ಯದ ಜನ. ಹುಟ್ಟೂರಿನ ಜನರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಸೇನಾಕಾಫ್ಟರ್ ಮೂಲಕ ಮಂಡ್ಯಕ್ಕೆ ಪಾರ್ಥಿವ ಶರೀರ ರವಾನಿಸಲಾಗಿತ್ತು.

  ಅಂಬಿಗಾಗಿ ಕಾಯುತ್ತಿದ್ದ ಚಿತೆ

  ಅಂಬಿಗಾಗಿ ಕಾಯುತ್ತಿದ್ದ ಚಿತೆ

  ಅಂಬಿ ಅಂತ್ಯಸಂಸ್ಕಾರಕ್ಕಾಗಿ ಸಿದ್ಧ ಮಾಡಿದ್ದ ಚಿತೆ. ಅಂಬಿಯ ಪಾರ್ಥಿವ ಶರೀರಕ್ಕಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿ ಕಾಯುತ್ತಿತ್ತು. ಬಾ ಅಂಬರೀಶ್, ಇನ್ಮುಂದೆ ಇದೇ ನಿನ್ನ ಜಾಗ, ನಾನೇ ನಿನಗೆ ಹಾಸಿಗೆ' ಎಂದು ಆಹ್ವಾನಿಸುತ್ತಿದ್ದ ಕ್ಷಣ ಇದು.

  ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್

  ತಂದೆಯಿಲ್ಲದ ಕಲಾವಿದ ಕುಟುಂಬ

  ತಂದೆಯಿಲ್ಲದ ಕಲಾವಿದ ಕುಟುಂಬ

  ಕನ್ನಡ ಚಿತ್ರರಂಗಕ್ಕೆ ತಂದೆಯಂತ್ತಿದ್ದ ಅಂಬರೀಶ್ ಅವರನ್ನ ಕಳೆದುಕೊಂಡ ಕಲಾವಿದರು, ಅನಾಥರಾಗಿದ್ದಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿ. ಅಪ್ಪಾಜಿ ವಿ ಮಿಸ್ ಯೂ ಎಂದು ಹೇಳುತ್ತಾ ಅವರನ್ನ ಕಳುಹಿಸಿಕೊಡುವ ವೇಳೆ ಕ್ಲಿಕ್ಕಿಸಿದ ಫೋಟೋ ಇದು.

  ನಾಲ್ವರಲ್ಲ....ನಾವೆಲ್ಲರೂ

  ನಾಲ್ವರಲ್ಲ....ನಾವೆಲ್ಲರೂ

  ಸತ್ತಾಗ ನಿನ್ನ ಹಿಂದೆ ಎಷ್ಟು ಜನ ಬರ್ತಾರೆ, ಸತ್ತಾಗ ನಿನ್ನನ್ನು ಹೊರಲು ಬರೋದು ಯಾರು ಎಂದು ಕೇಳಿದಾಗ, ನಾವು ನಾಲ್ಕು ಜನ ಇದ್ದೇವೆ ಎನ್ನದೇ ನಾವೆಲ್ಲರೂ ಎಂದವರು ಸ್ಯಾಂಡಲ್ ವುಡ್ ಕಲಾವಿದರು. ಶಿವಣ್ಣ, ಯಶ್, ದರ್ಶನ್, ಪ್ರೇಮ್, ಗಣೇಶ್ ಎಲ್ಲರೂ ಹೆಗಲ ಕೊಟ್ಟವರೇ.

  ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

  ಸುಮ ಕೊಟ್ಟ ಕೊನೆಯ ತುತ್ತು

  ಸುಮ ಕೊಟ್ಟ ಕೊನೆಯ ತುತ್ತು

  ಅಂಬರೀಶ್ ಅವರಿಗೆ ಅತಿ ಹೆಚ್ಚು ಪ್ರೀತಿ ಕೊಟ್ಟಿದ್ದು ಸುಮಲತಾ. ಅಂಬಿಗೆ ಸುಮಲತಾ ಎಷ್ಟು ಸಲ ಊಟ ತಿನ್ನಿಸಿರಬಹುದು. ಆದ್ರೆ, ಇನ್ಮುಂದೆ ತಿನ್ನಿಸಲು ಅವರೇ ಇಲ್ಲ. ಇದು ನನ್ನ ಕೊನೆಯ ತುತ್ತು.

  ಅಣ್ಣನ ನೋಡೋಕೆ ಬಿಡಿ

  ಅಣ್ಣನ ನೋಡೋಕೆ ಬಿಡಿ

  ಅಂಬಿಯ ಅಂತಿಮ ದರ್ಶನ ಪಡೆಯಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅದರಲ್ಲಿ ಅನೇಕರಿಗೆ ಅಂತಿಮ ದರ್ಶನ ಸಿಗಲಿಲ್ಲ. ಅಣ್ಣನ ನೋಡ್ಬೇಕು ಬಿಡ್ರೋ, ನಮ್ಮನ್ನ ಬಿಡ್ರೋ ಅಂತ ಕೂಗಿ ಕೂಗಿ ಹೇಳುತ್ತಿದ್ದರು. ಕೊನೆಗೂ ಅಂಬಿಗೆ ಇವರ ಮಾತು ಕೇಳಲೇ ಇಲ್ಲ.

  ಜಲೀಲ ಟು ಅಂಬಿ: ರೆಬೆಲ್ ಆಗಿ ಬಾಳಿದ 'ಪಾಳೇಗಾರ'ನ ಕಥೆ

  ನಾವು ಯಾರ ಬಳಿ ಹೋಗಬೇಕು

  ನಾವು ಯಾರ ಬಳಿ ಹೋಗಬೇಕು

  ಇಂಡಸ್ಟ್ರಿಯಲ್ಲಿ ಏನೇ ಆದರೂ ಅಂತಿಮವಾಗಿ ಅದನ್ನ ಬಗೆಹರಿಸುತ್ತಿದ್ದಿದ್ದೇ ಅಂಬರೀಶ್. ಅವರ ಬಲಗೈ ಬಂಟನಾಗಿದ್ದ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಇಂದು ನಾಯಕನಿಲ್ಲದ ದೋಣಿಯಲ್ಲಿ ಹೋಗಬೇಕಿದೆ. ರಾತ್ರಿ ಹಗಲು ಎನ್ನದೇ ಅಂಬಿಗಾಗಿ ಕಾದು ಕುಂತಿದ್ದು ರಾಕಿಂಗ್ ಯಶ್.

  ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

  English summary
  In pics: Kannada, telugu, tamil celebrities pays their homage to veteran kannada actor and politician ambarish.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X