»   » ದರ್ಶನ್ ಅವರ ಈ ಭಾನುವಾರ ಹೇಗಿತ್ತು ಗೊತ್ತಾ?

ದರ್ಶನ್ ಅವರ ಈ ಭಾನುವಾರ ಹೇಗಿತ್ತು ಗೊತ್ತಾ?

Posted By:
Subscribe to Filmibeat Kannada

ರಜಾದಿನ ಭಾನುವಾರ ಬಂತೆಂದರೆ ಸಾಕು ಎಲ್ಲರೂ ತಮ್ಮ ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಹಾಗು ಆತ್ಮೀಯರ ಜೊತೆ ಪಾರ್ಕ್, ಮಾಲ್ ಅಂತ ಹೊರಗಡೆ ಸುತ್ತಾಡಿ ವೀಕೆಂಡ್ ಅನ್ನು ಸಖತ್ ಆಗಿ ಎಂಜಾಯ್ ಮಾಡ್ತಾರೆ.

ಇದೀಗ ಅದೇ ರೀತಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ವಾರದ ರಜಾ ದಿನವಾದ ಭಾನುವಾರ ತಮ್ಮ ಗೆಳೆಯ ಸೃಜನ್ ಲೋಕೇಶ್, ಪ್ರೀತಿಯ ಸಹೋದರ ದಿನಕರ್ ತುಗುದೀಪ್ ಮತ್ತು ಮತ್ತೊಬ್ಬ ಸ್ನೇಹಿತ ಧರ್ಮ ಅವರ ಜೊತೆಗೂಡಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ವೀಕೆಂಡ್ ಅನ್ನು ಎಂಜಾಯ್ ಮಾಡಿದ್ದಾರೆ.[ಹೊಸ ಅವತಾರ ಎತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

ಬರೀ ಎಂಜಾಯ್ ಮಾಡಿದ್ದು ಮಾತ್ರವಲ್ಲದೇ, 'ಸಂಡೇ ಸ್ಪೆಷಲ್ ಅಂತ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಬಿರಿಯಾನಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಎಲ್ಲರಿಗೂ ಅಡುಗೆ ಮಾಡಿ ಬಡಿಸುವ ಜವಾಬ್ದಾರಿಯನ್ನು ದರ್ಶನ್ ಅವರೇ ಹೊತ್ತಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ಚಡ್ಡಿ ದೋಸ್ತ್ ಸೃಜಾ, ಸಹೋದರ ದಿನಕರ್ ಅವರಿಗೆಲ್ಲಾ ದರ್ಶನ್ ಅವರ ಕೈ ರುಚಿ ಸವಿಯುವ ಅವಕಾಶ ಈ ವೀಕೆಂಡ್ ನಲ್ಲಿ ಸಿಕ್ಕಿತ್ತು. ಇದನ್ನು ಕಂಡ ಅಭಿಮಾನಿಗಳೂ ತಮ್ಮ ನೆಚ್ಚಿನ ನಟನ ಕೈರುಚಿ ತಮಗಾದರೂ ಸಿಗಬಾರದಿತ್ತೇ ಎಂದು ಆಸೆಪಟ್ಟಿದ್ದಾರೆ.['ಮಧುರ ಸ್ವಪ್ನ'ದ ಗುಂಗಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್]

ದರ್ಶನ್ ಅವರ 'ಜಗ್ಗುದಾದಾ' ಸಿನಿಮಾದ ಲೇಟೆಸ್ಟ್ ಶೂಟಿಂಗ್ ಸ್ಟಿಲ್ಸ್ ಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...(ಚಿತ್ರಕೃಪೆ: ಫೇಸ್ ಬುಕ್)

ಬಿರಿಯಾನಿ ತಯಾರಿಸಿದ ದರ್ಶನ್

'ಜಗ್ಗುದಾದಾ' ಶೂಟಿಂಗ್ ಗೆ ಭಾನುವಾರ ರಜಾ ಆದ್ರಿಂದ ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮದೇ ಫಾರ್ಮ್ ಹೌಸ್ ನಲ್ಲಿ ತೆರೆದ ಒಲೆ ಹಾಕಿ ಬಿರಿಯಾನಿ ತಯಾರಿಸಿ ತಮ್ಮ ಗೆಳೆಯರಾದ ಸೃಜನ್ ಲೋಕೇಶ್, ಧರ್ಮ ಹಾಗೂ ಪ್ರೀತಿಯ ಸಹೋದರ ದಿನಕರ್ ತೂಗುದೀಪ್ ಅವರಿಗೆ ಪ್ರೀತಿಯಿಂದ ಬಡಿಸಿದರು. ಅಂತೂ ಈ ವೀಕೆಂಡ್ ಅನ್ನು ದರ್ಶನ್ ಮತ್ತವರ ಗ್ರೂಪ್ ಸಖತ್ ಜಾಲಿ ಮಾಡಿದರು.[ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್]

ಗಜ ಜೊತೆ ಸೃಜಾ

ಭಾನುವಾರದಂದು ಶೂಟಿಂಗ್ ಬಿಡುವಿನಲ್ಲಿ ಗೆಳೆಯರು ಸಖತ್ ಮಸ್ತಿ ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಚಿತ್ರದಲ್ಲಿ ದರ್ಶನ್ ಮತ್ತು ಸೃಜನ್ ಲೋಕೇಶ್ ಅವರ ತಮ್ಮ ಬಾಡಿ ಶೋ ಮಾಡಿದ್ದು ಹೀಗೆ. ನಾನಾ-ನೀನಾ ಎಂಬ ಪೈಪೋಟಿ ಇವರಿಬ್ಬರ ನಡುವೆ ನಡೆದಿರಬಹುದು ಎಂಬುದನ್ನು ಈ ಚಿತ್ರವೇ ಹೇಳುತ್ತಿದೆ.

ಅಂಬಿ ಅವರ ಸರ್ ಪ್ರೈಸ್ ವಿಸಿಟ್

ರೆಬೆಲ್ ಸ್ಟಾರ್ ಅಂಬರೀಶ್ ಅವರು ಇತ್ತೀಚೆಗೆ ದರ್ಶನ್ ಅವರ 'ಜಗ್ಗುದಾದಾ' ಶೂಟಿಂಗ್ ಸ್ಪಾಟ್ ಗೆ ಅಚ್ಚರಿಯ ಭೇಟಿ ನೀಡಿದ್ದರು. ಇವರನ್ನು ಸೆಟ್ ನಲ್ಲಿ ಕಂಡ ದರ್ಶನ್ ಅವರು ತುಂಬಾ ಖುಷಿಪಟ್ಟಿದ್ದಾರೆ. ಕೆಲಹೊತ್ತು ಕುಶಲೋಪರಿ ಮಾತನಾಡಿದ ಅಂಬರೀಶಣ್ಣ ಅವರು ಶೂಟಿಂಗ್ ವೀಕ್ಷಿಸಿ ನಂತರ ತೆರಳಿದರು.['ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ಅಂಬರೀಶ್?]

ಹೊಸ ಸ್ಟಿಲ್

ನಿರ್ದೇಶಕ ಕಮ್ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಜಗ್ಗುದಾದಾ' ಚಿತ್ರದ ಹೊಚ್ಚ ಹೊಸ ಸ್ಟಿಲ್. ಬೆಂಕಿಯ ಮೇಲಿನಿಂದ ಹಾರಿ ಬರುತ್ತಿರುವ ದೃಶ್ಯ ನೋಡುತ್ತಿದ್ದರೆ, ಈ ಚಿತ್ರದಲ್ಲಿ ದರ್ಶನ್ ಅವರು ಸಖತ್ ಫೈಟ್ ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ.

ಜಗ್ಗುದಾದಾ ದರ್ಶನ್

ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ 'ಜಗ್ಗುದಾದಾ' ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸದ್ಯಕ್ಕೆ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಇದು ಚಿತ್ರದ ಶೂಟಿಂಗ್ ನ ಮತ್ತೊಂದು ಸ್ಟಿಲ್.

ಬಂದರಿನಲ್ಲಿ ಶೂಟಿಂಗ್

'ಜಗ್ಗುದಾದಾ' ಚಿತ್ರದ ಶೂಟಿಂಗ್ ಬಂದರು ಪ್ರದೇಶದಲ್ಲೂ ನಡೆಯುತ್ತಿದೆ. ಚಿತ್ರದಲ್ಲಿ ದರ್ಶನ್ ಅವರು ಎದುರಾಳಿಗಳ ಬೆನ್ನಟ್ಟಿ ಓಡುತ್ತಿರುವ ದೃಶ್ಯ.

ಎಂಟ್ರಿ ಸಾಂಗ್

'ಜಗ್ಗುದಾದಾ' ದರ್ಶನ್ ಅವರ ಎಂಟ್ರಿ ಬಹಳ ಜಬರ್ದಸ್ತ್ ಆಗಿರಬಹುದು ಎಂಬುದಕ್ಕೆ ಈ ಸ್ಟಿಲ್ ಸಾಕ್ಷಿ. ಎಂಟ್ರಿ ಸಾಂಗ್ ನಲ್ಲಿ ದರ್ಶನ್ ಅವರ ಸೂಪರ್ ಸ್ಟೆಪ್ಸ್ ನೋಡಿ.

ನಟಿ ದೀಕ್ಷಾ ಸೇಠ್

ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರು 'ಜಗ್ಗುದಾದಾ' ದರ್ಶನ್ ಅವರ ಜೊತೆ ಇದೇ ಮೊದಲ ಬಾರಿಗೆ ಡ್ಯುಯೆಟ್ ಹಾಡುತ್ತಿದ್ದಾರೆ.

ಅಪರೂಪದ ಚಿತ್ರ

ಅಪರೂಪದ ಚಿತ್ರದಲ್ಲಿ ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮ. ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಡೆಡ್ಲಿ ಆದಿತ್ಯ ಮುಂತಾದವರನ್ನು ಒಂದೇ ಫ್ರೇಮ್ ನಲ್ಲಿ ಅಭಿಮಾನಿಗಳು ಕಾಣಬಹುದು.

English summary
Kannada Actor Darshan and his friends are having a blast on Sunday (Feb 21). Darshan, Dinakar, Dharma, Srujan Lokesh and other friends have got together in Darshan's farm near Mysuru for a day party. The actor was seen cooking biryani for his friends in the open in wood fire. Sunday was a break from 'Jaggudada' shooting for Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada