»   » ಸ್ಟಾರ್ ನಟರ ಸೈಕೊ ಅಭಿಮಾನಿಗಳಿಗೆ ನಟ ಜಗ್ಗೇಶ್ ಹೇಳುವ ಮಾತಿದು..

ಸ್ಟಾರ್ ನಟರ ಸೈಕೊ ಅಭಿಮಾನಿಗಳಿಗೆ ನಟ ಜಗ್ಗೇಶ್ ಹೇಳುವ ಮಾತಿದು..

Written By:
Subscribe to Filmibeat Kannada

ಕನ್ನಡದಲ್ಲಿ ಸ್ಟಾರ್ ವಾರ್ ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಎಷ್ಟೋ ಬಾರಿ ಸ್ಟಾರ್ ವಾರ್ ಆಗುವುದಕ್ಕೆ ಆ ಇಬ್ಬರು ನಟರು ಕಾರಣರಾಗಿರುವುದಿಲ್ಲ. ಬದಲಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಕೆಲ ಕಾಮೆಂಟ್ ಗಳು ಕಾರಣವಾಗಿ ಬಿಟ್ಟಿರುತ್ತದೆ.

ಈ ಬಗ್ಗೆ ಈಗ ನಟ ಜಗ್ಗೇಶ್ ಉತ್ತರ ಕೊಟ್ಟಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಗ್ಗೇಶ್ ಕನ್ನಡದ ಸ್ಟಾರ್ ವಾರ್ ಬಗ್ಗೆ ಮತ್ತು ಅಭಿಮಾನಿಗಳ ಕುರುಡು ಅಭಿಮಾನದ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್ ತಮ್ಮ ಈ ಹೇಳಿಕೆಯ ಮೂಲಕ ಎಲ್ಲ ಸ್ಟಾರ್ ನಟರ ಫ್ಯಾನ್ಸ್ ಗಳಿಗೆ ಬುದ್ದಿವಾದ ಹೇಳಿದ್ದಾರೆ.

ಏನಿದು ಘಟನೆ..?

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸ್ಟಾರ್ ನಟರ ಅಭಿಮಾನಿಗಳ ವಾರ್ ನಡೆಯುತ್ತಲಿರುತ್ತದೆ. ಇತ್ತೀಚಿಗಷ್ಟೆ 'ರಾಜಕುಮಾರ' ಚಿತ್ರದ 100 ಡೇಸ್ ಕಾರ್ಯಕ್ರಮದಲ್ಲಿ ಸ್ಟಾರ್ ಗಳು ಭಾಗಿಯಾಗಿದ್ದ ಬಗ್ಗೆಯೂ ಕೆಲ ಅಭಿಮಾನಿಗಳು ಏನೇನೋ ಕಾಮೆಂಟ್ ಮಾಡಿದ್ದರು.

ಅಭಿಮಾನಿಯ ಪ್ರಶ್ನೆ

''ಕನ್ನಡ ಚಿತ್ರರಂಗವನ್ನು ಭಾಗ ಮಾಡಲು ಹೊರಟಿರುವ ಕೆಲ ಸೈಕೊ ಅಭಿಮಾನಿಗಳಿಗೆ ನಿಮ್ಮ ಉತ್ತರವೇನು'' ಎಂದು ಟ್ವಿಟ್ಟರ್‌ನಲ್ಲಿ ಜಗ್ಗೇಶ್‌ ಅವರಿಗೆ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದರು.

ಕೂಡಿ ಬಾಳಿದರೆ ಸ್ವರ್ಗ

''ನಾವು ಕನ್ನಡ ತಾಯಿಯ ಮಕ್ಕಳು. ನಮ್ಮಲ್ಲಿ ಬೇಧವಿಲ್ಲಾ! ಬೇಧಮಾಡಿ ಬದುಕುವುದು ಕನ್ನಡಿಗನ ಗುಣವಲ್ಲಾ! ನಮ್ಮಲ್ಲಿ ಒಗ್ಗಟ್ಟಿದೆ! ನಿಮ್ಮಲ್ಲೂ ಇರಲಿ! ಕೂಡಿ ಬಾಳಿದರೆ ಸ್ವರ್ಗ, ನೆನಪಿರಲಿ'' ಎಂದು ಜಗ್ಗೇಶ್ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.

ಒಗ್ಗಟ್ಟಿನ ಮಂತ್ರ

ನಟ ಜಗ್ಗೇಶ್ ಸ್ಟಾರ್ ವಾರ್ ಬಗ್ಗೆ ಸಾಕಷ್ಟು ಸಲ ಮಾತನಾಡಿದ್ದಾರೆ. ಕನ್ನಡದ ನಟರು ಒಗ್ಗಟ್ಟಾಗಿ ಇರಬೇಕು. ಯಾರೂ ಕನ್ನಡ ಚಿತ್ರರಂಗದ ಕುಟುಂಬದಲ್ಲಿ ಹುಳಿ ಹಿಂಡ ಬೇಡಿ ಅಂತ ಅನೇಕ ಬಾರಿ ಹೇಳಿಕೊಂಡಿದ್ದಾರೆ.

English summary
Kannada Actor Jaggesh has taken his twitter account to respond about star war in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada