»   » ಜಾನಪದ ಹಾಡಿಗೆ ನವರಸ ನಾಯಕ ಜಗ್ಗೇಶ್ ಕಂಠದಾನ

ಜಾನಪದ ಹಾಡಿಗೆ ನವರಸ ನಾಯಕ ಜಗ್ಗೇಶ್ ಕಂಠದಾನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರ ಕಾಮಿಡಿ, ಅವರ ನಟನೆ, ಹಾಗೂ ಅವರು ತಮ್ಮ ಮುಖದಲ್ಲಿ ವ್ಯಕ್ತಪಡಿಸುವ ಮುಖಭಾವ ಸಾಮಾನ್ಯವಾಗಿ ಎಲ್ಲರಿಗೂ ಬಹಳ ಇಷ್ಟ.

ಇದೇ ಜಗ್ಗೇಶ್ ಅವರು ಒಂದು ಹಾಡಿಗೆ ಧ್ವನಿ ನೀಡಿದರೆ ಹೇಗಿರುತ್ತೆ?. ಅದನ್ನೂ ಕೂಡ ಅಭಿಮಾನಿಗಳು ಕೇಳುವ ದಿನ ಬಹಳ ಹತ್ತಿರದಲ್ಲಿದೆ. ಹೌದು ನಟ ಜಗ್ಗೇಶ್ ಅವರು ಈಗಾಗಲೇ ಜಾನಪದ ಹಾಡೊಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ.[ಒಂದ್ಕಾಲದಲ್ಲಿ ಜಗ್ಗೇಶ್ ಅವರನ್ನು ಸ್ವಂತ ತಮ್ಮನಂತೆ ಕಂಡಿದ್ದ ಶಿವಣ್ಣ]

Kannada Actor Jaggesh sings for Music Album

'ದನ ಕಾಯೋನು' ಎಂಬ ಜಾನಪದ ಆಲ್ಬಂ ಒಂದಕ್ಕೆ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಕಂಠಸಿರಿಯಿಂದ ಹಾಡು ಹಾಡಿದ್ದಾರೆ. ಹಿರಿಯ ಗಾಯಕಿ ಮಂಜುಳಾ ಗುರುರಾಜ್ ಅವರ ಮಗ ಸಾಗರ್ ಗುರುರಾಜ್ ಅವರು ಈ ಜಾನಪದ ಆಲ್ಬಂನ ಸಂಗೀತ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದರು.

ಜಾನಪದ ಸೊಗಡು ಇರೋ ಈ ಮ್ಯೂಸಿಕ್ ಆಲ್ಬಂನ "ಸೂರ್ಯ ಬದಲಾಗವ್ನೆ...ಚಂದ್ರ ಬದಲಾಗವ್ನೆ..ಮನಸ್ಸಾನೆ ಬದಲಾಗಿ ಪರ್ಪಂಚ ಕೆಡ್ಸವ್ನೆ" ಎಂಬ ವಿಭಿನ್ನ ಹಾಡಿಗೆ ಜಗ್ಗೇಶ್ ಅವರು ತಮ್ಮ ಸುಮಧುರ ಧ್ವನಿ ನೀಡಿದ್ದಾರೆ.[ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್]

Kannada Actor Jaggesh sings for Music Album

ಈಗಾಗಲೇ ಈ ಮ್ಯೂಸಿಕ್ ಆಲ್ಬಂನ ಕೆಲಸಗಳು ಕೊನೆಯ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅಂದಹಾಗೆ ಜಗ್ಗೇಶ್ ಅವರು ಈ ಮೊದಲು ತಮ್ಮ ಸಿನಿಮಾದ ಹಾಡುಗಳಿಗೆ ಧ್ವನಿ ನೀಡಿದ್ದಾರಾದರೂ, ಮ್ಯೂಸಿಕ್ ಆಲ್ಬಂ ಒಂದಕ್ಕೆ ಧ್ವನಿ ನೀಡಿರೋದು ಇದೇ ಮೊದಲು.

ಜಾನಪದ ಹಾಡಿನ ರೆಕಾರ್ಡಿಂಗ್ ಫೋಟೋ ಒಂದನ್ನು ಟ್ವಿಟ್ಟರ್ ಗೆ ಅಪ್ ಲೋಡ್ ಮಾಡಿರುವ ಜಗ್ಗೇಶ್ ಅವರು, ಗ್ರಾಮೀಣ ಸೊಗಡಿನ ಹಾಡೊಂದಕ್ಕೆ ಧ್ವನಿ ನೀಡಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.

English summary
Kannada Actor Jaggesh sung a folk song called Danakayonu. The music is composed by Sagar Gururaj, the son of veteran singers Manjula and Gururaj. The song is based on folk theme. Jaggesh has sung songs in his films and this is his first for a music album.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X