ಸಿನಿಮಾದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೊ' ಪಾತ್ರ
ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಿರುವವರನ್ನು '''ತೇಜಸ್ವಿ ಬರೆದ ಪುಸ್ತಕಗಳಲ್ಲಿ ನಿಮ್ಮ ಫೇವರೇಟ್ ಯಾವುದು ?'' ಅಂತ ಕೇಳಿದರೆ ಬಹುಪಾಲು ಉತ್ತರ 'ಕರ್ವಾಲೊ' ಆಗಿರುತ್ತದೆ. ಈ ಪುಸ್ತಕ ಅದೆಷ್ಟೋ ಜನರಿಗೆ ಓದಿನ ರುಚಿ ಹತ್ತಿಸಿತ್ತು. ಆದರೆ ಇದೀಗ ಈ ಕಾದಂಬರಿಯ ಒಂದು ಪಾತ್ರವಾದ 'ಕರ್ವಾಲೊ' ಸಿನಿಮಾದ ಪಾತ್ರ ಆಗುತ್ತಿರುವುದು ವಿಶೇಷ.
ಈ ಹಿಂದೆ ರಾಷ್ಟ್ರಪ್ರಶಸ್ತಿ ಗೆದ್ದ ಸಿನಿಮಾ ಮಾಡಿದ್ದ ಮಂಸೋರೆ ಈಗ 'ನಾತಿಚರಾಮಿ' ಎಂಬ ಮತ್ತೊಂದು ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಬ್ಬ ಮನೋ ವೈದ್ಯರ ಪಾತ್ರ ಇದೆಯಂತೆ. ಆತನ ಔಷಧೋಪಚಾರವೇ ವಿಶಿಷ್ಟವಾಗಿದ್ದು, ಪ್ರಕೃತಿ ಮೂಲಕ ಮನೋವ್ಯಾಧಿಗೆ ಔಷದ ನೀಡುವ ವ್ಯಕ್ತ ಅವನಾರುತ್ತಾನೆ. ಪ್ರಕೃತಿ ಎಂದ ತಕ್ಷಣ ತೇಜಸ್ವಿ ನೆನಪಾಗಿ ಅವರನ್ನು ರೂಪಕವಾಗಿ ಇಟ್ಟುಕೊಂಡು ಆ ಪಾತ್ರಕ್ಕೆ 'ಕರ್ವಾಲೊ' ಹೆಸರನ್ನು ಇಡಲಾಗಿದೆಯಂತೆ.

'ಕರ್ವಾಲೊ' ಪಾತ್ರದಲ್ಲಿ ಬಾಲಾಜಿ ಮನೋಹರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರು 'ಲೂಸಿಯಾ' ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅಂದಹಾಗೆ, ಶೃತಿ ಹರಿಹರನ್ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಲ್ಲಿ ನಾಯಕನಾಗಿದ್ದಾರೆ. ಬಿಂದುಮಾಲಿನಿ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಧ್ಯಾರಾಣಿ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ.

ಇನ್ನು 'ನಾತಿಚರಾಮಿ' ಸಿನಿಮಾದ ಮೊದಲ ಪೋಸ್ಟರ್ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದ್ದು, ವಿಭಿನ್ನ ಶೈಲಿಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.


Click it and Unblock the Notifications











