twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ರೇಸ್ ನಿಂದ ಹೊರಬಿದ್ದ 'ಕುರುಕ್ಷೇತ್ರ' ಮತ್ತು 'ಡಿಯರ್ ಕಾಮ್ರೇಡ್'

    |

    Recommended Video

    ಮತ್ತೊಮ್ಮೆ ನಿರಾಸೆ ಮೂಡಿಸಿದ ಕನ್ನಡ ಸಿನಿಮಾ. | Darshan | FILMIBEAT KANNADA

    2020ನೇ ಸಾಲಿನ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕನ್ನಡದ ಕುರುಕ್ಷೇತ್ರ ಸಿನಿಮಾ ಕೂಡ ಸ್ಥಾನ ಗಿಟ್ಟಿಸಿಕೊಂಡಿತ್ತು. ಆದ್ರೀಗ ಆಸ್ಕರ್ ರೇಸ್ ನಿಂದ ಕುರುಕ್ಷೇತ್ರ ಸಿನಿಮಾ ಹೊರಬದ್ದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ರಿಲೀಸ್ ಆಗಿ 50 ದಿನಗಳನ್ನು ಪೂರೈಸಿ ನೂರು ದಿನಗಳತ್ತ ಮುನ್ನುಗ್ಗುತ್ತಿದೆ.

    ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ 'ಗಲ್ಲಿ ಬಾಯ್'ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ 'ಗಲ್ಲಿ ಬಾಯ್'

    ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಕುರುಕ್ಷೇತ್ರ ಭಾರತದಿಂದ ಆಸ್ಕರ್ ಗೆ ಆಯ್ಕೆ ಆಗುವ ಸಿನಿಮಾ ಲಿಸ್ಟ್ ನಲ್ಲಿ ಸ್ಥಾನ ಪಡೆದಿತ್ತು. ಆಸ್ಕರ್ ರೇಸ್ ನಲ್ಲಿದ್ದ ಭಾರತದ ಒಟ್ಟು 28 ಸಿನಿಮಾಗಳಲ್ಲಿ ಕುರುಕ್ಷೇತ್ರ ಕೂಡ ಒಂದಾಗತ್ತು. ಜೊತೆಗೆ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಕೂಡ ಲಿಸ್ಟ್ ನಲ್ಲಿ ಇತ್ತು. ಆದ್ರೀಗ ಎರಡು ಸಿನಿಮಾ ರೇಸ್ ನಿಂದ ಹೊರಬಿದ್ದಿವೆ.

    ಗಲ್ಲಿ ಬಾಯ್ ಆಯ್ಕೆ

    ಗಲ್ಲಿ ಬಾಯ್ ಆಯ್ಕೆ

    ಆಸ್ಕರ್ ರೇಸ್ ನಲ್ಲಿದ್ದ 28 ಸಿನಿಮಾಗಳಲ್ಲಿ ಕೊನೆಯದಾಗಿ ಬಾಲಿವುಡ್ ನ ಗಲ್ಲಿ ಬಾಯ್ ಸಿನಿಮಾ ಭಾರತದಿಂದ ಆಯ್ಕೆ ಆಗಿ ಆಸ್ಕರ್ ರೇಸ್ ನಲ್ಲಿ ಸ್ಪರ್ಧಿಸಲಿದೆ. ರಾಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಅಭಿನಯದ ಗಲ್ಲಿ ಬಾಯ್ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿರುವುದು ಅನೇಕ ಬಾಲಿವುಡ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ರೇಸ್ ನಲ್ಲಿದ್ದ ಸೌತ್ ಇಂಡಿಯಾದ ಸಿನಿಮಾಗಳು

    ರೇಸ್ ನಲ್ಲಿದ್ದ ಸೌತ್ ಇಂಡಿಯಾದ ಸಿನಿಮಾಗಳು

    ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಕೊನೆಯದಾಗಿ ಭಾರತದಿಂದ ಗಲ್ಲಿ ಸಿನಿಮಾ ಆಯ್ಕೆಯಾಗಿದೆ. ಈ ಲಿಸ್ಟ್ ನಲ್ಲಿ ಕನ್ನಡದ ಕುರುಕ್ಷೇತ್ರ ಸಿನಿಮಾ ಸೇರಿದಂತೆ ಸೌತ್ ಇಂಡಿಯಾದಿಂದ ವಡ ಚೆನ್ನೈ, ಉಯಾರೆ, ಸೂಪರ್ ಡಿಲಕ್ಸ್, ಡಿಯರ್ ಕಾಮ್ರೆಡ್ ಸಿನಿಮಾಗಳು ಭಾರತದ 28 ಸಿನಿಮಾಗಳ ಲಿಸ್ಟ್ ನ ರೇಸ್ ನಲ್ಲಿದ್ದವು. ಗಲ್ಲಿ ಬಾಯ್ ಅಧಿಕೃತವಾಗಿ ಎಂಟ್ರಿ ಪಡೆಯುವ ಮೂಲಕ ಉಳಿದೆಲ್ಲ ಸಿನಿಮಾಗಳು ರೇಸ್ ನಿಂದ ಹೊರಬಿದ್ದಿವೆ.

    BIG NEWS: 2020 ಆಸ್ಕರ್ ರೇಸ್ ನಲ್ಲಿ ಕನ್ನಡದ ಏಕೈಕ ಚಿತ್ರ ಕುರುಕ್ಷೇತ್ರ.!BIG NEWS: 2020 ಆಸ್ಕರ್ ರೇಸ್ ನಲ್ಲಿ ಕನ್ನಡದ ಏಕೈಕ ಚಿತ್ರ ಕುರುಕ್ಷೇತ್ರ.!

    ಫೆಬ್ರವರಿಯಲ್ಲಿ ಪ್ರಶಸ್ತಿ ಘೋಷಣೆ

    ಫೆಬ್ರವರಿಯಲ್ಲಿ ಪ್ರಶಸ್ತಿ ಘೋಷಣೆ

    92ನೇ ಅಕಾಡೆಮೆ ಅವಾರ್ಡ್ ಅನ್ನು ಮುಂದಿನ ವರ್ಷ ಫೆಬ್ರವರಿ 9ರಂದು ಘೋಷಣೆ ಮಾಡಲಾಗುತ್ತೆ. ಇದುವರೆಯೂ ಭಾರತದ ಯಾವ ಸಿನಿಮಾವು ಆಸ್ಕರ್ ಪ್ರಶಸ್ತಿಯನ್ನು ಎತ್ತಿ ಹಿಡಿದಿಲ್ಲ. ಕೊನೆಯದಾಗಿ 2001ರಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಲಗಾನ್ ಸಿನಿಮಾ ಟಾಪ್ ಫೈವ್ ಲಿಸ್ಟ್ ನಲ್ಲಿ ಜಾಗ ಪಡೆದಿತ್ತು.

    ಮುನಿರತ್ನ ಹೀಗೆ ಮಾಡಿದ್ರೆ 'ಕುರುಕ್ಷೇತ್ರ' ಇನ್ನೂ ಎತ್ತರಕ್ಕೆ ಹೋಗ್ತಿತ್ತು.!ಮುನಿರತ್ನ ಹೀಗೆ ಮಾಡಿದ್ರೆ 'ಕುರುಕ್ಷೇತ್ರ' ಇನ್ನೂ ಎತ್ತರಕ್ಕೆ ಹೋಗ್ತಿತ್ತು.!

    'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಎಂಟ್ರಿಯಾಗಿತ್ತು

    'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಎಂಟ್ರಿಯಾಗಿತ್ತು

    ಕಳೆದ ಬಾರಿ 'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಭಾರತದಿಂದ ನಾಮನಿರ್ದೇಶನವಾಗಿತ್ತು. ಆದರೆ, ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಈ ಚಿತ್ರ ಹಿನ್ನಡೆ ಅನುಭವಿಸಿತ್ತು. ಈ ಸಲ 'ಗಲ್ಲಿ ಬಾಯ್' ಪ್ರಶಸ್ತಿ ತರುತ್ತಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

    English summary
    Darshan starrer Kurukshetra out of the Oscar race. Gully Boy directed by Zoya Akthar starring Ranveer singh alia bhat, selected to be India's official entry for the Oscars 2020 by Film Federation of India.
    Tuesday, February 4, 2020, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X