»   » ಮತ್ತೆ ಮೈಸೂರಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮತ್ತೆ ಮೈಸೂರಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಚೇತರಿಸಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಮತ್ತೆ ಅಸ್ವಸ್ಥರಾದ ಹಿನ್ನಲೆಯಲ್ಲಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೊದಲು ತೀವ್ರ ಜ್ವರದಿಂದ ಬಳಲುತ್ತಿದ್ದ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಸುಮಾರು 1 ವಾರಗಳ ಕಾಲ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.[ದರ್ಶನ್ 'ಸಂಸಾರ ಗಲಾಟೆ'ಯನ್ನು ನಾನು ಸರಿ ಮಾಡುತ್ತೇನೆ: ಅಂಬರೀಶ್]

Kannada Actor Darshan Rushes to Mysuru meet his Mother

ರಾತ್ರಿ ಸಕ್ಕರೆ ಖಾಯಿಲೆ ತುಂಬಾ ಉಲ್ಬಣಿಸಿದ ಹಿನ್ನಲೆಯಲ್ಲಿ ತಡ ರಾತ್ರಿ ಮೀನಾ ತೂಗುದೀಪ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯಲ್ಲಿ ವಾಸವಾಗಿದ್ದರು.

ಬೆಂಗಳೂರಿನಲ್ಲಿದ್ದ ದರ್ಶನ್ ಅವರು ತಾಯಿಯ ಆರೋಗ್ಯ ವಿಚಾರಿಸಲು ಮೈಸೂರಿನ ಆಸ್ಪತ್ರೆಗೆ ಧಾವಿಸಿದ್ದಾರೆ. ನಿನ್ನೆ (ಮಾರ್ಚ್ 12) ರಾತ್ರಿ ಮೈಸೂರಿನ ಫಾರಂಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ತಾಯಿಯ ಜೊತೆ ಆಸ್ಪತ್ರೆಯಲ್ಲೇ ಇದ್ದಾರೆ ಎನ್ನಲಾಗಿದೆ.['ದರ್ಶನ್ ದಂಪತಿ ಕುರಿತು ಶೀಘ್ರವೇ ಒಳ್ಳೆಯ ಸುದ್ದಿ ನೀಡುವೆ' - ಅಂಬರೀಶ್]

Kannada Actor Darshan Rushes to Mysuru meet his Mother

ಇನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನೀಡಿದ ದೂರಿನ ಅನ್ವಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ಜೊತೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಖುದ್ದಾಗಿ ಭೇಟಿ ಮಾಡಿ ಮಾತನಾಡಲಿದ್ದಾರೆ. ಎಂದು ಮಂಜುಳಾ ಮಾನಸ ಹೇಳಿಕೆ ನೀಡಿದ್ದಾರೆ.

English summary
Kannada Actor Darshan on Saturday (March 12) rushed to Mysuru to meet his mother who is admitted to JSS Hospital.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada