ಜಗ್ಗೇಶ್ ರಿಯಲ್ ಲವ್ ಸ್ಟೋರಿಯ ಸಿನಿಮಾಗೆ ಹೀರೋ ಇವರೇ..!
ನಟ ನವರಸ ನಾಯಕ ಜಗ್ಗೇಶ್ ಜೀವನ ಸಿನಿಮಾ ಆಗಲಿದೆ ಎಂಬ ಸುದ್ದಿ ಅನೇಕ ದಿನಗಳಿಂದ ಇತ್ತು. ಆದರೆ ಈಗ ಈ ಸುದ್ದಿ ನಿಜ ಆಗಿದೆ. ಜಗ್ಗೇಶ್ ಅವರ ಲವ್ ಸ್ಟೋರಿ ಮೇಲೆ ಈಗ ಒಂದು ಸಿನಿಮಾ ಬರುತ್ತಿದೆ.
ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅವರ ಪ್ರೇಮ ಕಥೆಯನ್ನೇ ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ತಮ್ಮ ರಿಯಲ್ ಕಥೆಯ ಸಿನಿಮಾವನ್ನು ಜಗ್ಗೇಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, ತಮ್ಮ ಪಾತ್ರವನ್ನು ಸಿನಿಮಾದಲ್ಲಿ ನಿರ್ವಹಿಸುವುದಕ್ಕೆ ನಾಯಕನ ಆಯ್ಕೆಯನ್ನು ಜಗ್ಗೇಶ್ ಈಗಾಗಲೇ ಮಾಡಿದ್ದಾರೆ. ಮುಂದೆ ಓದಿ....

ಯತಿರಾಜ್ ಹೀರೋ
ಜಗ್ಗೇಶ್ ಅವರ ಜೀವನ ಕಥೆ ಆಧಾರಿತ ಚಿತ್ರಕ್ಕೆ ನಾಯಕನಾಗಿ ಅವರ ಪುತ್ರ ಯತಿರಾಜ್ ನಟಿಸುತ್ತಿದ್ದಾರೆ. ಈಗಾಗಲೇ ಅವರು ಕೆಲ ಕನ್ನಡ ಚಿತ್ರದಲ್ಲಿ ನಟಿಸಿದ್ದರು.

ಲವ್ - ಕಾಮಿಡಿ ಸಬ್ಜೆಕ್ಟ್
ಈ ಸಿನಿಮಾ ಮುಖ್ಯವಾಗಿ ಜಗ್ಗೇಶ್ ಮತ್ತು ಪತ್ನಿ ಪರಿಮಳ ಜಗ್ಗೇಶ್ ಅವರ ಲವ್ ಸ್ಟೋರಿ ಬಗ್ಗೆ ಇರಲಿದೆ. ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಅಂಶಗಳು ಸಿನಿಮಾದಲ್ಲಿರಲಿದೆಯಂತೆ

ಜಗ್ಗೇಶ್ ನಿರ್ದೇಶನ
ಜಗ್ಗೇಶ್ ತಮ್ಮ ಲೈಫ್ ಸ್ಟೋರಿ ಚಿತ್ರವನ್ನು ತಾವೇ ನಿರ್ದೇಶನ ಮಾಡಲಿದ್ದಾರೆ. ಸದ್ಯ ಈ ಚಿತ್ರ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿದ್ದು, ನಾಲ್ಕೈದು ಜನ ಇದರ ಕೆಲಸದಲ್ಲಿ ತೊಡಗಿದ್ದಾರಂತೆ.

ಸಿನಿಮಾದ ಕಥೆ
ಒಬ್ಬ ಸಾಮಾನ್ಯ ವ್ಯಕ್ತಿಯ ರೋಚಕ ಬದುಕು ಇದಾಗಿದೆಯಂತೆ. 20 ವರ್ಷದ ಹುಡುಗ ಮತ್ತು 15 ವರ್ಷದ ಹುಡುಗಿಯ ಪ್ರೇಮ ಕಥೆ ಸಿನಿಮಾದಲ್ಲಿದೆಯಂತೆ.


Click it and Unblock the Notifications











