»   » 'ಕುರುಕ್ಷೇತ್ರ' ಚಿತ್ರಕ್ಕಾಗಿ ರಾಜ್ ಕುಮಾರ್ ಸಿನಿಮಾ ನೋಡುತ್ತಿರುವ ದರ್ಶನ್

'ಕುರುಕ್ಷೇತ್ರ' ಚಿತ್ರಕ್ಕಾಗಿ ರಾಜ್ ಕುಮಾರ್ ಸಿನಿಮಾ ನೋಡುತ್ತಿರುವ ದರ್ಶನ್

Posted By:
Subscribe to Filmibeat Kannada

ಕನ್ನಡದ ಹೆಮ್ಮೆಯ ಸಿನಿಮಾ 'ಕುರುಕ್ಷೇತ್ರ' ಮುಂದಿನ ತಿಂಗಳು ಶುರು ಆಗಲಿದೆ. ಈ ಸಿನಿಮಾಗಾಗಿ ದರ್ಶನ್ ತುಂಬ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದುರ್ಯೋಧನನ ಪಾತ್ರದಲ್ಲಿ ನಟಿಸುತ್ತಿರುವ ಡಿ ಬಾಸ್ ಈ ಚಿತ್ರಕ್ಕಾಗಿ ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನ ನೋಡುತ್ತಿದ್ದಾರಂತೆ.

'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

ಡಾ.ರಾಜ್ ಕುಮಾರ್ ಅನೇಕ ಐತಿಹಾಸಿಕ/ಪೌರಾಣಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಐತಿಹಾಸಿಕ/ಪೌರಾಣಿಕ ಪಾತ್ರವನ್ನು ಡಾ.ರಾಜ್ ಅವರಷ್ಟು ಚೆನ್ನಾಗಿ ನಿಭಾಯಿಸಬಲ್ಲ ಕನ್ನಡದ ಇನ್ನೊಬ್ಬ ನಟನಿಲ್ಲ ಎಂದರೆ ಖಂಡಿತ ತಪ್ಪಾಗಲ್ಲ. ಈಗ ನಟ ದರ್ಶನ್ ಕೂಡ ಡಾ.ರಾಜ್ ಅವರ ಅಂತಹ ಸಿನಿಮಾಗಳನ್ನು ನೋಡಿ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.

'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಜೊತೆ ಅರ್ಜುನ್ ಸರ್ಜಾ ನಟನೆ..?

Kannada Actor Darshan's Dedication towords 'Kurukshetra' movie.

ಇತ್ತೀಚಿನ ಸಂದರ್ಶನವೊಂದರಲ್ಲಿ ದರ್ಶನ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಡಾ.ರಾಜ್ ಅವರ ಚಿತ್ರಗಳ ಜೊತೆಗೆ ತಮ್ಮ ನೀನಾಸಂ ದಿನಗಳ ಅನುಭವ ಮತ್ತು 'ರಂಗದಲ್ಲಿ ಅಂತರಂಗ' ಎಂಬ ಪುಸ್ತಕವನ್ನು ದರ್ಶನ್ ಓದುತ್ತಿದ್ದಾರಂತೆ. 'ಕುರುಕ್ಷೇತ್ರ' ಚಿತ್ರ ಒಪ್ಪಿಕೊಂಡ ದಿನದಿಂದ ದುರ್ಯೋಧನನ ಪಾತ್ರಕ್ಕೆ ದರ್ಶನ್ ತಯಾರಿ ಶುರು ಮಾಡಿದ್ದಾರಂತೆ.

English summary
Kannada Actor Darshan is watching Dr Rajkumar films as a part of preparation 'Kurukshetra' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada