For Quick Alerts
  ALLOW NOTIFICATIONS  
  For Daily Alerts

  'ಕೌರವ' ಬಿಸಿ ಪಾಟೀಲ್ ಭೇಟಿ ಮಾಡಿದ ಡಿ-ಬಾಸ್ ದರ್ಶನ್

  |

  ನಟ-ರಾಜಕಾರಣಿ ಬಿಸಿ ಪಾಟೀಲ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿದ್ದಾರೆ. ಬಿಸಿ ಪಾಟೀಲ್ ಅವರ ಮನೆಗೆ (ಕಚೇರಿ) ಹೋಗಿದ್ದ ಡಿ ಬಾಸ್ ಕೆಲ ಸಮಯ ಅವರ ಜೊತೆ ಕುಳಿತು ಯೋಗಕ್ಷೇಮ ವಿಚಾರಿಸಿದ್ದಾರೆ.

  ಕೌರವನ ಅಡ್ಡದಲ್ಲಿ ರಾಬರ್ಟ್ ಹವಾ ಹೇಗಿದೆ ನೋಡಿ

  ಬಿಸಿ ಪಾಟೀಲ್ ಮತ್ತು ನಟ ದರ್ಶನ್ ಭೇಟಿ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಹಜವಾಗಿ ಕೆಲವು ಚರ್ಚೆಗಳಿಗೆ ಕಾರಣವಾಗಿದೆ. ಆರ್ ಆರ್ ನಗರ ಚುನಾವಣೆ ನಂತರ ರಾಜಕೀಯ ನಾಯಕರ ಜೊತೆ ಕಾಣಿಸಿಕೊಂಡಿರುವ ದರ್ಶನ್ ಕುರಿತು ಕುತೂಹಲ ಮೂಡಿದೆ. ಇನ್ನು ಇಬ್ಬರು 'ಕೌರವ'ವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದಾರೆ. ಅಷ್ಟಕ್ಕೂ ಈ ಭೇಟಿ ಏಕೆ? ಮುಂದೆ ಓದಿ...

  ಆರ್ ಆರ್ ನಗರ ಚುನಾವಣೆಯಲ್ಲಿ ಪ್ರಚಾರ

  ಆರ್ ಆರ್ ನಗರ ಚುನಾವಣೆಯಲ್ಲಿ ಪ್ರಚಾರ

  ಇತ್ತೀಚಿಗಷ್ಟೆ ನಡೆದ ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ನಟ ದರ್ಶನ್ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ್ದರು. ಈ ವೇಳೆ ಬಿಸಿ ಪಾಟೀಲ್ ಸಹ ದರ್ಶನ್ ಜೊತೆ ಪ್ರಚಾರದಲ್ಲಿ ಭಾಗಿಯಾಗಿದ್ದರು.

  ಬಾಗಲಕೋಟೆಯಲ್ಲಿ ದರ್ಶನ್ ಗೆ ನೆನಪಾದರು ಬಿ ಸಿ ಪಾಟೀಲ್ಬಾಗಲಕೋಟೆಯಲ್ಲಿ ದರ್ಶನ್ ಗೆ ನೆನಪಾದರು ಬಿ ಸಿ ಪಾಟೀಲ್

  ಬಾಗಲಕೋಟೆಯಲ್ಲಿ ಕೌರವನನ್ನು ನೆನೆದಿದ್ದ ದರ್ಶನ್

  ಬಾಗಲಕೋಟೆಯಲ್ಲಿ ಕೌರವನನ್ನು ನೆನೆದಿದ್ದ ದರ್ಶನ್

  ಈ ಹಿಂದೆ ಬಾಗಲಕೋಟೆಯ ಇಳಕಲ್‌ನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದಲ್ಲಿ ಭಾಗಿಯಾಗಿದ್ದ ದರ್ಶನ್ ವೇದಿಕೆಯಲ್ಲಿ ಬಿಸಿ ಪಾಟೀಲ್ ಅವರನ್ನು ನೆನಪಿಸಿಕೊಂಡಿದ್ದರು. ಇಳಕಲ್ ಸೀರೆ ಅಂದ್ರೆ ಬಿಸಿ ಪಾಟೀಲ್ ನೆನಪಾಗ್ತಾರೆ ಎಂದಿದ್ದರು.

  ಎಸ್‌ಟಿ ಸೋಮಶೇಖರ್ ಸಹ ಇದ್ದರು

  ಎಸ್‌ಟಿ ಸೋಮಶೇಖರ್ ಸಹ ಇದ್ದರು

  ಬಿಸಿ ಪಾಟೀಲ್ ಹಾಗೂ ದರ್ಶನ್ ಅವರು ಭೇಟಿ ಮಾಡಿದ ಸಮಯದಲ್ಲಿ ಕಾಂಗ್ರೆಸ್ ಶಾಸಕ ಎಸ್‌ ಟಿ ಸೋಮಶೇಖರ್ ಸಹ ಇದ್ದರು. ಮಂಡ್ಯ ಚುನಾವಣೆ, ಆರ್ ಆರ್ ನಗರ ಚುನಾವಣೆಯ ನಂತರ ರಾಜಕೀಯ ನಾಯಕರ ಜೊತೆ ದರ್ಶನ್ ಅವರ ಸ್ನೇಹ ಮತ್ತಷ್ಟು ಹೆಚ್ಚಾಗುತ್ತಿದೆ.

  ಕೌರವನ ಪಾತ್ರದಲ್ಲಿ ಬಿಸಿ ಪಾಟೀಲ್

  ಕೌರವನ ಪಾತ್ರದಲ್ಲಿ ಬಿಸಿ ಪಾಟೀಲ್

  ದರ್ಶನ್ ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನನ ಪಾತ್ರ ಮಾಡುವುದಕ್ಕೂ ಮುಂಚೆ, ಕನ್ನಡ ಇಂಡಸ್ಟ್ರಿಯಲ್ಲಿ ಕೌರವ ಅಂದ್ರೆ ಬಿಸಿ ಪಾಟೀಲ್ ಕಣ್ಣ ಮುಂದೆ ಬರ್ತಿದ್ದರು. ತಮ್ಮ ಹಲವು ಚಿತ್ರಗಳಲ್ಲಿ ದುರ್ಯೋಧನ ಗೆಟಪ್ ಹಾಕಿದ್ದ ಬಿಸಿ ಪಾಟೀಲ್ ನಾಟಕಗಳಲ್ಲಿಯೂ ಪಾತ್ರ ಮಾಡಿದ್ದರಂತೆ. ಕೌರವ ಎಂಬ ಸಿನಿಮಾದ ಒಂದು ದೃಶ್ಯದಲ್ಲಿ ದುರ್ಯೋಧನನ ಪಾತ್ರದಲ್ಲಿ ಮಿಂಚಿದ್ದರು.

  English summary
  Challenging star Darshan has met actor-politician BC Patil yesterday. pic are viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X