»   » 'ಚಕ್ರವರ್ತಿ' ನಂತರ ಮತ್ತೊಂದು ಚಿತ್ರದಲ್ಲಿ ದಿನಕರ್ ವಿಲನ್!

'ಚಕ್ರವರ್ತಿ' ನಂತರ ಮತ್ತೊಂದು ಚಿತ್ರದಲ್ಲಿ ದಿನಕರ್ ವಿಲನ್!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ, ಸದ್ಯ 'ಚಕ್ರವರ್ತಿ' ಚಿತ್ರದಲ್ಲಿ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇದೀಗ, ಮತ್ತೊಂದು ಹೊಸ ಚಿತ್ರದಲ್ಲಿ ವಿಲನ್ ಆಗಲಿದ್ದಾರಂತೆ ದರ್ಶನ್ ಸಹೋದರ.

ಹೌದು, 'ಜೊತೆ ಜೊತೆಯಲಿ', 'ನವಗ್ರಹ' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿರುವ 'ದಿನಕರ್ ತೂಗುದೀಪ', 'ಬುಲ್ ಬುಲ್', ಮದುವೆಯ ಮಮತೆಯ ಕರೆಯೋಲೆ' ಅಂತಹ ಚಿತ್ರಗಳನ್ನ ತಮ್ಮ ಬ್ಯಾನರ್ ನಲ್ಲೇ ನಿರ್ಮಾಣ ಕೂಡ ಮಾಡಿದ್ದರು. ಇದೀಗ, ನಟನೆ ಕಡೆ ಆಸಕ್ತಿ ತೋರುತ್ತಿರುವ ದಿನಕರ್ ತೂಗುದೀಪ ಚಿತ್ರರಂಗದಲ್ಲಿ ಖಳನಾಯಕಗಿ ಮುಂದುವರೆಯುವ ಸೂಚನೆ ಕೊಟ್ಟಿದ್ದಾರೆ.['ಚಕ್ರವರ್ತಿ' ದರ್ಶನ್ ದರ್ಬಾರ್ ನಲ್ಲಿ ಸಹೋದರ ದಿನಕರ್ ವಿಲನ್ ಗಿರಿ]

ಹೊಸ ಚಿತ್ರದಲ್ಲಿ ದಿನಕರ್ ಖಳನಾಯಕ!

ದರ್ಶನ್ ಸಹೋದರ ದಿನಕರ್ ತೂಗುದೀಪ ಹೊಸ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಮಲ್ ಸಾರಥಿ ನಿರ್ದೇಶನ ಮಾಡುತ್ತಿರುವ 'ಗಾಂಧಿ ಕ್ಲಾಸ್' ಚಿತ್ರದಲ್ಲಿ ನೆಗಿಟೀವ್ ಶೇಡ್ ನ ಪಾತ್ರವನ್ನ ನಿರ್ವಹಿಸುತ್ತಿದ್ದಾರಂತೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಹೋದರ ದಿನಕರ್ ಸವಾಲ್!]

ಪೊಲೀಸ್ ಅಧಿಕಾರಿಯಾಗಿ ದರ್ಶನ್ ಸಹೋದರ!

'ಗಾಂಧಿ ಕ್ಲಾಸ್' ಚಿತ್ರದಲ್ಲಿ ದಿನಕರ್ ತೂಗುದೀಪ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಮುಸ್ಲಿಂ ಶೈಲಿಯ ಭಾಷೆ ಮಾತಾಡುವ ಪಕ್ಕಾ ವಿಲನ್ ಅಂತೆ.

'ಚಕ್ರವರ್ತಿ'ಯಲ್ಲಿ ಖಡಕ್ ವಿಲನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 'ಚಕ್ರವರ್ತಿ' ಚಿತ್ರದಲ್ಲಿ ದಿನಕರ್ ಚೊಚ್ಚಲ ಭಾರಿಗೆ ನಟಿಸಿದ್ದು, ಮೊದಲ ಚಿತ್ರದಲ್ಲೇ ಖಳನಾಯಕನಾಗಿ ಇಂಡಸ್ಟ್ರಿಗೆ ಪರಿಚಯವಾಗಿದ್ದಾರೆ. 'ಚಕ್ರವರ್ತಿ' ಬಿಡುಗಡೆಗೂ ಮುಂಚೆ ಮತ್ತೊಂದು ಚಿತ್ರದಲ್ಲಿ ವಿಲನ್ ಆಗಿರುವುದು ವಿಶೇಷ.

ತಂದೆಯ ಮಾರ್ಗದಲ್ಲಿ ದಿನಕರ್ ಹೆಜ್ಜೆ!

ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ ಅವರು ಬಹುದೊಡ್ಡ ಕಲಾವಿದರು. ಖಳನಾಯಕ ಪಾತ್ರಗಳಿಗೆ ಖ್ಯಾತಿ ಪಡೆದಿದ್ದ ತಮ್ಮ ತಂದೆಯಂತೆ, ಈಗ ದಿನಕರ್ ಸಾಗುತ್ತಿದ್ದಾರೆ.

English summary
Kannada Actor Dinakar Thoogudeepa has Acting his 2nd Film in Villain Role. The Movie is Directed by Kamal Sarathi.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X