Don't Miss!
- News
ರಾಜ್ಯದಲ್ಲಿ ರೈಲು ಯೋಜನೆಗಳಿಗೆ ಹೆಚ್ಚಿನ ಹಣದ ಭರವಸೆ
- Finance
UPI Transactions in January 2023 : ಜನವರಿಯಲ್ಲಿ 8 ಬಿಲಿಯನ್ ಯುಪಿಐ ವಹಿವಾಟು, ಎಷ್ಟು ಮೌಲ್ಯ?
- Sports
ಅಹ್ಮದಾಬಾದ್ನಲ್ಲಿ ಶುಬ್ಮನ್ ಅಬ್ಬರ: ಅಪರೂಪದ ಸಾಧನೆ ಮಾಡಿದ ಗಿಲ್
- Automobiles
ಭಾರತದಲ್ಲಿ ಶೀಘ್ರವೇ ಸಿಗಲಿದೆ ಟಾಟಾ ಆಲ್ಟ್ರೊಜ್ ರೇಸರ್: ಎಲ್ಲರೂ ಮೆಚ್ಚುವ ವೈಶಿಷ್ಟ್ಯಗಳಿವೆ..!
- Lifestyle
Horoscope Today 2 Feb 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್; ಇದು ಟೆಕ್ ಲೋಕದ ಅಚ್ಚರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಫುಟ್ ಪಾತ್ ಮೇಲೆ ಹೋಗುತ್ತಿದ್ದವನಿಗೆ ಬಂದು ಗುದ್ದಿದ್ದಾರೆ':'ಕುರುಕ್ಷೇತ್ರ' ವಿರುದ್ಧ 'ಕೆಂಪೇಗೌಡ'ನ ಬೇಸರ
Recommended Video
ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲಗಳೊಂದಿದೆ ತೆರೆಗೆ ಬರುತ್ತಿರುವ ಸಿನಿಮಾ ಕುರುಕ್ಷೇತ್ರ. ಬಹು ತಾರಾಗಣದ ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾಗಾಗಿ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಆದ್ರೆ ಸಿನಿಮಾ ರಿಲೀಸ್ ಡೇಟ್ ವಿಚಾರವಾಗಿ ಅಭಿಮಾನಿಗಳಲ್ಲಿ ಭಾರಿ ಗೊಂದಲ ಎದುರಾಗಿತ್ತು. ಮತ್ತೊಂದೆಡೆ ಸಣ್ಣ ಸಿನಿಮಾಗಳ ಪರಿಸ್ಥಿತಿ ಸಂಕಷ್ಟಟದಲ್ಲಿ ಸಿಲುಕಿವೆ.
ಕುರುಕ್ಷೇತ್ರ ಇವತ್ತು ಬರುತ್ತೆ ನಾಳೆ ಬರುತ್ತೆ ಎಂದು ಹೇಳುತ್ತ ಫೈನಲಿ ವರಮಹಾಲಕ್ಷ್ಮಿಗೆ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಈ ರಿಲೀಸ್ ಡೇಟ್ ಈಗ ಆಗಸ್ಟ್ 9ಕ್ಕೆ ತೆರೆಗೆ ಬರುತ್ತಿರುವ ಸಿನಿಮಾಗಳ ಮೇಲೆ ಪರಿಣಾಮ ಬೀರಿದೆ. ಕುರುಕ್ಷೇತ್ರ ರಿಲೀಸ್ ಗೊಂದಲದ ನಡುವೆ ಕೆಂಪೇಗೌಡ-2 ಸಿನಿಮಾ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದೆ.
ಕಪಾಳಕ್ಕೆ
ಹೊಡೆದರು,
ಕೀಳಾಗಿ
ನೋಡಿದರು,
ಆಡಿಕೊಂಡರು
ಆದರೂ
ಎದ್ದು
ಬಂದ್ರು
ಕೋಮಲ್
ಕುರುಕ್ಷೇತ್ರ ದಿಢೀರನೆ ರಿಲೀಸ್ ಡೇಟ್ ಬದಲಾಯಿಸಿದ ಪರಿಣಾಮ ಆಗಸ್ಟ್ 9ಕ್ಕೆ ರಿಲೀಸ್ ಆಗುತ್ತಿರುವ ಕೋಮಲ್ ಅಭಿನಯದ 'ಕೆಂಪೇಗೌಡ-2' ಸಿನಿಮಾಗೆ ದಿಕ್ಕುತೋಚದಂತಾಗಿದೆ. ಸುಮಾರು ಮೂರು ವರ್ಷದ ನಂತರ ತೆರೆಮೇಲೆ ಬರುತ್ತಿರುವ ಕೋಮಲ್ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟಿವಿ 9 ಕನ್ನಡ ವಾಹಿನಿ ಜೊತೆ ಮಾತನಾಡಿದ ನಟ ಕೋಮಲ್ ಫುಟ್ ಪಾತ್ ನಲ್ಲಿ ಹೋಗುತ್ತಿದ್ದವನಿಗೆ ಬಂದು ಗುದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುರುಕ್ಷೇತ್ರ v/s ಕೆಂಪೇಗೌಡ
ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಕುರುಕ್ಷೇತ್ರ ಆಗಸ್ಟ್ 9ಕ್ಕೆ ದೇಶ ಮತ್ತು ವಿದೇಶದಲ್ಲಿ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ಕುರುಕ್ಷೇತ್ರ ರಿಲೀಸ್ ಆಗುತ್ತಿದೆ. ಕುರುಕ್ಷೇತ್ರ ರಿಲೀಸ್ ದಿನವೆ ನಟ ಕೋಮಲ್ ಅಭಿನಯದ ಬಹು ನಿರೀಕ್ಷೆಯ 'ಕೆಂಪೇಗೌಡ-2' ಸಿನಿಮಾ ತೆರೆಗೆ ಬರುತ್ತಿದೆ. 'ಕುರುಕ್ಷೇತ್ರ' ಆಗಸ್ಟ್ 2ಕ್ಕೆ ತೆರೆಗೆ ಬರುತ್ತೆ ಎಂದು ಅನೌನ್ಸ್ ಮಾಡಿದ ನಂತರ ಕೋಮಲ್ ಆಗಸ್ಟ್ 9ಕ್ಕೆ ತಮ್ಮ ಚಿತ್ರದ ರಿಲೀಸ್ ಡೇಟ್ ಫೈನಲ್ ಮಾಡಿದ್ದಾರೆ. ಸಣ್ಣ ಚಿತ್ರದ ಮೇಲಿನ ದೊಡ್ಡ ಚಿತ್ರದ ಸವಾರಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
'ಇಬ್ಬರು
ಕೆಂಪೇಗೌಡ
ಇದರಲ್ಲಿ
ಒರಿಜಿನಲ್
ಯಾರು'?

ಅಸಮಾಧಾನ ಹೊರಹಾಕಿದ ಕೋಮಲ್
"ನಾನಾಗೆ ಹುಡ್ಕೊಂಡು ಹೋಗಿ ಅವರ ಗಾಡಿ ಹತ್ರ ಬಿದ್ದಿದ್ರೆ ಅದೂ ನನ್ನ ತಪ್ಪು ಆಗುತ್ತಿತ್ತು. ಆದ್ರೀಗ ನಾನಾಗೆ ಫುಟ್ ಪಾತ್ ನಲ್ಲಿ ನಡ್ಕೊಂಡು ಹೋಗ್ತಿದ್ದೆ ಅವರಾಗೆ ಬಂದು ಹಿಂದೆಯಿಂದ ಗುದ್ದಿದ್ದಾರೆ. ಆದ್ರೆ ಪರವಾಗಿಲ್ಲ. ಜನರಿಗೆ ಯಾವುದು ಇಷ್ಟವಾಗುತ್ತೋ ಆ ಸಿನಿಮಾ ನೋಡುತ್ತಾರೆ. ಅವರ ಸಿನಿಮಾನೆ ಮೊದಲು ನೋಡಿ ನಂತರ ನನ್ನ ಸಿನಿಮಾ ನೋಡಲಿ" ಎಂದು ಕೋಮಲ್ ಹೇಳಿದ್ದಾರೆ.

ದೊಡ್ಡವರಿಗೆ ಹೇಳುವಷ್ಟು ಮಟ್ಟಕ್ಕೆ ಬೆಳೆದಿಲ್ಲ
"ಈ ಬಗ್ಗೆ ದೊಡ್ಡವರ ಜೊತೆ ಮಾತನಾಡಲು, ಅವರಿಗೆ ಹೇಳುವಷ್ಟು ನಾವು ಬೆಳೆದಿಲ್ಲ. ನನ್ನ ಕಡೆಯಿಂದ ಏನು ತಪ್ಪು ಇಲ್ಲ. ಆದ್ರೀಗ ಹೋಗಿ ಹೇಳಿದ್ರು ಕೇಳುವಂತ ಪರಿಸ್ಥಿತಿಯಲ್ಲಿ ಇರವುದಿಲ್ಲ. ಹಾಗಾಗಿ ದೇವರ ಮೇಲೆ ಭಾರ ಹಾಕಿ ಸಿನಿಮಾ ರಿಲೀಸ್ ಮಾಡುತ್ತೇನೆ. ಜನರಿಗೆ ಸಿನಿಮಾ ಇಷ್ಟ ಆಯ್ತು ಎಂದರೆ ಖಂಡಿತ ಪ್ರೋತ್ಸಾಹ ಮಾಡುತ್ತಾರೆ. ದೊಡ್ಡ ನಿರ್ಮಾಪಕರು ಎಂದ ಮೇಲೆ ಏನು ಮಾಡಲಿಕ್ಕೆ ಆಗಲ್ಲ" ಎಂದು ಕೋಮಲ್ ಹೇಳಿದ್ದಾರೆ.
'ಗುಬ್ಬಿ
ಮೇಲೆ
ಬ್ರಹ್ಮಾಸ್ತ್ರ'
ಬಿಟ್ಟ
ಮುನಿರತ್ನ
'ಕುರುಕ್ಷೇತ್ರ

ದರ್ಶನ್ ಜೊತೆ ತುಂಬಾ ಸಿನಿಮಾ ಮಾಡಿದ್ದೇನೆ
ದರ್ಶನ್ ಜೊತೆ ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇಬ್ಬರದ್ದು ಸೂಪರ್ ಹಿಟ್ ಕಾಂಬಿನೇಶನ್. ಕುರುಕ್ಷೇತ್ರ ಚಿತ್ರತಂಡ ಮೊದಲೇ ಆಗಸ್ಟ್ 9ಕ್ಕೆ ರಿಲೀಸ್ ಮಾಡುವುದಾಗಿ ಹೇಳಿದ್ರೆ ಖಂಡಿತ ಆಗಸ್ಟ್ 9ಕ್ಕೆ ತಮ್ಮ ಸಿನಿಮಾ ರಿಲೀಸ್ ಮಾಡುತ್ತಿರಲ್ಲಿಲ್ಲ. ಯಾಕಂದ್ರೆ ದೊಡ್ಡ ಸಿನಿಮಾ. ದೊಡ್ಡ ಮಟ್ಟದ ಸ್ಟಾರ್ ಕಾಸ್ಟ್ ಇರುವ ಸಿನಿಮಾ. ಹಾಗಾಗಿ 9ಕ್ಕೆ ಡೇಟ್ ಫಿಕ್ಸ್ ಮಾಡಿದೆ. ಆದ್ರೆ 15ಕ್ಕೆ ರಿಲೀಸ್ ಮಾಡಲು ತೆಲುಗಿನ 'ಸಾಹೋ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಹಾಗಾಗಿ ಒಂದು ವಾರಕ್ಕು ಮೊದಲೆ ಸಿನಿಮಾ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ವಿ. ಆದ್ರೀಗ ಕುರುಕ್ಷೇತ್ರ ಆಗಸ್ಟ್ 9ಕ್ಕೆ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಹಿಂದಕ್ಕು ಹೋಗಲು ಸಾಧ್ಯವಾಗುತ್ತಿಲ್ಲ, ಮುಂದಕ್ಕು ಬರ್ಲಿಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ ನಟ ಕೋಮಲ್.