»   » ಶ್ರುತಿ ಕೈಹಿಡಿಯಲಿದ್ದಾರೆ 'ಕಲಾಕಾರ್' ಹರೀಶ್ ರಾಜ್

ಶ್ರುತಿ ಕೈಹಿಡಿಯಲಿದ್ದಾರೆ 'ಕಲಾಕಾರ್' ಹರೀಶ್ ರಾಜ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಜಂಪಿಂಗ್ ಸ್ಟಾರ್ ಎಂಬ ಬಿರುದಿಗೆ ಪಾತ್ರರಾಗಿರುವ ಹರೀಶ್ ರಾಜ್ (ಮೂಲ ಹೆಸರು ಹರೀಶ್ ರಾಜು) ಅವರ ಮದುವೆ ಇದೇ ಆಗಸ್ಟ್ 20ರಂದು ನಿಶ್ಚಯವಾಗಿದೆ. ಶ್ರುತಿ ಲೋಕೇಶ್ ಅವರ ಕೈಹಿಡಿಯುತ್ತಿದ್ದಾರೆ ಹರೀಶ್ ರಾಜ್.

ತಮ್ಮ ಬಾಳಸಂಗಾತಿಯನ್ನು ಮ್ಯಾಟ್ರಿಮೋನಿಯಲ್ ಜಾಲತಾಣದ ಮೂಲಕ ಆಯ್ಕೆ ಮಾಡಿದ್ದಾರೆ ಹರೀಶ್. ಕುಟುಂಬಿಕರು, ಸ್ನೇಹಿತರು ಮದುವೆಗೆ ತುಂಬಾ ಒತ್ತಾಯ ಮಾಡುತ್ತಿದ್ದರು. ಇನ್ನು ಅವರನ್ನು ಕಾಯಿಸುವುದು ಬೇಡ ಎಂದು ತಾನೇ ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ ಹರೀಶ್ ರಾಜ್. [ಗೌತಮ್ ಜತೆ ಏಳುಹೆಜ್ಜೆ ಹಾಕಿದ ರೂಪಾ ಅಯ್ಯರ್]

Harish Raj

ಕಲಾಕರ್ ಮತ್ತು ಗನ್ ಚಿತ್ರಗಳನ್ನು ನಿರ್ದೇಶಿಸಿರುವ ಹರೀಶ್ ರಾಜ್ ಹಲವಾರು ಸದಭಿರುಚಿಯ, ವೈವಿಧ್ಯಮಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರೀಶ್ ಕಾಸವಳ್ಳಿ ಅವರ ದ್ವೀಪ, ಕೂರ್ಮಾವತಾರ, ತಾಯಿ ಸಾಹೇಬ, ಕಾನೂರು ಹೆಗ್ಗಡತಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಿರುತೆರೆಯ 'ಹೊಸ ಚಿಗುರು ಹಳೇ ಬೇರು' (1996) ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಹರೀಶ್ ಅವರು ಮೊದಲು ಬಣ್ಣಹಚ್ಚಿದ ಚಿತ್ರ ದೋಣಿ ಸಾಗಲಿ (1998). ಬಳಿಕ ಅವರು ಕಲಾಕಾರ್ ಚಿತ್ರವನ್ನು ನಿರ್ದೇಶಿಸಿದರು. ಟಿವಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡರು.

ಬನದ ನೆರಳು, ಹೊಂಗನಸು, ಬೆಳದಿಂಗಳಾಗಿ ಬಾ, ತನನಂ ತನನಂ, ಮೌನಿ, ತುಂಟಾಟ, ಕುರಿಗಳು ಸಾರ್ ಕುರಿಗಳು ಮುಂತಾದ ಚಿತ್ರಗಳಲ್ಲಿ ಭಿನ್ನ ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಮನೆಯೊಂದು ಮೂರು ಬಾಗಿಲು, ಕುಬೇರಪ್ಪ ಅಂಡ್ ಸನ್ಸ್, ಕಾವ್ಯಾಂಜಲಿ, ಮಿಂಚಿನ ಬಳ್ಳಿ, ದಂಡಪಿಂಡಗಳು, ಒನ್ ಟೀ ಸ್ಪೂನ್ ಸ್ಪೆಷಲ್ ಮುಂತಾದ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Sandalwood actor and director Harish Raj is all set to enter wedlock on 20th August. He will tie the knot with Shruti Lokesh. The couple finding each other on a matrimonial site.
Please Wait while comments are loading...