For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರದಲ್ಲಿ ದರ್ಶನ್: ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ

  By Harshitha
  |

  ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ ಅಂತ ಹೇಳಲಾಗಿರುವ 'ನಾಗರಹಾವು' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಅಂತ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವು ವರದಿ ಮಾಡಿದ್ವಿ. ಈಗ ಅದೇ ವಿಚಾರದ ಕುರಿತಾಗಿ ಹೆಚ್ಚಿನ ಅಪ್ ಡೇಟ್ಸ್ ನೀಡ್ತಾ ಇದ್ದೀವಿ.

  ಮೊದಲನೆಯದಾಗಿ 'ನಾಗರಹಾವು' ಚಿತ್ರದಲ್ಲಿ ನಿಮ್ಮೆಲ್ಲರ ಪ್ರೀತಿಯ ದಾಸ ದರ್ಶನ್ ಕಾಣಿಸಿಕೊಳ್ಳುವುದು ಪಕ್ಕಾ. ಹಾಗಂತ ಖುದ್ದು ನಿರ್ಮಾಪಕರೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.['ವಿಷ್ಣು' ದಾದಾ ಮತ್ತು 'ಜಗ್ಗು ದಾದಾ' ದರ್ಶನ್ ಕುರಿತು ಈಗಷ್ಟೇ ಬಂದ ಬಿಗ್ ನ್ಯೂಸ್]

  ಹಾಗಾದ್ರೆ, 'ನಾಗರಹಾವು' ಚಿತ್ರದಲ್ಲಿ ದರ್ಶನ್ ಪಾತ್ರ ಏನು? ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ಆಕರ್ಷಣೆಯನ್ನು ಹೆಚ್ಚಿಸುವ ಪ್ರಯತ್ನ ಇದು!

  ಆಕರ್ಷಣೆಯನ್ನು ಹೆಚ್ಚಿಸುವ ಪ್ರಯತ್ನ ಇದು!

  ಸಾಖಿದ್ ಖುರೇಶಿ ನಿರ್ಮಾಣದ, ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರಹಾವು' ಚಿತ್ರದ ಬಗ್ಗೆ ಜನರ ಆಕರ್ಷಣೆಯನ್ನು ಹೆಚ್ಚಿಸಲು ಚಿತ್ರತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

  'ನಾಗರಹಾವು' ಚಿತ್ರದಲ್ಲಿ ದರ್ಶನ್

  'ನಾಗರಹಾವು' ಚಿತ್ರದಲ್ಲಿ ದರ್ಶನ್

  ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ 'ನಾಗರಹಾವು' ಚಿತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ.

  ವಿಶೇಷ ಹಾಡಿನಲ್ಲಿ ದರ್ಶನ್

  ವಿಶೇಷ ಹಾಡಿನಲ್ಲಿ ದರ್ಶನ್

  'ನಾಗರಹಾವು' ಚಿತ್ರದ ಸ್ಪೆಷಲ್ ಹಾಡಿಗೆ ದರ್ಶನ್ ಹೆಜ್ಜೆ ಹಾಕಲಿದ್ದಾರೆ.

  ಇದು ವಿಷ್ಣುವರ್ಧನ್ ರವರಿಗೆ ಅರ್ಪಣೆ

  ಇದು ವಿಷ್ಣುವರ್ಧನ್ ರವರಿಗೆ ಅರ್ಪಣೆ

  ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರಿಗೆ ಅರ್ಪಿಸಲೆಂದೇ ತಯಾರಾಗುತ್ತಿರುವ ವಿಶೇಷ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟೆಪ್ ಹಾಕಲಿದ್ದಾರೆ.

  ಗುರುಕಿರಣ್ ಸಂಗೀತದ ಹಾಡು

  ಗುರುಕಿರಣ್ ಸಂಗೀತದ ಹಾಡು

  ಕವಿರಾಜ್ ರಚಿಸಿರುವ, ಗುರುಕಿರಣ್ ಸಂಗೀತ ನೀಡಿರುವ, ಗಣೇಶ್ ಆಚಾರ್ಯ ನೃತ್ಯ ಸಂಯೋಜಿಸುವ ಹಾಡಲ್ಲಿ ದರ್ಶನ್ ಮಿಂಚಲಿದ್ದಾರೆ.

  ಸೆಪ್ಟೆಂಬರ್ 2 ರಂದು ಚಿತ್ರೀಕರಣ

  ಸೆಪ್ಟೆಂಬರ್ 2 ರಂದು ಚಿತ್ರೀಕರಣ

  ಈ ಹಾಡಿನ ಚಿತ್ರೀಕರಣ ಸೆಪ್ಟೆಂಬರ್ 2 ಮತ್ತು 3 ರಂದು ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ನಡೆಯಲಿದೆ. ಮುನ್ನೂರು ನೃತ್ಯ ಕಲಾವಿದರ ಜೊತೆ ದರ್ಶನ್ ಹೆಜ್ಜೆ ಹಾಕಲಿದ್ದಾರೆ.

  ನಾಗರಹಾವು ಟೈಟಲ್ ಸಾಂಗ್

  ನಾಗರಹಾವು ಟೈಟಲ್ ಸಾಂಗ್

  ಸೆಪ್ಟೆಂಬರ್ 2, 3ರಂದು ನಾಗರಹಾವು ಟೈಟಲ್ ಸಾಂಗ್ ಚಿತ್ರೀಕರಣ ಮೈಸೂರಿನ ಮಹಾರಾಜ ಕಾಲೇಜ್ ಗ್ರೌಂಡ್ ನಲ್ಲಿ ನಡೆಯಲಿದೆ.

  English summary
  Confirmed: Challenging Star Darshan will make a special appearance in a special song that is dedicated to Dr.Vishnuvardhan in Kannada Movie 'Nagarahavu'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X